ಬಾಗಲಕೋಟೆ: ಕಟ್ಟಿಗೆಯಿಂದ ಹೊಡೆದು ಸೆಕ್ಯೂರಿಟಿ ಗಾರ್ಡ್ನನ್ನು ಮುಖ್ಯ ಶಿಕ್ಷಕ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ರಾಧಾಕೃಷ್ಣ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ನಾಗಪ್ಪ ತೋಳಮಟ್ಟಿ ಮೃತ ಸೆಕ್ಯೂರಿಟಿ ಗಾರ್ಡ್. ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನೀರು ಕಾಯಿಸುವ ವಿಚಾರಕ್ಕೆ ಮುಖ್ಯಶಿಕ್ಷಕ ಧನರಾಜ ರಾಠೋಡ್ ಹಾಗೂ ಸೆಕ್ಯೂರಿಟಿ ಗಾರ್ಡ್ ನಾಗಪ್ಪ ತೋಳಮಟ್ಟಿ ನಡುವೆ ಜಗಳವಾಗಿದೆ. ಈ ವೇಳೆ ನಾಗಪ್ಪ ತೋಳಮಟ್ಟಿಗೆ ಧನರಾಜ ರಾಠೋಡ್ ಕಟ್ಟಿಗೆಯಿಂದ ಥಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ನಾಗಪ್ಪ ತೋಳಮಟ್ಟಿ ಮೃತಪಟ್ಟಿದ್ದಾರೆ.