ಮಲ್ಲೇಶ್ವರ:ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ (ರಿ) ನೆಲ ಜಲ ಹಸಿರು ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ನಮ್ಮ ಧೈಯದಲ್ಲಿ ನೀವೂ ಭಾಗಿಯಾಗಿ ಸಂಸ್ಕೃತಿ ದಾಖಲೆ ಬರೆದು ಬೆಳದಿಂಗಳ ಬೆಸದ ೨೦೦ರಹುಣ್ಣಿಮೆ ಹಾಡು. ೨೦೨೪ ರ ನವೆಂಬರ್ ೧೫ ರಿಂದ ೧೮ ರವರೆಗೆ ೮ನೇ ರೈತಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಆಚರಣೆ ಕಾರ್ಯಕ್ರಮದ ಕುರಿತು ಮಾಧ್ಯಮಗೋಷ್ಠಿ.
ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಮತ್ತು ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್ ರವರು ಭಾಗವಹಿಸಿದ್ದರು, ಪದಾಧಿಕಾರಿಗಳಾದ ಚಂದ್ರಶೇಖರ್ ನಾಯ್ಡು, ಶ್ರೀವಲ್ಲಭ, ಚಂದ್ರಮೌಳಿ, ಎಲ್.ಎನ್.ಪ್ರಭು, ರಾಜಶಶಿಧರ್,ಡಾ||ಲೀಲಾ ಸಂಪಿಗೆ, ಹೇಮಂತ್ ರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಕೆ. ಶಿವರಾಂರವರು ಮಾತನಾಡಿ ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕು ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಜನವರಿ ೩೦, ೨೦೧೦ರಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ ಆರಂಭಿಸಲಾಯಿತು ೧೪ವರ್ಷಗಳ ಕಾಲ ಸಾಗಿ ಬಂದಿದೆ ೨೦೨೪ರ ನವಂಬರ್ ನಲ್ಲಿ ೨೦೦ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮ ಸಂಭ್ರಮಾಚರಣೆ.
ಯಕ್ಷಗಾನ, ನಾಟಕ, ಕರ್ನಾಟಕ ಸಂಗೀತ, ಬುಡಕಟ್ಟುಗಳ ಕಲಾಪ್ರದರ್ಶನ, ವಚನಗಾಯನ, ನೃತ್ಯ ನೂರಾರು ಕಾರ್ಯಕ್ರಮಗಳ ಹುಣ್ನಿಮೆ ಹಾಡಿನಲ್ಲಿ ಕಲಾವಿದರು ಕಲಾ ಪ್ರದರ್ಶನ ಮಾಡಿದ್ದಾರೆ. ಜನರಿಗೆ ಅರಿವು ಮೂಡಿಸುವ ಜೊತೆಯಲ್ಲಿ ಕಲಾವಿದರಿಗೂ ಪ್ರೋತ್ಸಹ, ಸಹಕಾರ ನೀಡಲಾಗುತ್ತಿದೆ.
ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯಂತೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಪ್ರಸಿದ್ದಿ ಪಡೆದಿದೆ. ಕಳೆದ ೮ವರ್ಷಗಳಿಂದ ಕಡಲೆಕಾಯಿ ಪರಿಷೆ ಕಾರ್ಯಕ್ರಮ ಯಶ್ವಸಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಿAದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ, ರೈತರು, ಬೀದಿ ಬದಿಯ ವ್ಯಾಪಾರಿಗಳಿಗೆ ೪೦೦ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸ್ನೇಹಿ, ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ, ಪ್ಲಾಸ್ಟಿಕ್ ಮುಕ್ತ, ಕೈ ಬಟ್ಟೆ ಚೀಲ, ಪೇಪರ್ ಕವರ್ ಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ.
ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ೮ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ, ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಹಾಗೂ ಬಂದ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ನೂರಾರು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
೧೫-೧೧-೨೦೨೪ರ ಶುಕ್ರವಾರ ೪-೩೦ಕ್ಕೆ ಮಾಜಿ ಕೇಂದ್ರ ಸಚಿವರಾದ ವೀರಪ್ಪಮೊಯ್ಲಿರವರು ಉದ್ಘಾಟನೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಶಾಸಕರುಗಳಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನರವರು ಭಾಗವಹಿಸಲಿದ್ದಾರೆ.
ದಿನಾಂಕ ೧೫.೧೧.೨೦೨೪ನೇ ಶುಕ್ರವಾರ ಸಂಜೆ ೬.೩೦ಕ್ಕೆ ಹುಣ್ಣಿಮೆ ಹಾಡು-೨೦೦: “ಹರಿದಾಸ-ಶಿವಶರಣ ಸಂಗಮ” (ಹಿಂದುಸ್ತಾನಿ – ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ)
ಪಂಡಿತ್ ರವೀಂದ್ರ ಸೊರಗಾಂವಿ, ಹಿಂದುಸ್ತಾನಿ ಶಾಸ್ತ್ರೀಯ ಕಲಾವಿದರಿಂದ ?ವಚನ ಗಾಯನ? ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಂದ
`ದಾಸರ ಪದಗಳು”: ಮುಖ್ಯ ಅತಿಥಿಗಳು ಡಾ|| ಅನುಸೂಯ ಕುಲಕರ್ಣಿ, ಕರ್ನಾಟಕದ ಹೆಮ್ಮೆಯ ಹಿರಿಯ ಗಾನ ಕಲಾ ಭೂಷಣ ದಿನಾಂಕ ೧೬.೧೧.೨೦೨೪ನೇ ಶನಿವಾರ ಸಂಜೆ ೬.೩೦ಕ್ಕೆ ಹುಣ್ಣಿಮೆ ಹಾಡು-೨೦೧
ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು ೨೦೦ ರ ಸಂಭ್ರಮದಲ್ಲಿ ಡಾ.ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಮುಖ್ಯ ಅತಿಥಿ: ನೇತ್ರಪಾಲ್ , ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ.
ದಿನಾಂಕ ೧೭.೧೧.೨೦೨೪ನೇ ಭಾನುವಾರ ಬೆಳಗ್ಗೆ ೧೧.೦೦ಕ್ಕೆ ಹುಣ್ಣಿಮೆ ಹಾಡು-೨೦೨ ಮಧು ಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ “ಅಪರೂಪದ ಭಾವಗೀತೆಗಳ ಕಾರ್ಯಕ್ರಮ” ಮುಖ್ಯ ಅತಿಥಿಗಳು ಶ್ರೀ ಬಾಲಚಂದ್ರ ರಾಜ್ಹನ್ಸ್ ಎಂಟರ್ ಪ್ರೈಸಸ್, ಕಾರ್ಯಕ್ರಮದ ಪ್ರಾಯೋಜಕರು ಶ್ರೀ ಎಸ್. ಪ್ರಕಾಶ್ ಅಯ್ಯಂಗಾರ್. ಸಮಾಜ ಸೇವಕರು, ಮಲ್ಲೇಶ್ವರ, ಬೆಂಗಳೂರು
ದಿನಾಂಕ ೧೭.೧೧.೨೦೨೪ನೇ ಭಾನುವಾರ ಸಂಜೆ ೬.೩೦ಕ್ಕೆ ಹುಣ್ಣಿಮೆ ಹಾಡು-೨೦೩ ಸೃಷ್ಟಿ ನಿರಂತರ ಮತ್ತು ತಂಡದವರಿಂದ `ಡಾ’ ರಾಜ್ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ” ಮುಖ್ಯ ಅತಿಥಿಗಳು ಶ್ರೀ ದೊಡ್ಡಣ್ಣ ಹಿರಿಯ ಕನ್ನಡ ಚಲನಚಿತ್ರ ನಟರು
ದಿನಾಂಕ ೧೮.೧೧.೨೦೨೪ನೇ ಸೋಮವಾರ ಸಂಜೆ ೪.೩೦ಕ್ಕೆ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯವರಿಗೆ `ಕಡಲೆಕಾಯಿ ಅಭಿಷೇಕ”. ದಿನಾಂಕ ೧೮.೧೧.೨೦೨೪ನೇ ಸೋಮವಾರ ಸಂಜೆ ೬.೦೦ಕ್ಕೆ.
ಹುಣ್ಣಿಮೆ ಹಾಡು-೨೦೪: ಭಾರತದ ಪ್ರಸಿದ್ಧ ಸಾರಂಗಿ ವಾದಕರು ಹಾಗೂ ಹಿಂದುಸ್ತಾನಿ ಗಾಯಕರಾದ ಉಸ್ತಾದ್ ಫಯಾಜ್ಖಾನ್ ರವರಿಂದ `ಸಾರಂಗಿ ವಾದನ ಹಾಗೂ ಸಂಗೀತ ಕಾರ್ಯಕ್ರಮ ಮುಖ್ಯ ಅತಿಥಿಗಳು ಮುಖ್ಯ ಅತಿಥಿ: ಬಿ.ಕೆ. ಹರಿಪ್ರಸಾದ್ ಮಾನ್ಯ ವಿಧಾನಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ. ಶ್ರೀ ಗಣೇಶ ಅಮೀನಗಡ ಹಿರಿಯ ಪತ್ರಕರ್ತರು ಹಾಗೂ ಲೇಖಕರು, ಪುಸ್ತಕ ಬಿಡುಗಡೆ : ಸಾರಂಗಿ ನಾದದ ಬೆನ್ನೇರಿ (ಉಸ್ತಾದ್ ಫಯಾಜ್ ಖಾನ್ ಜೀವನಕಥನ) ಲೇಖಕರು : ಶ್ರೀ ಗಣೇಶ ಅಮೀನಗಡ ಡಾ. ಸಿ.ಬಿ. ಚಿಲ್ಲರಾಗಿ.