ಇದಕ್ಕೇ ನೋಡಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸ್ಪೆಷಲ್ ಎಂದು ಹೇಳುವುದು. ಇಲ್ಲಿನ ಪಿಚ್ ನ ಅಂತರಂಗವನ್ನು ಅರಿತವ ಮಾತ್ರ ಚೆನ್ನಾಗಿ ಆಡಬಲ್ಲ. ಕಳೆದ ವರ್ಷ ನ್ಯೂಜಿಲೆಂಡಿನ ವೇಗಿಗಳು ಭಾರತ ತಂಡವನ್ನು ಇದೇ ಪಿಚ್ ನಲ್ಲಿ 46 ರನ್ ಗಳಿಗೆ ಆಲೌಟ್ ಮಾಡಿತ್ತು.
ಇದೀಗ ಕರ್ನಾಟಕ ತಂಡದ ವೇಗದ ಬೌಲರ್ ಗಳು ಪಂಜಾಬ್ ಬ್ಯಾಟರ್ಗಳನ್ನು ಗೋಳು ಹೊಯ್ದುಕೊಂಡಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾದ ರಣಜಿ ಟ್ರೋಫಿಯ ಎಲೈಟ್ ಸಿ ಗ್ರೂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸಿದೆ.