ಹೆಚ್ಚಿನ ಮಹಿಳೆಯರು ಮನೆಯಲ್ಲಿದ್ದಾಗ ನೈಟಿಗಳನ್ನು ಧರಿಸುತ್ತಾರೆ. ನೈಟಿಗಳನ್ನು ಧರಿಸುವುದು ಹಲವರಿಗೆ ಕಂಫರ್ಟ್ ಫೀಲ್ ಕೊಡುತ್ತದೆ.
ಹೆಚ್ಚಾಗಿ ಹತ್ತಿ ನೈಟಿಗಳನ್ನು ಅನೇಕರು ಇಷ್ಟಪಡುತ್ತಾರೆ. ನೈಟಿಗಳನ್ನು ಧರಿಸುವುದರಿಂದ ಗಾಳಿ ಚೆನ್ನಾಗಿ ಆಡುತ್ತದೆ. ಇದನ್ನು ತೊಳೆಯುವುದು ಸಹ ಸುಲಭ.
ಸೀರೆಗಳನ್ನು ತೊಳೆಯಲು ಸ್ವಲ್ಪ ಕಷ್ಟವಾಗಬಹುದು. ಪ್ರಯೋಜನಗಳು ಇರುವಂತೆಯೇ ನೈಟಿಗಳನ್ನು ಧರಿಸುವುದರಿಂದ ಅನಾನುಕೂಲಗಳೂ ಇವೆ.
*ನೈಟಿಗಳನ್ನು ಕಡಿಮೆ ಗುಣಮಟ್ಟದ ಬಟ್ಟೆಗಳಿಂದ ತಯಾರಿಸಿದ್ದರೆ. ಅವು ಚರ್ಮದ ಮೇಲೆ ಅಲರ್ಜಿಯನ್ನು ಉಂಟುಮಾಡುತ್ತವೆ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
*ಸರಿಯಾದ ಸಮಯಕ್ಕೆ ನೈಟಿ ತೊಳೆಯದಿದ್ದರೆ ಬ್ಯಾಕ್ಟೀರಿಯಾ ಉಂಟಾಗುತ್ತದೆ , ಇದು ತೊಂದರೆಗೆ ಕಾರಣವಾಗಬಹುದು.
*ಕೆಲವು ನೈಟಿಗಳು ನಿಮಗೆ ಸಾಕಷ್ಟು ಬೆವರುವಂತೆ ಮಾಡುತ್ತವೆ. ಅಂತಹ ನೈಟಿಗಳನ್ನು ಧರಿಸುವುದರಿಂದ ತೊಂದರೆಗಳು ಉಂಟಾಗಬಹುದು.
*ಹತ್ತಿಯ ನೈಟಿಗಳಿಗೆ ಆದ್ಯತೆ ನೀಡುವುದು ಉತ್ತಮ ಮತ್ತು ಕಾಲಕಾಲಕ್ಕೆ ಅವುಗಳನ್ನು ತೊಳೆಯಬೇಕು.
* ನೈಟಿಗಳನ್ನು ಖರೀದಿಸುವಾಗ ಗುಣಮಟ್ಟದವುಗಳನ್ನು ಮಾತ್ರ ತೆಗೆದುಕೊಳ್ಳಿ. ಕಡಿಮೆ ರೇಟಿನ ನೈಟಿ ಖರೀದಿಸಬೇಡಿ.
* ನೈಟಿಯನ್ನು ರಾತ್ರಿ ಸಮಯದಲ್ಲಿ ಹಾಗೂ ಕೆಲವೊಂದು ಅನಿವಾರ್ಯ ಸಮಯದಲ್ಲಿ ಧರಿಸುವುದು ಒಳಿತು. ಸೀರೆಗೆ ಹೆಚ್ಚಿನ ಪ್ರಾಶಸ್ತç÷್ಯ ಕೊಡುವುದು ಒಳಿತು.