ನೆಲಮಂಗಲ: ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಅವ್ಯವಹಾರ ಗಳನ್ನು ಖಂಡಿಸಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಭ್ರಷ್ಟ ಅಧಿಕಾರಿಗಳ ವಿರುದ್ದ ಬಿಜೆಪಿ – ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರ ಬಳಿ ಸಮಾದೇಶಗೊಂಡ ನೂರಾರು ಮಂದಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭ್ರಷ್ಟ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಬಳಿಕ ನಗರದ ತಾಪಂ ಆವರಣದಲ್ಲಿ ಧರಣ ನಡೆಸಿ ಭ್ರಷ್ಟ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶೇಷ ತಹಸೀಲ್ದಾರ್ ಭಾಗ್ಯ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿಶಾಸಕರು ಪಂಚಾಯಿತಿಗಳಲ್ಲಿ ಅವರಿಗೆ ಬೇಕಾದ ಪಿಡಿಓಗಳನ್ನು ನಿಯೋಜನೆ ಮಾಡಿಕೊಂಡು ಜನರ ಮೇಲೆ ಬಿಜೆಪಿಜೆಡಿಎಸ್ ಬೆಂಬಲಿತ ಸದಸ್ಯರಿಗೆ ತೊಂದರೆಯುಂಟು ಮಾಡುತಿದ್ದಾರೆ. ಕಾನೂನಾತ್ಮ ಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಶಾಸಕರ ಅಧೀನರಾಗಿದ್ದಾರೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದರಿ ಮಾತನಾಡಿ, ತಾಲೂಕಿನ 21 ಗ್ರಾಮ ಪಂಚಾಯ್ತಿಯಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿತ ಸದಸ್ಯರ ಮೇಲಿನ ದೌರ್ಜನ್ಯ
ವನ್ನು ಖಂಡಿಸಬೇಕಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿನೀರಿನ ಸಂಪರ್ಕ ಕೊಡಿ ಅಂದ್ರೆ ಅಧಿಕಾರಿಗಳು ಶಾಸಕರನ್ನುಕೇಳಿ ಅಂತಾ ಹೇಳ್ತಾರಂತೆ, 61 ಎಕರೆ ಜಮೀನು ಖಾತೆಮಾಡೋಕೆ ಅಧಿಕಾರಿಗಳು 1 ಕೋಟಿ ಲಂಚ ಪಡೆದಿದ್ದಾರೆಎನ್ನಲಾಗಿದೆ.
ತ್ಯಾಮಗೊಂಡ್ಲು ಪಿಡಿಒ ವಿರುದ್ಧ ಎಫ್ಐಆರ್ ದಾಖಲಾಗಿದೆ, ಅಧ್ಯಕ್ಷರೇ ದೂರು ಕೊಟ್ಟಿದ್ದಾರೆಅಂತಹವರಿಗೆ ಯಾವುದೇ ಕ್ರಮ ಕೈಗೊಳದೆ ಮೂರು ಪಂಚಾಯ್ತಿ ಚಾರ್ಜ್ಕೊಟ್ಟಿದ್ದಾರೆ. ನಮ್ಮ ತಾಲೂಕಿನಲ್ಲಿ ನಮ್ಮ ಪ್ರತಿಭಟನೆಯನ್ನು ಪ್ರವಾಸಿ ಮಂದಿರದಲ್ಲಿ ತಡೆಯುವ ಹುನ್ನಾರ ಮಾಡಲಾಗಿತ್ತು, ಆದರೆ ನಾವು ಯಾವುದಕ್ಕು ಜಗ್ಗುವುದಿಲ್ಲ ಕೂಡಲೇ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಗಲಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ 50 ರಿಂದ 60 ಜನ ಬಡವರು ವಾಸ ಮಾಡುವ ಮನೆಗಳಿಗೆ ದಾರಿ ಬಿಡಬೇಕೆಂದು ಸರ್ಕಾರದ ಆದೇಶ ಮಾಡಿದರು ದಾರಿ ಬಿಡದೆ ದಬ್ಬಾಳಿಕೆ ಮಾಡುತ್ತಿರುವ ತಹಶೀಲ್ದಾರ್ ವಿರುದ್ಧ ಕಿಡಿ ಕಾರಿದರು. ಹೊನ್ನೇನಹಳ್ಳಿ, ತ್ಯಾಮಗೊಂಡ್ಲು, ಕಳಲು ಘಟ್ಟ, ಸೇರಿದಂತೆ ಪಂಚಾಯ್ತಿಗಳಲ್ಲಿ ಪಿಡಿಒಗಳ ಭ್ರಷ್ಟಾಚಾರ ಅತಿಯಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ತಡೆದ ಪೊಲೀಸರು: ನಗರದ ಪ್ರವಾಸಿ ಮಂದಿರದಿಂದ ಹೊರಟಾ ಪ್ರತಿಭಟನಾ ರ್ಯಾಲಿ ಯನ್ನು ಪೊಲೀಸರು ತಡೆಯಲು ಪ್ರಯತ್ನಿಸಿದರು, ಆದ್ರೆ ಪ್ರತಿಭಟನಾಕಾರರು ಬ್ಯಾರೀಕೇಟ್ಗಳನ್ನ ತಳ್ಳಿ ಮುನ್ನುಗ್ಗಿದರು. ಬಳಿಕೆ ತಾಲ್ಲೂಕು ಪಂಚಾಯ್ತಿ ಕಚೇರಿ ಒಳಗೆ ಹೋಗದಂತೆ ಕಚೇರಿಗೆ ಗೇಟ್ಗೆ ಬ್ಯಾರಿಕೆಟ್ ಅಳವಡಿಸಿದರು ಬಿಡದ ಪ್ರತಿಭಟನಾಕಾರರು ಗೇಟ್ ತೆಗೆದು ಒಳ ನುಗ್ಗಿ ಪಿಡಿಓ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ್ ಹೊರಹಾಕಿದರು.
ಪ್ರತಿಭಟನೆಯಲ್ಲಿ, ಮಾಜಿ ಶಾಸಕ ಎಂ.ವಿ ನಾಗರಾಜು, ರಾಜಮ್ಮ, ಮಂಜುಳಾಸುರೇಶ್, ಬೃಂಗೇಶ್, ಹ್ಯಾಡಾಳ್ ಹರ್ಷ, ಪುಟ್ಟಣ್ಣ, ನಿರ್ಮಾಪಕ ನಾಗರಾಜು, ಮಹೇಶ್, ಮುರುಳಿಧರ್(ಮಧು), ಸಿದ್ದರಾಜು, ಜೆಡಿಎಸ್ ಕಾರ್ಯಧ್ಯಕ್ಷ ಬೂದಿಹಾಳ್ ರಾಜು, ಕಸಬಾ ಅಧ್ಯಕ್ಷ ರಮೇಶ್, ಜಿವಿ ಸುರೇಶ್, ಸೋಂಪುರ ಅಧ್ಯಕ್ಷರು ಮೋಹನ್ ಕುಮಾರ್, ನಗರಸಭೆ ಸದಸ್ಯರು ಪಾಪಣ್ಣಿ, ಸುನೀಲ್ ಮೂಡ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಕಂಬದಕಲ್ಲು ನಾರಾಯಣ, ಎಂ.ರವಿ, ತ್ಯಾಮಗೊಂಡ್ಲು ರಂಗಸ್ವಾಮಿ, ಬಿಎಂ ಶ್ರೀನಿವಾಸ್, ಕಾರೆಹಳ್ಳಿ ಗುರುಪ್ರಕಾಶ್ ಸೇರಿದಂತೆ ಜೆಡಿಎಸ್ ಬಿಜೆಪಿ ಕಾರ್ಯಕ್ರರ್ತರು ಉಪಸ್ಥಿತರಿದ್ದರು.