ಮಧುಗಿರಿ: ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಅದ್ಧೂರಿಯ ತೆಪ್ಪೋತ್ಸವವು ನಾಳೆ (ಜನವರಿ 24 ರಂದು) ಸಂಜೆ ತಾಲೂಕಿನ ಕೆರಗಳಪಾಳ್ಯ ಗ್ರಾಮದ ಬಳಿಯ ಚೋಳೆನಹಳ್ಳಿ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಚೋಳೆನಹಳ್ಳಿ ಕೆರೆಯ ಏರಿಯ ಮೇಲೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತೆಪ್ಪೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು ಗ್ರಾಮದೇವತೆ ಶ್ರೀ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸುವಂತೆ ಕೆರೆ ಅಚ್ಚುಕಟ್ಟು ರೈತರು ಹಾಗೂ ಭಕ್ತರ ಮನವಿಗೆ ಈ ಹಿಂದೆ ಮಾತು ಕೊಟ್ಟಂತೆ ಎಷ್ಟೇ ಖರ್ಚಾದರೂ ಸರಿ ದೇವಿಯ ತೆಪ್ಪೋತ್ಸವ ಸೇವೆ ಮಾಡಿಸುವ ಉದ್ದೇಶದಿಂದ ಪುತ್ರ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರನ ನೇತೃತ್ವದಲ್ಲಿ ಈ ಕಾರ್ಯಕ್ರಮ ‘ಹಮ್ಮಿಕೊಂಡಿದ್ದು ಭಕ್ತರು ಸಹ ಸ್ರಾರು ಸಂಖ್ಯೆ ಯಲ್ಲಿ ಬರಲಿದ್ದು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೆರೆ ತುಂಬಿ ಸಮೃದ್ಧಿಯಾಗಲಿ ಎಂದು ದೇವಿಯಲ್ಲಿ ಬೇಡಿಕೊಳ್ಳೋಣ ಎಂದರು.
ಕಾಶಿ ಪುರೋಹಿತರಿಂದ ಗಂಗಾರತಿ: ಮೈಸೂರು ದಸರಾ ಹಾಗೂ ಹಾಸನ ಹಾಸನಾಂಬ ದೇವರ ಕಾರ್ಯಕ್ರಮದಲ್ಲಿ ಇರುವಂತೆ ಇಡೀ ಪಟ್ಟಣಕ್ಕೆ ದೀಪಾ ಲಂಕಾರ ಮಾಡಲಾಗಿದೆ. ಕೆರೆ ಬಳಿಯೂ ಸುತ್ತಲೂ ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾ ಗಿದೆ. ತೆಪ್ಪೋತ್ಸವ ನಡೆಯುವ ಮುನ್ನ ಬೆಳಗ್ಗೆ – 11 ಗಂಟೆಗೆ ಬೆಳ್ಳಿರಥದಲ್ಲಿ ದೇವಿಯನ್ನು ಮೆರವಣಿಗೆ ಮೂಲಕ ಕೆರೆ ಬಳಿಗೆ ತರಲಾಗುತ್ತದೆ. ಸಂಜೆ 6 ಗಂಟೆಯಿಂದ ಆರಂಭವಾಗುವ ಧಾರ್ಮಿಕ ಕಾರ್ಯಗಳಲ್ಲಿ ವಿಶಿಷ್ಟವಾಗಿ ಕಾಶಿಯಿಂದ ಬರುವ ಪುರೋ ಹಿತರು 45 ನಿಮಿಷಗಳ ಕಾಲ ಗಂಗಾರತಿ ಯನ್ನು ಮಾಡಲಿದ್ದಾರೆ. ” ಎಂದರು.
ಮುಂದುವರೆದು ಮಾತನಾಡುತ್ತಾ ಇದೊಂದು ಐತಿಹಾಸಿಕ ಕ್ಷಣವಾಗಿದ್ದು ಧರ್ಮ, ಪರಂಪರೆ ಹಾಗೂ ಸಂಪ್ರದಾ ಯಗಳನ್ನು ಉಳಿಸಿ ಬೆಳೆಸಲು ದೇಗುಲದ ಬಳಿ ಕಾರ್ಯ ಕ್ರಮ ವೀಕ್ಷಿಸಲು ಎಲ್ಇಡಿ ಸ್ಟೀನ್ ಅಳವಡಿಸಿ ಸುಮಾರು 15 ಸಾವಿರ ಭಕ್ತರಿಗೆ ಅನ್ನ ಪ್ರಸಾದ ಹಾಗೂ ಸಂಜೆ 10 ಸಾವಿರದಷ್ಟು ಲಾಡು ವಿತರಿಸಲಾಗುತ್ತದೆ ಎಂದರು.ತೇಲುವ ವೇದಿಕೆ: ಕೆರೆಯಲ್ಲಿ ತೆಪ್ಪೋತ್ಸವ ನಂತರ ತೇಲುವ ( ಫ್ಲೋಟಿಂಗ್ ಸ್ಟೇಜ್) ವೇದಿಕೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು,ಕಾರ್ಯ ಕ್ರಮ ಯಶಸ್ವಿಯಾಗಲು ನಮ್ಮ ತಂಡದ ಸ್ನೇಹಿತರು, ಅಧಿಕಾರಿಗಳು ಜೊತೆಯಾಗಿದ್ದು ಎಲ್ಲರ ಸಹಕಾರ ಕೋರಿದರು.
50 ವರ್ಷದ ನಂತರ ತೆಪ್ಪೋತ್ಸವ: ರಾಜೇಂದ್ರಗ್ರಾಮ ದೇವತೆ ಶ್ರೀ ದಂಡಿನ ಮಾರಮ್ಮನ ತೆಪ್ಪೋತ್ಸವು 1972 ರಲ್ಲಿ ನಡೆದಿದ್ದು ಕಾರಣಾಂತರದಿಂದ ನಿಂತಿತ್ತು. ಕ್ಷೇತ್ರಕ್ಕೆ ಒಳಿತಾಗುವ ಬಗ್ಗೆ ಹಿರಿಯರು ಸಲಹೆ ನೀಡಿದ ಕಾರಣ ಹಾಗೂ ಸಚಿವರು ಕಳೆದ ವರ್ಷ ಗಂಗಾಪೂಜೆ ಮಾಡುವಾಗ ನೀಡಿದ ಮಾತಿನಂತೆ ನಮ್ಮ ತಂಡದ ಸ್ವಂತ ಖರ್ಚಿನಲ್ಲೇ ದೇವಿಯ ಸೇವೆ ಮಾಡಲು ಮನಸ್ಸು ಮಾಡಿದ್ದೇವೆ. ಇದಕ್ಕಾಗಿ ಕಳೆದ 40 ದಿನದಿಂದ ತಯಾರಿ ನಡೆಸಿದ್ದು ಕನಿಷ್ಟ 500 ಜನ ಕೂರುವ ವೇದಿಕೆಯನ್ನು ಕೆರೆ ಕೋಡಿಯ ಮೇಲೆ ಕೃತಕವಾಗಿ ನಿರ್ಮಾಣ ಮಾಡಲಾಗಿದೆ. ಕೆರೆ ಏರಿಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ನಿಂತು ತೆಪ್ಪೋತ್ಸವ ವೀಕ್ಷಣೆಗೆ ಪ್ರತ್ಯೇಕ ಹಾಗೂ ಸುರಕ್ಷಿತ ಸ್ಥಳ ನಿಗದಿಗೊಳಿಸಿದ್ದೇವೆ.
ತೆಪ್ಪೋತ್ಸವ ನಡೆಸಲು ನೂರಾರು ಕೃತಕ ದೋಣಿಯನ್ನು ತಯಾರಿಸಿದ್ದು 500 ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ರಕ್ಷಣೆಗಾಗಿ ಮೀನುಗಾರರ ತಂಡ ಕೂಡ ತೆಪ್ಪದ ಸುತ್ತಲೂ ರಕ್ಷಣೆಗಾಗಿ ಕಾವಲಿರಲಿದ್ದು, ನಿರ್ಭಯವಾಗಿ ತೆಪ್ಪೋತ್ಸವ ಕಾರ್ಯ ವೀಕ್ಷಿಸಬಹುದು ಎಂದರು.ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಪೂಜ್ಯರಾದ ಶ್ರೀ ಸಿದ್ಧ ಲಿಂಗಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ ಮಾಜಿ ಸಚಿವ ಸಚಿವ ವೆಂಕಟರಮಣಪ್ಪ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಮುಖಂಡರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ , ಮಾಜಿ ಸಚಿವ ವೆಂಕಟಮಣಪ್ಪ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜು ನಾಥ್, ಮಾಜಿ ಅಧ್ಯಕ್ಷನಂಜುಂಡಯ್ಯ, ತಿಮ್ಮರಾಜು, ತುಂಗೋಟಿರಾಮಣ್ಣ, ನಾರಾಯಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಡಿ ವೈ ಎಸ್ ಪಿ ಮಂಜುನಾಥ್ , ಪಿಎಸೈ ವಿಜಯ ಕುಮಾರ್, ಎಂಜಿನಿ ಯರ್ ಮಂಜುಕಿರಣ್, ಹಾಗೂ ತಪ್ಪೋತ್ಸವ ವೇದಿಕೆಯ ಸಮಿತಿ ಸದಸ್ಯರು ಜೊತೆಗಿದ್ದರು.