ಚಿಕ್ಕಬಳ್ಳಾಪುರ: ನಿರಂತರ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ, ಮನಸ್ಸಿನಲ್ಲಿ ಬರುವ ಕೀಳರಿಮೆ ಸಾಧನೆಗೆ ಅಡ್ಡಿ ಉಂಟು ಮಾಡುತ್ತೆ ಮನುಷ್ಯನ ನಿಜವಾದ ಶತ್ರು ಕೊಡ ಕೀಳರಿಮೆ, ಹಾಗಾಗಿ ವಿಧ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಬರುವ ಕೀಳರಿಮೆ ಹಾಗೂ ನಕಾರಾತ್ಮಕ ಭಾವನೆಗಳನ್ನು ತೊರೆದು ಮುನ್ನಡೆಯಬೇಕು ಆಗಲೇ ಯಶಸ್ಸು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಹೇಳಿದರು.
ಇಂದು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ”ದಿಗೋಲ್ಡನ್ ಗ್ಲೀಮ್ಸ್” ಕಾಲೇಜು ವತಿಯಿಂದ ನಡೆದ ಆಹ್ವಾನ(ಫ್ರೆಶರ್ಸ್ ಡೆ) ಕಾರ್ಯಕಮ ಉದ್ಘಾಟಿಸಿ ಮಾತನಾಡಿದರು.ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಯಶಸ್ಸಿನ ದಾರಿ ಕಠಿಣ ಅದನ್ನು ನಿರಂತರ ಶ್ರಮದಿಂದ ಸುಲಭ ಗೊಳಿಸಬಹುದು ಶಿಸ್ತನ್ನು ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳಿ ನಿಮ್ಮ ಮುಂದೆ ಬರುವ ಸಮಸ್ಯೆಗಳಿಗೆ ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಂಡು ಜೀವನ ಸಾಗಿಸಬೇಕು,
ನಿಮ್ಮ ಉಜ್ವಲ ಭವಿಷ್ಯ ಬಗ್ಗೆ ಪೋಷಕರು ಪಡುವ ಶ್ರಮ ಅಷ್ಟಿಷ್ಟಲ್ಲ ಅವರ ಕನಸನ್ನು ನನಸು ಮಾಡಲು ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ತಂತ್ರಜ್ಞಾನದ ಯುಗದಲ್ಲಿ ಹೊಸ ಹೊಸ ವಿಷಯಗಳನ್ನು ಕುರಿತು ಪ್ರಯೋಗ ನಡೆಸಬೇಕು ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆಗೆ ಗಮನ ನೀಡಬೇಕು ವಿಧ್ಯಾಭ್ಯಾಸದ ಈ ನಾಲ್ಕೈದು ವರ್ಷ ಕಷ್ಟ ಪಟ್ಟರೆ ಜೀವನದಲ್ಲಿ ಯಶಸ್ಸು ಕಾಣಬಹುದು ಮುಂದಿನ ಐವತ್ತು ವರ್ಷ ಸುಖವಾಗಿರಬಹುದು, ಇನ್ನು ವಿಧ್ಯಾರ್ಥಿಗಳು ಜ್ಞಾನ ಪಡೆಯುವ ಜೊತೆಗೆ ಕೌಶಲ್ಯಗಳ ಕಡೆ ಗಮನ ಹರಿಸಬೇಕು ನಿಮ್ಮಲೆ ಕೌಶಲ್ಯಗಳು ಅಡಗಿರುತ್ತೆ ಅದನ್ನು ಗುರುತಿಸಿ ಅದರ ಮೇಲೆ ಶ್ರಮ ವಹಿಸಿ ಯಶಸ್ಸು ಕಾಣುವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಲ್ಲಿ ಶ್ರದ್ಧೆ ಇರುತ್ತೊ ಅಲ್ಲಿ ಜ್ಞಾನ ಇರುತ್ತೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ತಾಳ್ಮೆ ಕಳೆದುಕೊಳ್ಳಬಾರದು ಸವಾಲುಗಳನ್ನು ಎದುರಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ನಿಮ್ಮದೇ ಆದ ಕೊಡುಗೆ ಸಮಾಜಕ್ಕೆ ನೀಡಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಹಾಗೂ ಶಿಕ್ಷಣ ತಜ್ಞರಾದ ಡಾ.ಎನ್.ಶಿವರಾಮ ರೆಡ್ಡಿ ಮಾತನಾಡಿ ಜೀವನದ ಪ್ರಮುಖ ಘಟ್ಟಕ್ಕೆ ತಲುಪಿದ್ದೀರಿ ನಿಮ್ಮ ಉಜ್ವಲ ಭವಿಷ್ಯಕ್ಕೆ ನೀವೇ ಯೋಚಿಸುವ ಶಕ್ತಿ ಬಂದಿದೆ ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಮುಂದೆ ಏನು ಮಾಡಬೇಕು ಎಂಬುದನ್ನು ಈಗಿನಿಂದಲೇ ಸಿದ್ಧತೆ ನಡೆಸಿ ಸಮಯವನ್ನು ವ್ಯರ್ಥ ಮಾಡಬೇಡಿ ಶಿಕ್ಷಣ ಸಂಸ್ಥೆಗಳು ಉತ್ತಮ ಅಂಕಗಳನ್ನು ಪಡೆಯಲು ಮಾತ್ರ ನಿಮ್ಮನ್ನು ತಯಾರು ಮಾಡುತ್ತೆ ಹಾಗಾಗಿ ಪದವಿ ಶಿಕ್ಷಣ ಮುಗಿಸಿದ ನಂತರ ಉದ್ಯೋಗ ಗಿಟ್ಟಿಸಲು ಏನೆಲ್ಲಾ ತಯಾರಿ ಮಾಡಬೇಕು ಅದರ ಬಗ್ಗೆ ಯೋಚಿಸಬೇಕು ಪ್ರಸ್ತುತ ದಿನಗಳಲ್ಲಿ ಉದ್ಯೋಗ ಗಿಟ್ಟಿಸೊದು ಅಷ್ಟು ಸುಲಭವಲ್ಲ,
ಹಾಗಾಗಿ ವಿಧ್ಯಾರ್ಥಿಗಳು ಸಂವಹನ ಕೌಶಲ್ಯ ಹಾಗೂ ಭಾಷೆಯ ಕಲಿಕೆ ಮೇಲೆ ಹೆಚ್ಚಿನ ಗಮನ ಹರಿಸಬೇಕು ಇನ್ನು ಯಶಸ್ಸಿಗೆ ಕೌಶಲ್ಯ ಬಹಳ ಮುಖ್ಯ ವಿಧ್ಯಾರ್ಥಿಗಳು ವಿಧ್ಯಾಭ್ಯಾಸದ ಜೊತೆಗೆ ಕೌಶಲ್ಯಗಳ ಕಡೆ ಗಮನ ಹರಿಸಬೇಕು ನಿರಂತರ ಪರಿಶ್ರಮ ಯಶಸ್ಸು ಗಳಿಸಲು ಸಾಧ್ಯ, ತಾನಾಗಿಯೇ ಉದ್ಯೋಗ ಅವಕಾಶಗಳು ಬರುತ್ತವೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮರಿಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಿಗೆ ಯಶಸ್ಸು ಕಾಣಲು ಸಾಧಿಸಲು ಆತ್ಮವಿಶ್ವಾಸ ಮುಖ್ಯ ಅದನ್ನು ಕಳೆದುಕೊಳ್ಳಬಾರದು ನಿರಂತರವಾಗಿ ಅಭ್ಯಾಸ ಮಾಡಬೇಕು ಇದರಿಂದಾಗಿ ಹೊಸ ಹೊಸ ಆಲೋಚನೆಗಳು ಬರುತ್ತೆ ಅದೇ ನಿಮ್ಮನ್ನು ಇನ್ನಷ್ಟು ಅಧ್ಯಯನ ಮಾಡುವ ಬಗ್ಗೆ ಚಿಂತನೆ ತರುತ್ತದೆ ನಿಮ್ಮ ಯಶಸ್ಸಿಗೆ ಕಾರಣವಾಗುತ್ತೆ,ನಿಮ್ಮ ಯಶಸ್ಸಿಗೆ ಕಾರಣರಾದ ಪೋಷಕರು ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಬಾಹುಬಲಿ ಹಾಗೂ ವಿಶೇಷ ಅಹ್ವಾನಿತರಾಗಿ ಬೆಂಗಳೂರು ಉ.ವಿ.ವಿ ವಾಣಿಜ್ಯ ಶಾಸ್ತ್ರ ಅಧ್ಯಯನ ಮಂಡಳಿ ಅಧ್ಯಕ್ಷ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಲಾರ ಪ್ರಾಧ್ಯಾಪಕರಾದ ಡಾ. ಎಸ್.ಮುರಳಿಧರ್ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವನ್ನು ದಿ ಗೋಲ್ಡನ್ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಸಿ.ಎಂ. ಮುನಿಕೃಷ್ಣವಹಿಸಿದ್ದರು, ಕಾಲೇಜಿನ ಆಡಳಿತಾಧಿಕಾರಿ ಆರ್ ಮೋಹನ್,ಉಪನ್ಯಾಸಕರಾದ ಪದ್ಮಾಕರ ಪಾಟೀಲ್, ಕೀರ್ತಿ ಮೇರಿ, ರಾಧ, ಟಿ.ಎಂ.ಮೋಹನ್, ಮಂಜುನಾಥ್, ಅಶ್ವಿನಿ, ಮಂಜುಳಾ,ನವೀನ್, ಪವನ್, ಶಿವಾನಂದ ಮತ್ತು ಇತರರು ಇದ್ದರು.