ದೇವನಹಳ್ಳಿ : ಕಾಂಗ್ರೆಸ್ ಪಕ್ಷ ಬಡವರ ಸಂಕಷ್ಟಕ್ಕೆ ಶ್ರಮಿಸು ವುದಲ್ಲದೆ ಅವರ ನಿರಂತರ ಸೇವೆಗೆ ಶ್ರಮಪಡುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಗುಣವನ್ನು ಹೊಂದಿದ್ದು ಸರಳ ಸಜ್ಜನಿಕೆ ಎಲ್ಲರನ್ನು ಒಗ್ಗೂಡಿಸಿಕೊಂಡು ನಗರದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸಬಲ್ಲ ಮುನಿ ಕೃಷ್ಣ ಅವರಿಗೆ ಪುರಸಭೆ ಅಧ್ಯಕ್ಷ ಸ್ಥಾನ ಲಭಿಸಿರುವುದು ಚನ್ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಅವರು ಪ್ರಶಂಸೆ ವ್ಯಕ್ತಪಡಿ ಸಿದರು.
ದೇವನಹಳ್ಳಿಯ ಪುರಸಭೆ ಕಛೇರಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆದವ ರನ್ನು ಅಭಿನಂದಿಸಿದ ಬಳಿಕ ಮಾತನಾಡಿದರು.ನೂತನ ಪುರಸಭೆ ಅಧ್ಯಕ್ಷ ಮುನಿಕೃಷ್ಣ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಪಕ್ಷದ ಮುಖಂಡರು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇಲ್ಲಿನ ಶ್ರದ್ಧಾ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗುವುದು.
ಕ್ಷೇತ್ರದ ಶಾಸಕರು ಹಾಲಿ ಆಹಾರ ಪೂರೈಕೆ ಹಾಗೂ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ಅವರ ಸಹಕಾರದಿಂದ ಹೆಚ್ಚಿನ ಅನುದಾ ನದ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈ ಗೊಳ್ಳಲಾಗು ವುದು.ಪುರಸಭೆಯು ರಸ್ತೆ ವಿಸ್ತರಣೆ ಮತ್ತು ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಸುಧಾರಣೆಗಳಿಗೆ ಆದ್ಯತೆ ನೀಡುತ್ತೇವೆoದರು. ಕಾಂಗ್ರೆಸ್ ಪಕ್ಷದ ಯುವಮುಖಂಡ ಮುನಿರಾಜು ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.