ನಂಜನಗೂಡು: ತಗಡೂರು ಗ್ರಾಮದಲ್ಲಿ ವಾತ್ಸಲ್ಯ ಫಲಾನುಭವಿಯಾದ ಗೌರಮ್ಮ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಮಾಡಲಾಯಿತು.
ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯರಾಮ್ ನೆಲ್ಲಿತಾಯರವರು ಗೌರಮ್ಮ ರವರಿಗೆ ಮನೆ ಹಸ್ತಾಂತರ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ನೀಡಲಾಗುತ್ತಿದೆ.
ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಆಸೆಯಂತೆ ಯಾರ ಆಸರೆ ಇಲ್ಲದ ಅಜ್ಜಿಗೆ ಒಂದು ಸೂರು ಮಾಡಿ ಅಜ್ಜಿಯ ಕೊನೆಯ ಜೀವನವು ನೆಮ್ಮದಿಯಾಗಿ ಇರಬೇಕು ಈಗಾಗಲೇ ಹಲವು ಕಷ್ಟ ಕಾರ್ಪಣ್ಯ ಗಳನ್ನು ಅನುಭವಿಸಿದ್ದು ಮುಂದಿನ ಜೀವನ ಸುಖಮಯವಾಗಿ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಂಜನಗೂಡು ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಧರ್ಮರಾಜ್ ಕೆ. ಗ್ರಾಮ ಪಂಚಾಯತಿ ಸದಸ್ಯರುಗಳಾದ ಮುದ್ದು ಮಾಡ ಶೆಟ್ಟಿ, ಸಂಗೀತ ಮೇಲ್ವಿಚಾರಕರಾದ ಉದಯ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶಮ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಮಾ, ಶ್ರೀಮತಿ ಸುಬ್ಬಮ್ಮ ಹಾಗೂ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರುಗಳು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.