ಕಲಾಗ್ರಾಮದಲ್ಲಿ ಶ್ರೀ ಮಲೈಮಹದೇಶ್ವರ ಸಾಂಸ್ಕೃತಿಕ ಜಾನಪದ ಕಲಾ ಟ್ರಸ್ಟ್ 12ನೇ ಏಕತಾರಿ ಜಾನಪದ ಸಂಭ್ರಮ, ನೆಲಮೂಲ ಜಾನಪದ ಉತ್ಸವ ಮತ್ತು ಮೂಲ ವಾದ್ಯಗಳ ಪ್ರದರ್ಶನ ಕಾರ್ಯಕ್ರಮ ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅಂಟಿಕೊಂಡು ನಮ್ಮ ನೆಲೆದ ಮೂಲ ಜನಪದ ಸೊಗಡು ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ ಹೇಳಿದರು.
ಶ್ರೀ ಮಲೈಮಹದೇಶ್ವರ ಸಾಂಸ್ಕೃತಿಕ ಜಾನಪದ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ 12ನೇ ಏಕತಾರಿ ಜಾನಪದ ಸಂಭ್ರಮ, ನೆಲಮೂಲ ಜಾನಪದ ಉತ್ಸವ ಮತ್ತು ಮೂಲ ವಾದ್ಯಗಳ ಪ್ರದರ್ಶನ ಹಾಗೂ ರಾಜ್ಯಮಟ್ಟದ ಜಾನಪದ ಏಕತಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮಚ್ಚಯ ಭವನದಲ್ಲಿ ವಿಶೇಷವಾದ ಗರುಡಗಂಬ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಬಿ.ಕೆ. ಭಾರತಿ ಅಕ್ಕ ಅಧ್ಯಾತ್ಮಿಕ ಜ್ಞಾನದ ನುಡಿಗಳ ಬಗ್ಗೆ ಮಾಹಿತಿ ನೀಡಿದರು. ಜಾನಪದ ಲೋಕದ ಕ್ಯೂರೇಟರ್ ಡಾ. ರವಿ. ಯು.ಎಂ, ಕನ್ನಡ ಜಾನಪದ ಪರಿಷತ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರ. ನರಸಿಂಹಮೂರ್ತಿ ಘನ ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡಮಿ ರಿಜಿಸ್ಟ್ರಾರ್ ಶ್ರೀಮತಿ ಎನ್. ನಮೃತ, ಅಂತರರಾಷ್ಟ್ರೀಯ ಗಾಯಕರಾದ ಸಂತವಾಣಿ ಸುಧಾಕರ್, ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಕೆ.ಎಂ.ನಾಗರತ್ನಮ್ಮ ವೆಂಕಟೇಶ್, ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಾಂತಯ್ಯ, ಸಿನಿಮಾ ಪ್ರಾಜೆಕ್ಟರ್ ಕಲಾವಿದ ಸೋಮಣ್ಣ, ಮೂಲ ಜಾನಪದ ಕಲಾವಿದ ಮರಿದೇವರು ಮತ್ತಿತರರು ಉಪಸ್ಥಿತರಿದ್ದರು.
ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಖ್ಯಾತ ಜಾನಪದ ಕಲಾವಿದರಾದ ಗುರುರಾಜ ಹೊಸಕೋಟೆ ರವರಿಗೆ ಸಂಸ್ಥೆಯ ವತಿಯಿಂದ 2025ನೇ ಸಾಲಿನ ರಾಜ್ಯ ಮಟ್ಟದ ಜಾನಪದ ಏಕತಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಾವಗಡ ತಾಲ್ಲೂಕಿನ ಜಾನಪದ ಕಲಾವಿದ ನಾಗರಾಜ್, ಕನ್ನಡ ಚಲನಚಿತ್ರ ನಿರ್ದೇಶಕ, ಕಲಾವಿದ ಮತ್ತು ಲಿಮ್ಮ ಬುಕ್ ವಿಶ್ವ ದಾಖಲೆ ವೀರ ಲೆಮನ್ ಪರಶುರಾಮ್ ರವರಿಗೆ ಏಕತಾರಿ ರಾಮಯ್ಯ ರವರು ಸ್ವತಃ ಅವರೇ ತಯಾರಿಸಿದ ತಂಬೂರಿಗಳನ್ನು ನೀಡಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಏಕತಾರಿ ರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿ ಕೆ. ಆರ್. ಆರ್ಜುನ್ ಕುಮಾರ್ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಕಲಾ ತಂಡಗಳು ಮಲ್ಲತ್ತಹಳ್ಳಿಯ ಕಲಾಗ್ರಾಮದ ಮುಖ್ಯರಸ್ತೆಯಿಂದ ಸಭಾಂಗಣದವರೆಗೂ ಮೆರವಣಿಗೆ ನಡೆಸಿದರು. ನಂತರ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳ ಕಲಾವಿದರು ಪ್ರದರ್ಶನ ನೀಡಿದರು. ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ, ಸಂತವಾಣಿ ಸುಧಾಕರ್ ಮತ್ತಿತರರು ಜಾನಪದ ಗೀತ ಗಾಯನ ನಡೆಸಿಕೊಟ್ಟರು. ಮೈಸೂರಿನ ಪುರುಷೋತ್ತಮ್ ಮತ್ತು ತಂಡದವರು ವಾದ್ಯ ಸಹಕಾರ ನೀಡಿದರು, ಪಿ. ರಚನಾ ರಾಜು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಶಿಕ್ಷಕ ಅಶ್ವಥ್ ನಾರಾಯಣ ಮತ್ತು ಪುರುಷೋತ್ತಮ್ ನಡೆಸಿಕೊಟ್ಟರು.