ಬೆಳಗಾವಿ: ಮೂಡಾ ಹಗರಣ ಪ್ರಸ್ತಾಪವಾಗುತ್ತಿದ್ದಂತೆ ಗರಂ ಆಗಿರುವ ಸಚಿವ ಬೈರತಿ ಸುರೇಶ್ ಅವರು, ಈ ವಿಚಾರದಲ್ಲಿ ಪ್ರತಿಪಕ್ಷ ರಾಜಕೀಯ ಮಾಡ್ತಿದೆ. ಕಳೆದ ಭಾರಿಯೇ ಅದರ ಬಗ್ಗೆ ಚರ್ಚೆಯಾಗಿದೆ. ಮೂಡಾ ವಿಚಾರವಾಗಿ ನಾವು ಈಗಾಗಲೇ ಸಮಿತಿ ರಚಿಸಿದ್ದೇವೆ. ರಿಟೈರ್ಡ್ ಜಡ್ಜ್ ನೇತ್ರತ್ವದಲ್ಲಿ ಸಮಿತಿ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಕೇಸ್ ನಡೀತಿದೆ, ನಾವ್ ಮತ್ತೇನ್ ಮಾಡೋಕಾಗುತ್ತೆ? ನಾವೇನು ಹೋಗಿ ನೇಣು ಹಾಕೋಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸದನದಲ್ಲಿ ಮುಡಾ ಹಗರಣದ ಕುರಿತು ಮಾತನಾಡಿದ ಅವರು, ಮೂಡಾ ಹಗರಣ ವಿಚಾರದಲ್ಲಿ ಪ್ರತಿಪಕ್ಷ ರಾಜಕೀಯ ಮಾಡ್ತಿದೆ. ಕಳೆದ ಭಾರಿಯೇ ಅದರ ಬಗ್ಗೆ ಚರ್ಚೆಯಾಗಿದೆ. ಮೂಡಾ ವಿಚಾರವಾಗಿ ನಾವು ಈಗಾಗಲೇ ಸಮಿತಿ ರಚಿಸಿದ್ದೇವೆ. ರಿಟೈರ್ಡ್ ಜಡ್ಜ್ ನೇತ್ರತ್ವದಲ್ಲಿ ಸಮಿತಿ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಕೇಸ್ ನಡೀತಿದೆ, ನಾವ್ ಮತ್ತೇನ್ ಮಾಡೋಕಾಗುತ್ತೆ? ನಾವೇನು ಹೋಗಿ ನೇಣು ಹಾಕೋಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಡಳಿತ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಹಗರಣಗಳ ಅಸ್ತ್ರ ಬಳಸಲು ಮುಂದಾಗಿದೆ. ಮುಡಾ ಹಗರಣ ಪ್ರಸ್ತಾಪ ಮಾಡುತ್ತಿದ್ದಂತೆ ಸಚಿವ ಬೈರತಿ ಸುರೇಶ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸಹಕಾರ, ಸಲಹೆ ಇದ್ದರೆ ಸರ್ಕಾರಕ್ಕೆ ಕೊಡಲಿ, ಅದನ್ನ ಬಿಟ್ಟು ರಾಜಕೀಯ ಮಾಡದು ಬೇಡ. ನಾವು ಚರ್ಚೆ ಮಾಡುವುದಕ್ಕೆ ರೆಡಿ ಇದ್ದೇವೆ. ಸಮಸ್ಯೆ ಬಗೆಹರಿಸುವುದಕ್ಕೆ ರೆಡಿ ಇದ್ದೇವೆ. ಯಾವುದೇ ಚರ್ಚೆಗೆ ಸರ್ಕಾರ ಸಿದ್ದ ಇದೆ. ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರ ಪರಿಹಾರ ನೀಡಲು ರೆಡಿ ಇದೆ. ಅಂತಹ ಕೆಲಸವನ್ನು ವಿಪಕ್ಷಗಳು ಮಾಡಿದರೆ ಸ್ವಾಗತ ಮಾಡ್ತೀವಿ. ಆದರೆ ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಆಪಾದನೆ ಮಾಡಿದರೆ ನಾವು ರೆಡಿ ಇರುವುದಿಲ್ಲ. ಅದನ್ನ ಜನತೆ ಕೂಡ ಕ್ಷಮಿಸುವುದಿಲ್ಲ.
ಸುಮ್ನೆ ಬಿಜೆಪಿ ಜೆಡಿಎಸ್ ಅವರಿಗೆ ಮಾಡೋದಿಕ್ಕೆ ಬೇರೆ ಕೆಲಸ ಇಲ್ಲ. ಅದೇ ಕಾರಣಕ್ಕೆ ಹೀಗೆಲ್ಲ ಮಾಡ್ತಾ ಇದ್ದಾರೆ. ಉತ್ತರ ಕರ್ನಾಟಕ ಸಮಸ್ಯೆ, ರೈತರ ಸಮಸ್ಯೆ ಅಂತಾರೆ ಯಾವುದನ್ನು ಚರ್ಚೆ ಮಾಡೋದಿಲ್ಲ. ಅದರ ಬಗ್ಗೆ ಸರ್ಕಾರದ ಗಮನ ಸೆಳೆಯೋದು ಬಿಟ್ಟು ರಾಜಕೀಯಕ್ಕೋಸ್ಕರ ಹೀಗೆ ಮಾಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಇದೆ, ಉತ್ತರ ಕರ್ನಾಟಕದ ಸಮಸ್ಯೆ ಇದೆ ಅದಕ್ಕೊಂದು ಪರಿಹಾರ ಹುಡುಕುವ ಬದಲು ಹೀಗೆ ಮಾಡ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಸುರೇಶ್ ಆಕ್ರೋಶ ಹೊರಹಾಕಿದರು.