ದಕ್ಷಿಣ ಕನ್ನಡ: ಭಾರೀ ಮಳೆಯಿಂದಾಗಿ ಮಂಗಳೂರು ಜಿಲ್ಲೆಯ ಮುಳುಗಡೆಯಾಗಿರುವ ಸ್ಥಳಗಳು ಮತ್ತು ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ಗುಂಡೂರಾವ್ ಭೇಟಿ ನೀಡಿದ್ದಾರೆ.
ಅದ್ಯಪಾಡಿಗೆ ಭೇಟಿ ನೀಡಿದ ಸಚಿವರು,ಪ್ರವಾಹ ಪರಿಸ್ಥಿತಿ ಅವಲೋಕಿಸಿದ್ದಾರೆ.ಅಕ್ಕ ಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿದ ಅದ್ಯಪಾಡಿ ಸ್ಥಳೀಯ ನಿವಾಸಿಗರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಪಾಲ್ಗುಣಿ ನದಿಯ ನೆರೆ ಪ್ರವಾಹದ ಬಗ್ಗೆ ಮಾಹಿತಿ ನೀಡಿದರು.ತೋಟ ಗದ್ದೆಗಳು ಮುಳುಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ ಅವರು .
ಅದ್ಯಪಾಡಿಯ ಅಕ್ಕ ಪಕ್ಕದ ಹಳ್ಳಿಗಳಿಗೆ ಪಲ್ಗುಣಿ ನದಿ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರಿದಿ ಪಡೆದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರವಾಹ ಸಂದರ್ಭದಲ್ಲಿ ತಂತ್ರಜ್ಞರನ್ನ ಸ್ಥಳಕ್ಕೆ ಕರೆತಂದು ಸಲಹೆ ಪಡೆಯಿರಿ ಎಂದು ಸಲಹೆ ಮಾಡಿದ್ದಾರೆ.