ಭೂಪಾಲ್: ನಿಂತಿದ್ದ ಬಸ್ಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶ ಜಬ್ಬಲ್ ಪುರದ ಪೆಹರಾ ಟೋಲ್ ನಾಕಾಬಳಿ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ್ನ ಲಕ್ಷ್ಮಿ ಬಡಾವಣೆಯ ಬಾಲಚಂದ್ರಗೌಡರ್ ಬಸವರಾಜ್ ಮೊರತಿ, ಸುನೀಲ್ ಶಾನ್ಬಾಳ್ ಸೇರಿದಂತೆ ಆರು ಮಂದಿ ಎಂದು ಗುರುತಿಸಲಾಗಿದೆ. ಮೃತರು ಹಾಗೂ ಗಾಯಾಳುಗಳು ಕಳೆದೆರಡು ದಿನಗಳ ಹಿಂದೆ ಗೋಕಾಕ್ನಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಕ್ರೂಸರ್ನಲ್ಲಿ ಪ್ರಯಾಣ ಬೆಳೆಸಿದ್ದರು ಎಂದು ಹೇಳಲಾಗಿದೆ.