ನವದೆಹಲಿ: ಖಲಿಸ್ತಾನ್ ಪರ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 11ರಂದು ನಡೆಯಲಿದೆ. ವಿಚಾರಣೆಗೆ ತಡೆಯಾಜ್ಞೆ ನೀಡಿ ನಾಲ್ವರು ಆರೋಪಿಗಳಿಗೂ ಜಾಮೀನು ನೀಡಲಾಗಿದೆ.
ಈ ನಾಲ್ವರು ಭಾರತೀಯರನ್ನು ಕರಣ್ ಬ್ರಾರ್, ಅಮನ್ದೀಪ್ ಸಿಂಗ್, ಕಮಲ್ಪ್ರೀತ್ ಸಿಂಗ್ ಮತ್ತು ಕರಣ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ 2024ರ ನವೆಂಬರ್ ನಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಹತ್ಯೆ ಆರೋಪ ಹೊತ್ತಿದ್ದವರು ಕೆನಡಾದ ಸುಪ್ರೀಂ ಕೋರ್ಟ್ನಲ್ಲಿ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಿದ್ದರು.
ಹರ್ದೀಪ್ ಸಿಂಗ್ ನಿಜ್ಜರ್ ನನ್ನು 2023ರ ಜೂನ್ ನಲ್ಲಿ ಕೆನಡಾದ ಸರ್ರೆಯಲ್ಲಿ ಕೊಲೆ ಮಾಡಲಾಗಿತು. ಕೊಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತು. ಈ ಕೊಲೆಗೆ ಸಂಬಂಧಿಸಿದಂತೆ, ಆಗಿನ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತ ಸರ್ಕಾರದ ಏಜೆಂಟರ ಮೇಲೆ ಆರೋಪ ಹೊರಿಸಿದ್ದರು. ಭಾರತ ಸರ್ಕಾರ ಈ ಆರೋಪವನ್ನು ಆಧಾರರಹಿತ ಎಂದು ಕರೆದಿತ್ತು. ಟ್ರುಡೊ ಅವರ ಈ ಹೇಳಿಕೆಯ ನಂತರ, ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳು ಸಾಕಷ್ಟು ಹದಗೆಟ್ಟಿತ್ತು.
ಪರಿಸ್ಥಿತಿ ಜಟಿಲವಾಗುತ್ತಿದ್ದಂತೆ ಜಸ್ಟಿನ್ ಟ್ರುಡೋ ವಿರುದ್ಧ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿತ್ತು. ಹೀಗಾಗಿ ಮೊನ್ನೆಯಷ್ಟೇ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.