ಬೆಳಗಾವಿ: ಅಧಿವೇಶನದಲ್ಲಿ ಇಂದಿನ ಕಾರ್ಯಕಲಾಪ ಶುರುವಾಗುವ ಮೊದಲು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅವಕಾಶ ನೀಡಲಾಗದು ಎಂದಿರುವ ಜಿಲ್ಲಾಧಿಕಾರಿಯವರನ್ನು ಭೇಟಿಯಾಗುವುದಾಗಿ ಹೇಳಿದರು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೀವಾ ಅಥವಾ ಇನ್ಯಾವುದಾದರೂ ಯುಗದಲ್ಲಿ ವಾಸವಾಗಿದ್ದೀವಾ ಅಂತ ಅವರನ್ನು ಕೇಳಬೇಕಿದೆ, ಹಿಂದೂಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದಿಂದ ನಡೆದಿದೆ ಎಂದು ಯತ್ನಾಳ್ ಹೇಳಿದರು.