ನೆಲಮಂಗಲ: ಮಹಾಸಭಾ ಸಂಘಟನೆ ತಾಲ್ಲೂಕು ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆಯಬೇಕು. ಆಗಷ್ಟೇ ಮಹಾಸಭಾದ ಶಕ್ತಿ ಮತ್ತು ಸಂಸ್ಕೃತಿಯನ್ನು ಕಾಪಾಡಲು ಸಾಧ್ಯ ಎಂದು ವೀರಶೈವ ಲಿಂಗಾಯಿತ ಮಹಾಸಭಾ ಕೇಂದ್ರ ಘಟಕದ ಉಪಾಧ್ಯಕ್ಷರಾದ ಬಿ.ಎಸ್.ಸಚ್ಚಿದಾನಂದ ಮೂರ್ತಿ ತಿಳಿಸಿದರು.
ನಗರದ ಬಿನ್ನಮಂಗಲದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಚೇರಿಯಲ್ಲಿ ತಾಲ್ಲೂಕು ಘಟಕದಿಂದ ಆಯೋಜಿಸಲಾಗಿದ್ದ ೨೦೧೯-೨೦೨೪ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ ೨೦೨೪-೨೦೨೯ನೇ ಸಾಲಿನ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯ ಕ್ರಮವನ್ನು ಉದ್ಘಾಟಿ ಸಿಮಾತನಾಡಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯಿತರ ಶಕ್ತಿಹೆಚ್ಚಾಗಿದ್ದು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಂಘಟನೆ ಆಗುವ ಮೂಲಕ ಬಲವಾದರೆ ಯಾವುದೇ ಸರಕಾರವನ್ನು ಕೂಡ ಪ್ರಶ್ನೆ ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ
ಸಭಾದ ತಾಲ್ಲೂಕು ಅಧ್ಯಕ್ಷ ಎನ್.ರಾಜಶೇಖರ್ ಮಾತ ನಾಡಿ ಗುರುಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಸಂಘಟನೆ ಮಾಡುವ ಅವಕಾಶ ಸಿಕ್ಕಿದ್ದು
ಶಕ್ತಿ ಮೀರಿ ಸೇವೆ ಸಲ್ಲಿಸುತ್ತೇನೆ.
ಸಮುದಾಯದಲ್ಲಿ ಸೇವೆ ಸಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗಿದ್ದು ರಾಜ್ಯ ಜಿಲ್ಲಾ ಘಟಕದ ಪ್ರಮುಖ ಮುಖಂಡರು ಆಗಮಿಸಿರುವುದು ಸಂತೋಷವಾಗಿದೆ ಎಂದರು.ಅಭಿನಂದನೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಹಾಗೂ ತಾಲ್ಲೂಕು ಘಟಕದಲ್ಲಿ ೨೦೧೯-೨೦೨೪ನೇಸಾಲಿನಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ತಾಲೂಕು ಘಟಕದ ಪದಾಧಿಕಾರಿ ಗಳಿಗೆ ಕೇಂದ್ರ ಸಮಿತಿ ಸದಸ್ಯ ಎನ್.ಎಸ್.ನಟರಾಜು ನೇಮಕಾತಿ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪ್ರದೀಪ್,ಪೂರ್ಣಿಮಾ, ಲೋಲಾಕ್ಷಿ, ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ಮಾಜಿಅಧ್ಯಕ್ಷ ಕೆ.ಸಿ.ಅಣ್ಣಪ್ಪ, ಮಹಿಳಾಜಿಲ್ಲಾಧ್ಯಕ್ಷೆ ರಾಜಮ, ರಾಜ್ಯ ಯುವ ಘಟಕದ ಕಾರ್ಯದರ್ಶಿ ಕೊಟ್ರೇಶ್, ಮಹಿಳಾ ಘಟಕ ಅಧ್ಯಕ್ಷೆ ವೇದಾವತಿ,ನಿರ್ದೇಶಕ ಮಂಜುನಾಥ್, ರುದ್ರೇಶ್ವರ ಸೊಸೈಟಿ ನಿರ್ದೇಶಕರಾದ ಎನ್.ವಿ.ಮಂಜು ನಾಥ್, ಗ್ರಾ.ಪಂ ಸದಸ್ಯೆ ಅನುಸೂಯಮಲ್ಲಯ್ಯ, ವೀರಶೈವ ಸೊಸೈಟಿ ಅಧ್ಯಕ್ಷ ಲೋಕೇಶ್, ಟೌನ್ಕೋಆಪರಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು,ಮಾಜಿ ಅಧ್ಯಕ್ಷ ಜಯ ದೇವಯ್ಯ, ಬಸವೇಶ್ವರ ಯುವ ಸಂಘದ ಅಧ್ಯಕ್ಷ ಎನ್.ಆರ್.ಗಣೇಶ್ ಸೇರಿದಂತೆ ಅನೇಕರಿದ್ದರು.