ಚಿಕ್ಕಬಳ್ಳಾಪುರ: ಹಿರಿಯ ಶಿಕ್ಷಕರಾದ ಗುಂಪು ಮರದ ಆನಂದ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಕನಕದಾಸರ ಜೀವನ ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಕನಕದಾಸರ ತಂದೆ ತಾಯಿಗೆ ಮಕ್ಕಳಿರಲಿಲ್ಲ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ನಂತರ ಕನಕದಾಸರು ಹುಟ್ಟಿದರು, ಅವರಿಗೆ ಸಿಕ್ಕ ಕೊಪ್ಪರಿಗೆ ಹೊನ್ನನ್ನು ಸಮಾಜದಲ್ಲಿ ಇರುವ ಜನಸಾಮಾನ್ಯರಿಗೆ ದಾನ ಮಾಡಿದರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ನ್ಯೂಸ್ ವರದಿಗಾರರಾದ ಕೆ ಎಸ್ ನಾರಾಯಣಸ್ವಾಮಿ ಅವರು ಮಾತನಾಡಿ ಕನಕದಾಸರ ಒಂದು ಧರ್ಮಕ್ಕೆ ಒಂದು ಜಾತಿಗೆ ಸೀಮಿತ ರಲ್ಲ ಸಮಾಜದ ಜನಸಾಮಾನ್ಯರ ಬದುಕನ್ನು ಹಸನ ಮಾಡಲು ಅನೇಕ ಕೀರ್ತನೆಗಳನ್ನ ರಚಿಸಿದರು ವಿದ್ಯಾರ್ಥಿಗಳಾದ ನೀವು ಜಾತಿ ಭೇದವನ್ನು ಮರೆತು ಎಲ್ಲರೂ ಒಂದಾಗಿ ಸಮಾಜದಲ್ಲಿ ಬಾಳಬೇಕು ಇಂಥ ದಾಸಶ್ರೇಷ್ಠರ ಸಾಹಿತ್ಯವನ್ನು ಓದಬೇಕು ಬೇರೆಯವರಿಗೂ ತಿಳಿಸಿಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಶಿಕ್ಷಕರಾದ ಮಹಾಂತೇಶ್ ಮಾತನಾಡಿ ‘ಕುಲ ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ,’ ಎಂದು ಹೇಳುತ್ತಾ, ಕನಕದಾಸರು ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ವಿದ್ಯಾರ್ಥಿಗಳಿಗೆ ಹಾಡಿನ ಮೂಲಕ ಹೇಳಿಸುತ್ತಾ ಸಮಾಜದಲ್ಲಿರುವ ಜನರು ಹೊಟ್ಟೆ ತುಂಬಿಸುವದಕ್ಕಾಗಿ ಮೈಯನ್ನ ಮುಚ್ಚಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂಬುದು ತಾತ್ಪರ್ಯವನ್ನು ತಿಳಿಸಿದರು.
ಕನಕದಾಸರ ಜೀವನ ಮತ್ತು ದಾಸ ಶ್ರೇಷ್ಠ ರನ್ನು ಈ ಸಂದರ್ಭದಲ್ಲಿ ಅವರ ಕೀರ್ತನೆಗಳು ಬೇಕು. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಸರಿ ಮಾಡಲು ದಾಸ ಶ್ರೇಷ್ಠರು ಪ್ರಯತ್ನಿಸಿದರು ಎಂದು ತಿಳಿಸಿದರು.ಹಿರಿಯ ಶಿಕ್ಷಕರಾದ ಶ್ರೀನಿವಾಸ ಮೂರ್ತಿ ಅವರು ಮಾತನಾಡಿ ಪ್ರಯತ್ನ ಒಂದಿದ್ದರೆ ಎಲ್ಲವನ್ನೂ ಸಾಧಿಸಬಹುದು ಕನಕದಾಸರಿಗೆ ಜಾತಿ ಎಂಬ ಅಡ್ಡಿ ಆತಂಕ ಅಂದಿನ ಕಾಲದಲ್ಲಿ ಇತ್ತು ಆದರೆ ಭಕ್ತಿ ಪೂರ್ವಕವಾಗಿ ಕೃಷ್ಣನನ್ನು ನೆನೆದಾಗ ಕೃಷ್ಣನು ಹಿಂದೆ ತಿರುಗಿ ಅವರಿಗೆ ಪ್ರತ್ಯಕ್ಷನಾದನು ಇಂದು ಅದು ಕನಕನ ಕಿಂಡಿಯಾಗಿ ಪರಿವರ್ತನೆಯಾಗಿದೆ ಎಂಬುದನ್ನು ನಾವು ತಿಳಿಯಬಹುದು ಜೀವನದಲ್ಲಿ ವಿದ್ಯಾರ್ಥಿಗಳಾದ ನಿಮಗೆ ಪ್ರಯತ್ನ ಮತ್ತು ಶ್ರದ್ಧೆ ಮತ್ತು ನಿಷ್ಠೆ ಇರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಭಾರ್ಗವಿ, ಹರ್ಷ, ಅನನ್ಯ, ಮೌಲ್ಯ, ಅಕ್ಷಯ್ ಗೌಡ, ಕನಕದಾಸರ ಜೀವನ ಮತ್ತು ಸಾಧನೆಯನ್ನು ತಿಳಿಸಿದರು ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.