ಬೆಂಗಳೂರು: ಒಲಿಂಪಿಯನ್ ಧಿನಿಧಿ ದೇಸಿಂಗು ಮತ್ತು ಬಸವನಗುಡಿ ಈಜುಕೇಂದ್ರ ಆಕಾಶ ಮಣಿ ಅವರು ನೆಟ್ಟಕಲ್ಲಪ್ಪ ರಾಷ್ಟಿçÃಯ ಈಜು ಕೂಟದ ೩ನೇ ಆವೃತ್ತಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದರು.
ಕೂಟದ ಎರಡನೇ ಮತ್ತು ಕೊನೆಯ ದಿನವಾದ ಭಾನುವಾರ ಈಜುಕೂಟವನ್ನು ನೋಡಲು ಸೇರಿದ್ದ ಪ್ರೇಕ್ಷಕರ ಪ್ರಮುಖ ಆಕರ್ಷಣೆ ಧಿನಿಧಿ ಅಗಿದ್ದರು.
೧೪ ವರ್ಷದ ಧಿನಿಧಿ ಅವರು ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಅಲ್ಲದೇ ಒಲಿಂಪಿಕ್ಸ್ ಈಜಿನಲ್ಲಿ ಭಾಗವಹಿಸಿದ ಅತಿ ಕಿರಿಯ ಕ್ರೀಡಾಪಟುವೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ (ಎನ್ಎಸಿ)ನಲ್ಲಿ ನಡೆದ ಸ್ಪರ್ಧೆಗಳಲ್ಲಿಯೂ ಅವರು ಚಿನ್ನದ ಮಿಂಚು ಹರಿಸಿದರು. ಬಾಲಕಿಯರ ಎರಡನೇ ಗುಂಪಿನಲ್ಲಿ ೨೦೦ ಮೀಟರ್ಸ್ ಮೆಡ್ಲೆಯಲ್ಲಿ ಡಾಲ್ಫಿನ್ ಈಜುಕೇಂದ್ರದ ಧಿನಿಧಿ ಅವರು ಪ್ರಥಮರಾದರು. ೧೦೦ ಮೀ ಫ್ರೀಸ್ಟೆöÊಲ್ನಲ್ಲಿಯೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಎರಡು ದಿನ ನಡೆದ ಕೂಟದಲ್ಲಿ ಸುಮಾರು ೩೦೦ ಈಜುಪಟುಗಳು ಸ್ಪರ್ಧಿಸಿದ್ದರು. ಒಟ್ಟು ೧೦ ಲಕ್ಷ ನಗದು ಬಹುಮಾನ ನೀಡಲಾಯಿತು.