ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಸರ್ಕಾರ ಹೆಚ್ಚಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದಾದರೂ ಅಧಿಕಾರಿಗಳ ನಿರ್ಲಕ್ಷದಿಂದ ಹತ್ತು ಹಲವು ಸಮಸ್ಯೆಗಳು ಕಾಡುತ್ತಿತ್ತು ಅಂತಹ ದಿವ್ಯ ಸಾಕ್ಷಿ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣ ಹೊಸಹಳ್ಳಿಯ ರಾಗಿ ಬೆಳೆದ ರೈತನ ಹೊಲದ ರಸ್ತೆಯ ಬಳಿ ಮುರಿದ ವಿದ್ಯುತ್ ಕಂಬವಾಗಿದ್ದು, ಗ್ರಾಮಸ್ಥರ ದೂರಿಗಿಲ್ಲ ಬೆಸ್ಕಾಂನವರ ಕಾಯಕಲ್ಪವಿಲ್ಲದಾಗಿದೆ ಸ್ಥಳಿಯ ಮುಖಂಡ ರಾಮಾಂಜಿನಪ್ಪ ಬೆಸ್ಕಂ ಅಧಿಕಾರಿಗಳನ್ನು ದೂರಿದರು.
ಮಾರ್ಗೋಡನಹಳ್ಳಿ ಹಾಗೂ ಚಿಕ್ಕಣ್ಣ ಹೊಸಹಳ್ಳಿಗೆ ಹಾದು ಹೋಗುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು ಈ ರಸ್ತೆಯಲ್ಲಿ ಶಾಲಾ ಮಕ್ಕಳ ಬಸ್ಸುಗಳು, ಲಾರಿ, ಕಾರು, ದ್ವಿಚಕ್ರ ವಾಹನಗಳ ಒಳಗೊಂಡಂತೆ ಪಾದಾಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವು ದರಿಂದ ಗಾಳಿ- ಮಳೆ ಹೇರಳವಾಗಿ ಬೀಸುವ ವೇಳೆ ಮುರಿದು ಬಿದ್ದ ವಿದ್ಯುತ್ ಕಂಬ ರಸ್ತೆ ಮೇಲೆ ಬಿದ್ದು ವಾಹನ ಅಪಘಾತ ಎದುರಾಗುವ ಮುನ್ನ ಈಗಲೂ ಹಾಗಲು ಬೀಳುವ ಕಂಬ ಬದಲಿಸಲು ಸಂಬಂಧ ಪಟ್ಟ ಬೆಸ್ಕಾಂ ಅಧಿಕಾರಿ ಗಳು ಸ್ಥಳೀಯ ಜನಪ್ರತಿ ನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಕಂಬವನ್ನು ಸರಿಪಡಿಸಬೇಕು ವಿದ್ಯುತ್ ಕಂಬದಿಂದ ಸಾರ್ವಜನಿ ಕರಿಗೆ ಹಾನಿಯಾದರೆ ಸಂಬಂಧ ಪಟ್ಟ ಅದಿಕಾರಿಗಳೇ ನೇರ ಹೊಣೆಯಾಗುವ ಮುನ್ನ ಎಚ್ಚೆತ್ತು ಸರಿಪಡಿಸುವುದು ಸೂಕ್ತವೆಂದರು.