ಹೇಮಂತ್ ಹೆಗ್ಡೆ ನಿರ್ದೇಶನದ ಬಹು ನಿರೀಕ್ಷಿತ “ನಾ ನಿನ್ನ ಬಿಡಲಾರೆ ಘೋಸ್ಟ್ 2.0” ಹಾರಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತಿಚೆಗಷ್ಟೇ ಸಕಲೇಶಪುರ ದ ಸುತ್ತ ಮುತ್ತ ಮುಕ್ತಾಯಗೊಂಡಿತು. ಸುಮಾರು ಹತ್ತು ದಿನಗಳ ಈ ಶೆಡ್ಯೂಲ್ ನಲ್ಲಿ ಅಪೂರ್ವ ಮತ್ತು ಹೇಮಂತ್ ಬಾಗವಹಿಸಿದ್ದ ಹಲವು ರೋಚಕ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಇದಲ್ಲದೆ ಶಂಕರ್ ಅಶ್ವಥ್ ಹಾಗೂ ಸುಚೇಂದ್ರ ಪ್ರಸಾದ್ ಭಾಗವಹಿಸಿದ ಹಲವು ಸನ್ನಿವೇಶಗಳ ಚಿತ್ರೀಕರಣ ಸಹ ನಡೆಯಿತು.
ಹೇಮಂತ್ ಹೆಗ್ಡೆ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಪೂರ್ವ, ಕಿಶೋರ್, ಶರತ್ ಲೋಹಿತಾಶ್ವ , ಭಾವನ ನಾಜರ್ ಮುಂತಾದ ಕಲಾವಿದರ ದಂಡೇ ಇದೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಗ್ರಾಫಿಕ್ಸ್ ಸಿಂಗಾಪುರದ ಸ್ಟುಡಿಯೋ ಒಂದರಲ್ಲಿ ತಯಾರಾಗಲಿದೆ. ಚಿತ್ರದ ಮೂರನೇ ಹಂತದ ಚಿತ್ರೀಕರಣ ಫೆಬ್ರವರಿ ಯಲ್ಲಿ ಶುರುವಾಗಲಿದೆ. ಚಿತ್ರ ಜೂನ್ ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.