ಚನ್ನಪಟ್ಟಣ: ಕ್ಷೇತ್ರದಲ್ಲಿ ಕುಮಾರಸ್ವಾಮಿಯನ್ನು ಎರಡು ಬಾರಿ ಗೆಲ್ಲಿಸಿದಿರಿ, ಇಲ್ಲಿಂದ ಗೆದ್ದದ ಅವರು ಒಮ್ಮೆ ಮುಖ್ಯಮಂತ್ರಿ ಸಹ ಆದರು. ಆದರೆ, ಗೆದ್ದ ನಂತರ ಅವರು ಒಮ್ಮೆಯೂ ರಾಷ್ಟಿçÃಯ ಹಬ್ಬಗಳಲ್ಲಿ ಭಾಗಿಯಾಗಲಿಲ್ಲ. ನಿಮ್ಮ ಕಷ್ಟಸುಖ ಕೇಳಿಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಬಲ್ಲಾಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಚುನಾವಣೆ ಸಮಯದಲ್ಲಿ ನಾವು ಬರುತ್ತೇವೆ, ಅವರು ಬರುತ್ತಾರೆ, ಜಾತ್ರೆ ನಡೆದ ಆಗೆ ನಡೆಯುತ್ತದೆ.
ನಾವೆಲ್ಲ ಏನೋನೋ ಹೇಳುತ್ತೆವೆ. ನಿಜ ಹೇಳುತ್ತೇವೋ, ಸುಳ್ಳು ಹೇಳುತ್ತೇವೋ, ಆದರೆ, ನ.೧೩ರ ನಂತರ ನಿಮ್ಮ ಜತೆ ಯಾರು ಇರುತ್ತಾರೆ ಎಂಬುದು ಮುಖ್ಯ, ಅದನ್ನು ನೀವು ಅರಿಯಬೇಕು. ಎಚ್ಡಿಕೆಯನ್ನು ನೀವು ಎರಡು ಬಾರಿ ಗೆಲ್ಲಿಸಿದಿರಿ, ಒಂದು ಬಾರಿ ನಿಮ್ಮಂದ ಸಿಎಂ ಸಹ ಆದರು. ಅವರು ಏನು ಮಾಡಿದರು ಎಂಬುದನ್ನು ನೀವು ಗಮನಿಸಬೇಕು. ಯಾವುದಾದರೂ ಒಂದು ರಾಷ್ಟಿçÃಯ ಹಬ್ಬಗಳಿಗೆ ಅವರ ಬಂದರೆ, ತಾಲ್ಲೂಕಿನ ಪ್ರಮುಖ ಹಳ್ಳಿಗೆ ಬಂದ ನಿಮ್ಮ ಕಷ್ಟ ಸುಖ ಕೇಳಲಿಲ್ಲ. ಅವರು ರಾಜ್ಯಮಟ್ಟ ನಾಯಕರಿರಬಹುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ರಾಜ್ಯ ನಾಯಕರು. ಹಾಗಂತ ಸಿದ್ದರಾಮಯ್ಯ ಮೈಸೂರಿಗೆ ಹೋಗುವುದು ಬಿಟ್ಟಿದ್ದಾರಾ?. ಡಿಕೆಶಿ ಕನಕಪುರಕ್ಕೆ ಹೋಗುವುದು ಬಿಟ್ಟಿದ್ದಾರಾ. ಚನ್ನಪಟ್ಟಣಕ್ಕೆ ಬರುವುದು ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಯಾವುದೇ ದೊಡ್ಡ ನಾಯಕ ಆದರೂ, ತಮಗೆ ಜನ್ಮ ನೀಡಿದ ಊರನ್ನು ಮರೆಯುವುದಿಲ್ಲ. ತಮ್ಮ ಕ್ಷೇತ್ರದಿಂದ ಅವರು ಆಯ್ಕೆಯಾದ ಮೇಲೆಯೇ ಅವರು ಸಿಎಂ ಮಂತ್ರಿ ಆಗುವುದು ಎಂಬುದನ್ನು ಮರೆಯಬಾರದು ಎಂದರು.
ಪ್ರತಿಬಾರಿ ತಪುö್ಪ ಸರಿಯಲ್ಲ: ಕುಮಾರಸ್ವಾಮಿ ಇಲ್ಲಿಂದ ಆಯ್ಕೆಯಾದ ಮೇಲೆ ಅವರಿಂದ ನಿಮಗೆ ಏನಾದರೂ ನ್ಯಾಯ ಸಿಕ್ಕಿದ್ದರೆ ಅದನ್ನು ತಿಳಿಸಿ, ನಾವು ಇಲ್ಲಿಂದಲೇ ವಾಪಸ್ ಹೋಗಿಬಿಡುತ್ತೇವೆ.
ನೀರಾವರಿ ಯೋಜನೆ ನೀಡಿ ಸಿಪಿವೈ ಅನ್ನು ಸೋಲಿಸಿದಿರಿ, ನೀವು ಬುದ್ಧಿವಂತರು ಎಂದುಕೊAಡಿದ್ದೆವು. ಆದರೆ, ತಪುö್ಪ ಮಾಡಿದಿರಿ, ಒಂದು ಸಾರಿ ತಪ್ಪಾಗುತ್ತದೆ ಆದರೆ. ಪ್ರತಿ ಬಾರಿ ತಪುö್ಪ ಮಾಡುವುದು ಸರಿಯಲ್ಲ ಎಂದರು.
ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಾರೆ ಎಂದು ಲೋಕಸಭೆ ಚುನಾವಣೆ ಯಲ್ಲಿ ೮೬ಸಾವಿರ ಮತ ನೀಡಿದ್ದೀರಾ. ಈಗ ಸಿಪಿವೈ ಸಹ ನಮ್ಮ ಜತೆ ಬಂದಿದ್ದಾರೆ. ಅವರು ಸೋತಾಗ ಗೆದ್ದಾಗ ಎಂದಿಗೂ ತಾಲ್ಲೂಕಿನೊಂದಿಗಿನ ಒಡನಾಟ ಬಿಡಲಿಲ್ಲ. ಅವರು ನಿಮ್ಮ ಜತೆಯೇ ಇರುತ್ತಾರೆ ಎಂದರು.
ಕಾAಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರೆಂಟಿ ನೀಡಿದ್ದೇವೆ. ಇದರ ಜತೆಗೆ ಸಾಕಷ್ಟು ಯೋಜನೆ ನೀಡಿದ್ದೇವೆ. ಒಂದು ಕಾರ್ಯಕ್ರಮವನ್ನು ನಿಲ್ಲಿಸದೇ ಕೊಡುತ್ತಿದ್ದೇವೆ. ಎಚ್ಡಿಕೆ ಮಂಡ್ಯಕ್ಕೆ ಹೋದ ನಂತರ ಡಿಕೆಶಿ ಯಾರೂ ಮಾಡದಷ್ಟು ಅಭಿವೃದ್ಧಿಗೆ ಮಾಡಲು ಇಲ್ಲಿ ಮುಂದಾಗಿದ್ದಾರೆ. ಯಾರು ಮಾಡದಷ್ಟು ಕೆಲಸ ಮಾಡಿದ್ದಾರೆ. ನಮ್ಮ ಅಭಿವೃದ್ಧಿ ಜತೆ ಕೈಜೋಡಿಸಲು ಸಿಪಿವೈ ಬಂದಿದ್ದಾರೆ ಎಂದರು.
ಸೋಲು ಗೆಲುವು ಬೇರೆ ವಿಚಾರ. ಆದರೆ, ನಿಜವಾಗಿಯೂ ನಿಮ್ಮನ್ನು ನೀವೇ ಸೋಲಿಸಿಕೊಂಡು ಅಭಿವೃದ್ಧಿಗೆ ಹಿನ್ನೆಡೆ ಮಾಡಿದ್ದೀರಾ. ಬೇರೆಯವರು ಸೊತಿದ್ದರೆ, ಬೇರೆ ಕಡೆ ಹೋಗಲಿ ಎಂದರು.
ಈ ಚುನಾವಣೆಯ ಸೋಲು ಗೆಲುವಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬರಲು ಆಗಲ್ಲ. ಜೆಡಿಎಸ್ನವರು ಸಿಎಂ ಆಗಲ್ಲ. ಕಾಂಗ್ರೆಸ್ ಸರ್ಕಾರ ಹೋಗುವುದಿಲ್ಲ. ಆದರೆ, ಸಿಪಿವೈ ಗೆದ್ದರೆ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ಗೆದ್ದರೆ ನಿಮ್ಮ ಜತೆ ಇರುತ್ತಾರೆ. ನೀವೆಲ್ಲ ಅವರಿಗೆ ಸಂಪೂರ್ಣ ಬೆಂಬಲ ನೀಡಿ. ನಿಮ್ಮ ಜತೆ ನಾವೆಲ್ಲ ನಿಲ್ಲುತ್ತೇವೆ ಎಂದರು.