ಚಂದಾಪುರ: ಛಲ ಪ್ರಸಾದ್ ಅವರು ಕೆಐಎಡಿಬಿ ಅಧ್ಯಕ್ಷರಾದ ಮೇಲೆ ಜನಪರಹಾಗೂ ಸಾಮಾಜಿಕ ಕಾರ್ಯಗಳು ಪ್ರಗತಿ ಉಂಟಾಗಿದೆ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ಬೊಮ್ಮ ಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಕೆಐಎಡಿಬಿ ಕ್ವಾರ್ಟಸ್ ಆವರಣದಲ್ಲಿ ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಕೆಐಎಡಿಬಿ ರೆಸಿಡೆನ್ಸಿಯಲ್ ಕ್ವಾರ್ಟಸ್ ವೆಲ್ಪೇರ್ ಅಸೋಸಿಯೇಷನ್ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಕ್ ಮತ್ತು ಔಟ್ ಡೋರ್ ಜಿಮ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.
ಕೆರೆ ಅಭಿವೃದ್ಧಿ, ಪಾರ್ಕ್, ಕಸ ವಿಲೇವಾರಿ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೆಐಎಡಿಬಿ ಸಂಸ್ಥೆಯು ಸಿ.ಎಸ್.ಆರ್.ಕಾರ್ಯವನ್ನು ಸಮರ್ಥವಾಗಿ ಬಳಕೆ ಮಾಡುತ್ತ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಅಭಿವೃದ್ದಿಗೆ ಪ್ರಾಮಾಣಿಕ ಶ್ರಮಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಬಿಐಎ ಅಧ್ಯಕ್ಷರಾದ ಎ.ಪ್ರಸಾದ್ ರವರು ಮಾತನಾಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಾವು ಏನೆಲ್ಲಾ ಅಭಿವೃದ್ದಿ ಕೆಲಸ ಮಾಡಿದ್ದೇವೆ ಅದಕ್ಕೆ ಮೂಲ ಪ್ರೇರಣೆ ಸಚಿವ ರಾಮಲಿಂಗಾರೆಡ್ಡಿರವರು ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಬೊಮ್ಮ ಸಂದ್ರ ಪುರಸಭೆ ಸದಸ್ಯ ಎ.ಚಲಪತಿ. ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ವೈ.ಗೋಪಾಲ್. ಬೊಮ್ಮಸಂದ್ರ ಕೈಗಾರಿಕಾ ಸಂಘದ ಪದಾದಿಕಾರಿಗಳಾದ ಸಂಜೀವ್ ಸಾವಂತ್, ರಾಜಶೇಖರ್ ಪಾಟೀಲ್, ಮುರಳಿ. ನರೇಂದ್ರ ಕುಮಾರ್, ಪಾಟೀಲ್, ನೀಲಕಂಠಯ್ಯ, ನಾಗರಾಜ್ ಶೆಟ್ಟಿ, ಅಶ್ವಥ್, ಶಿವಕುಮಾರ್. ಕೆಐಎಡಿಬಿ ರೆಸಿಡೆನ್ಸಿಯಲ್ ಕ್ವಾರ್ಟಸ್ ವೆಲ್ಪೇರ್ ಅಸೋಸಿಯೇಷನ್ ನ ಅಧ್ಯಕ್ಷ ಉದಯ್ ಶೆಟ್ಟಿ, ವಿನೋದ್, ಗೋಪಾಲ್ ಸಿಂಗ್ ಹನುಮಂತ ರಾವ್, ಸ್ಥಳೀಯ ಮುಖಂಡರಾದ ಕಾಚನಾಯಕನಹಳ್ಳಿ ಕಿರಣ್ ಕುಮಾರ್. ಪುನೀತ್. ದಿಲೀಪ್. ಮುರುಗೇಶ್, ರಾಜಣ್ಣ, ರಾಜೇಶ್. ನವೀನ್ ಮತ್ತು ಸ್ತಳೀಯ ನಿವಾಸಿಗಳು ಭಾಗವಹಿಸಿದ್ದರು.