ಬೆಂಗಳೂರು: ಬಹು ನಿರೀಕ್ಷಿತ ಭರತನಾಟ್ಯ ಅರಂಗೇ ಟ್ರಮ್ `ನೃತ್ಯಾರಾಧನೆ’, ಕು. ದಿಯಾ ಶಂಕರ್ ಅವರ ಡಿ. 7, 2024, ಶನಿವಾರ ಸಂಜೆ 5 ಗಂಟೆಗೆ, ಬೆಂಗಳೂರು ಜೆಎಸ್ಎಸ್ ಆಡಿಟೋರಿಯಂನಲ್ಲಿ ನಡೆಯಲಿದೆ.ರಮ್ಯಾ ಮತ್ತು ಶಂಕರ್ ಅವರ ಪ್ರತಿಭಾವಂತ ಪುತ್ರಿಯಾಗಿರುವ ಕು.ದಿಯಾ ಶಂಕರ್, ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ನ ಆಚಾರ್ಯನ ಡಾ. ರಕ್ಷಾ ಕಾರ್ತಿಕ್ ಅವರ ಶಿಷ್ಯೆ. ಹಲವು ವರ್ಷಗಳಿಂದ, ದಿಯಾ ಭರತನಾಟ್ಯ ಮತ್ತು ಕರ್ನಾಟಿಕ್ ಸಂಗೀತದ ಸಮೃದ್ಧ ಪರಂಪರೆಯನ್ನು ತನ್ನದಾಗಿಸಿಕೊಂಡು, ಇದನ್ನು ತನ್ನ ಜೀವನದ ಅಸ್ತಿತ್ವದ ಅಡಿಪಾಯವೆನ್ನಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ: ರೋಟರಿಯನ್ ರುಕ್ಮಂಗದ ಬಾಬು , ಮಾಜಿ ಅಧ್ಯಕ್ಷ, ಕಮ್ಮಾವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ, ಶಿಂಗಾರ್ ಮಣಿ ದೇಬಾಶಿಸ್ ಪಟ್ನಾಯಿಕ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತ ಒಡಿಸ್ಸಿ ನೃತ್ಯಗಾರರು, ಟಿ.ಜಿ. ನರಸಿಂಹಮೂರ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಡಾ. ಜೆ.ಭುವನೇಶ್ವರಿ, ನಿರ್ದೇಶಕಿ ಮತ್ತು ಪ್ರಾಂಶುಪಾಲರು, ಪ್ರೆಸಿಡೆನ್ಸಿ ಶಾಲೆ, ಬೆಂಗಳೂರು ದಕ್ಷಿಣ. ಡಾ. ದೀಪ್ತಿ ಅಭಿಲಾಷಾ, ಪ್ರಸಿದ್ಧ ಒಡಿಸ್ಸಿ ನೃತ್ಯಗುರು, ಸ್ವೀಟ್ಝರ್ಲ್ಯಾಂಡ್ ಭಾಗವಹಿಸಲಿದ್ದಾರೆ.
ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ದಿಯಾ ಶಂಕರ್ ಅವರ ಕರ್ನಾಟಕ ಶೈಲಿಯ ಹಿನ್ನಲೆಯೊಂದಿಗೆ ಸಾಂಪ್ರದಾಯಿಕ ನೃತ್ಯರಚನೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಪ್ರಮುಖವಾಗಿ :, ಪುಷ್ಪಾಂಜಲಿ, ಶ್ರೀ ಮಹಾಗಣಪತಿ ರವತು ಮಾಂ, ಕೃಷ್ಣ ನೀ ಬೇಗನೆ ಬಾರೋ, ಜಗದಾನಂದ ಕಾರಕ, ಮಾತೆ ಮಲಯಧ್ವಜ ವರಣಂಕು. ದಿಯಾ ಶಂಕರ್ ಅವರ ನೃತ್ಯ ಪ್ರತಿಭೆಯನ್ನು ತಿರುಅನಂತಪದ್ಮನಾಭಸ್ವಾಮಿ ದೇವಸ್ಥಾನ (ತಿರುವನಂತಪುರಂ), ಶ್ರೀ ರಾಘವೇಂದ್ರ ಸ್ವಾಮಿ ಮಠ (ಮಂತ್ರಾಲಯ), ಶಿವರಾತ್ರಿ ನಾಟ್ಯಾಂಜಲಿ (ತಿರುವಾರೂರು ಮತ್ತು ಚಿದಂಬರಂ), ಮೈಸೂರು ದಸರಾ, ತಿರುಪತಿ ಬ್ರಹ್ಮೋತ್ಸವ, ಹಾಗೂ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನಗಳಲ್ಲಿ ಇನ್ನು ಹತ್ತು ಹಲವು ಸಮಾರಂಭಗಳಲ್ಲಿ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ. ಈ ಅರಂಗೇಟ್ರಮ್ ಅವರ ಕಲಾತ್ಮಕ ಪಯಣದ ಮಹತ್ವದ ಹಂತವಾಗಿದೆ.ನೃತ್ಯಪ್ರೇಮಿಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠತೆಯನ್ನು ದಿಯಾ ಶಂಕರ್ ಅವರ ನೃತ್ಯದ ಮೂಲಕ ನೋಡಿ ಅನುಭವಿಸಬಹುದು.