ಬೆಂಗಳೂರು: ಇಂದಿನಿಂದ ಹೊಸ ಕಾನೂನು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಎಎಸ್ಐ ಮಟ್ಟದ ಅಧಿಕಾರಿಯನ್ನು ದಾಖಲೆಗಳನ್ನು ನೋಡಿಕೊಳ್ಳಲು ನಿಯೋಜಿತ ಅಧಿಕಾರಿಯನ್ನು ನೇಮಿಸಬೇಕೆಂದು ರಾಜ್ಯ ಸರ್ಕಾರದ ಗೃಹ ಇಲಾಖೆ ಆದೇಶಿಸಿದೆ.
ಮುಂದೆ ಸೆಕ್ಷನ್ (57ಬಿಎಂಎಸ್ಎಸ್) ಪ್ರಕಾರ ಪೊಲೀಸ್ ಠಾಣಾಮಟ್ಟದಲ್ಲಿ ಬಂಧಿತ ನಾದ ವ್ಯಕ್ತಿಯ ದಾಖಲಾತಿಗಳನ್ನು ಎಎಸ್ಐ ಮಟ್ಟದ ಅಧಿಕಾರಿ ನಿರ್ವಹಣೆ ಮಾಡಬೇಕೆಂದು ಹಾಗೂ ಈ ನಿರ್ವಹಣೆ ಕೆಲಸಕ್ಕೆ ಪೊಲೀಸ್ ಕಾನ್ಸ್ಟೇಬಲ್ ಅಥವಾ ಹೆಡ್ ಕಾನ್ಸ್ಟೇಬಲ್ ರವರನ್ನು ನೇಮಕ ಮಾಡಲಾಗುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿಯೂ ಡಿಜಿಟಲ್ ಮೂಲಕ ಆರೋಪಿಯ ಎಲ್ಲಾ ವಿವರಗಳನ್ನು ಅಂದರೆ ಆರೋಪಿಯ ಹೆಸರು, ವಿಳಾಸ ಮತ್ತು ಯಾವ ಪ್ರಕಾರದ ಗುಂಹ್ನೆಯಲ್ಲಿ ಸಿಲುಕಿರುತ್ತಾನೆ ಎಂದು ನಮೂದಿಸಿರುವ ಮಾಹಿತಿಯನ್ನು ಜಿಲ್ಲಾಮಟ್ಟದ ಎಸ್ ಪಿ ಕಚೇರಿ ಮತ್ತು ಕಮಿಷನರ್ ಗಳ ಗಳಿಗೆ ಮಾಹಿತಿಯನ್ನು ಒದಗಿಸಬೇಕೆಂದು ಆದೇಶಿಸಿರುತ್ತದೆ.
60 ವರ್ಷದ ಮೇಲ್ಪಟ್ಟ ವ್ಯಕ್ತಿಯನ್ನು ಅಥವಾ ಮೂರು ವರ್ಷಕ್ಕಿಂತ ಕೆಳಗಿರುವ ಅಪರಾಧ ಮಾಡಿರುವ ವ್ಯಕ್ತಿಯನ್ನು ಬಂಧಿಸಬೇಕಾದರೆ ಡಿವೈಎಸ್ಪಿ ಅಥವಾ ಎ ಸಿ ಪಿ ಯ ಒಪ್ಪಿಗೆಯನ್ನು ಪಡೆಯಬೇಕೆಂದು ಆದೇಶಿಸಿರುತ್ತದೆ.