ಬೆಂಗಳೂರು: ಶಾಂತಲಾ ಆರ್ಟ್್ಸ ಟ್ರಸ್ಟ್ ವತಿಯಿಂದ ನೃತ್ಯ ಕಲಾವಿದ ಜೆ.ಜೆಸ್ವತ್ ಅವರ ಸ್ಮೃತಿ ನೃತ್ಯ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಮಲೇಶ್ವರದ ಸೇವಾ ಸದನದಲ್ಲಿ ನಡೆಯಿತು.
ಜೆ.ಜೆಸ್ವತ್ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಕಲಾಶ್ರೀ ನೃತ್ಯ ನಿರ್ದೇಶಕ ಮೈಸೂರು ಬಿ.ನಾಗರಾಜ್ ಮತ್ತಿತರ ಗಣ್ಯರು ಸಾಕ್ಷಿಯಾದರು.
ಜೆ.ಜೆಸ್ವತ್ ಅವರು ತಮ್ಮ ಗುರು ಕಲಾಯೋಗಿ ಗುರು ಪುಲಕೇಶಿ ಕಸ್ತೂರಿ ಅವರ ತಾಳ,ರಾಗಕ್ಕೆ ವಿವಿಧ ನೃತ್ಯ ಭಂಗಿಗಳ ಮೂಲಕ ನೆರದಿದ್ದ ಪ್ರೇಕ್ಷಕರ ಮನಗೆದ್ದರು.
ಜೆ.ರಾಜೇಂದ್ರನ್ ಮತ್ತು ಜೆ.ಜಯಕುಮಾರಿ ಅವರ ಪುತ್ರನಾದ ಜೆ.ಜೆಸ್ವತ್ ಶಾಂತಲಾ ಆಕಾಡೆಮಿಯಲ್ಲಿ ೧೨ ವರ್ಷಗಳಿಂದ ಭರತ ನಾಟ್ಯ ತರಬೇತಿ ಪಡೆಯುತ್ತ ಉತ್ತಮ ಭರತ ನಾಟ್ಯ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಲೆಯಲ್ಲಿ ಆಸಕ್ತಿ ಹೊಂದಿರುವ ಜೆಸ್ವತ್ ಮೃದಂಗ ತರಬೇತಿ ಪಡೆಯುತ್ತಿದ್ದಾರೆ.ದಸರಾ ಉತ್ಸವ, ವಿಶ್ವ ನೃತ್ಯ ದಿನ,ಶಿವರಾತ್ರಿ ಉತ್ಸವ, ರಾಮನವಮಿಯಂತಹ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನಗೆದಿದ್ದಾರೆ. ಪ್ರಸ್ತುತ ಎಲೆಕ್ಟಾçನಿಕ್ ಮತ್ತು ಸಂಪರ್ಕ ವಿಷಯದಲ್ಲಿ ಇಂಜಿನಿಯರಿAಗ್ ಪದವಿ ಅಧ್ಯಯನ ನಡೆಸುತ್ತಿರುವ ಜೆಸ್ವತ್ ಉತ್ತಮ ಭರತ ನಾಟ್ಯ ಕಲಾವಿದರಾಗಿ ಹೊರ ಹೊಮ್ಮಿದ್ದಾರೆ.