ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿಗಳು ಹೆಚ್.ಡಿ.ದೇವೇಗೌಡ ಅವರು, ಚನ್ನಪಟ್ಟಣ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡು ಮತಯಾಚನೆ ಮಾಡಿದರು.
ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು,ಎರಡು ಬಾರಿ ಪೆಟ್ಟು ತಿಂದು ಮತ್ತೆ ನಿಮ್ಮನ್ನು ನಂಬಿ ಬಂದು ನಿಂತಿದ್ದೇನೆ. ಸನ್ಮಾನ್ಯ ಡಿ.ಕೆ ಶಿವಕುಮಾರ್ ರವರೇ, ನಿಮ್ಮ ಸಹೋದರ ಡಿಕೆ ಸುರೇಶ್ ರವರು ಮೂರು ಬಾರಿ ಸಂಸದರಾಗಿದ್ದರು, ಹಾಗಾದ್ರೆ ಚನ್ನಪಟ್ಟಣಕ್ಕೆ ನಿಮ್ಮ ಸಹೋದರ ಡಿಕೆ ಸುರೇಶ್ ರವರ ಕೊಡುಗೆ ಏನು.?, ನೇರವಾಗಿ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದರು.
ಯೋಗೇಶ್ವರ್ ರವರಿಗೆ ಜನತಾದಳ ಚಿಹ್ನೆಯಡಿ ನಿಂತುಕೊಳ್ಳಿ ಅಂತ ಹೇಳಿದ್ವಿ, ಬಿಜೆಪಿ ಟಿಕೆಟ್ ಬೇಕು ಅಂದ್ರು, ಕುಮಾರಸ್ವಾಮಿ ಯವರು ಬಿಜೆಪಿ ಜೊತೆ ಸಂಬAಧ ಹಾಳು ಮಾಡಬಾರದು ಅಂತ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ರು, ಆದರೆ ಸಚಿವ ಸ್ಥಾನ ಕೊಟ್ಟಿದ್ದ ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ಗೆ ಹೋಗಿದ್ದಾರೆ. ಯೋಗೇಶ್ವರ್ ಅವರು ಆರು ವರ್ಷ ಮೇಲೆ ಒಂದು ಪಕ್ಷದಲ್ಲಿ ಇಲ್ಲ ಅವರು, ಅಂಥದ್ರಲ್ಲಿ ಇವರು ಚನ್ನಪಟ್ಟಣ ಏನು ಪ್ರತಿನಿಧಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.
ಚಕ್ಕೆರೆ ಭಾಗದಲ್ಲಿ ಜನತಾದಳ ಪಕ್ಷದಲ್ಲಿ ಗುರುತಿಸಿಕೊಂಡವರ ಈ ಪಕ್ಷ ತೊರೆದು ಹೋದರು. ಬಹಳಷ್ಟು ಜನ ಯುವಕರು ಕೂಡ ಚೆಕ್ಕೆರೆಯಿಂದ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ, ಯಾರೋ ಒಬ್ಬರು ಹೋದರೆ, ನೂರಾರು ಜನ ಬರ್ತಾರೆ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿರು.
ಈ ಚುನಾವಣೆ ನನಗೆ ಅತ್ಯಂತ ಅನೀರಿಕ್ಷೀತ ಕೊನೆ ಹಂತದ ತೀರ್ಮಾನ, ಎರಡೂ ಪಕ್ಷದ ತೀರ್ಮಾನ ಮಾಡಿ ಸ್ಪರ್ಧೆ ಮಾಡಿದ್ದೇನೆ.ಇಡೀ ರಾಜ್ಯ ಸರಕಾರ, ಸಚಿವ ಸಂಪುಟ ಆದಿಯಾಗಿ ಚನ್ನಪಟ್ಟಣ ತಾಲೂಕಿನಲ್ಲಿ ಬಂದು ನಿಂತಿದ್ದಾರೆ.ನನ್ನ ಎರಡು ಸೋಲು, ನನ್ನ ಸೋಲಲ್ಲ, ಜನ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ ಎಂದರು.
ಎಲ್ಲಾ ಸಮುದಾಯ, ಎಲ್ಲಾ ವರ್ಗದವರು ಮನೆ ಮಗ ಅಂತ ನನ್ನ ಆಶೀರ್ವಾದ ಮಾಡಿದ್ದಾರೆ. ಭಾರತದ ದೇಶದ ಶಕ್ತಿ ಮಹಿಳೆಯರು, ತಾಯಾಂದಿರು ಮನಸ್ಸು ಮಾಡಿದ್ರೆ ಚನ್ನಪಟ್ಟಣ ಬದಲಾ ವಣೆ ಮಾಡಬಹುದು. ನಾನು ಶಾಸಕನಾಗಬೇಕು ಅಂತ ಚುನಾವಣೆ ಮಾಡ್ತಾ ಇರೋದಲ್ಲ ನಿಮ್ಮ ಮನೆಯ ಮಕ್ಕಳು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನನಗೆ ನನ್ನ ಜಾವಾಬ್ದಾರಿಯ ಅರಿವಿದೆ. ಪ್ರತಿಯೊಬ್ಬರ ಭವಿಷ್ಯ ರೂಪಿಸುವ ಕಾರಣಕ್ಕೆ ಬಂದಿದ್ದೇನೆ ಎಂದರು.
ಕಳೆದ ಎರಡು ಚುನಾವಣೆ ಗಳ ಕುತಂತ್ರ ರಾಜಕಾರಣದಲ್ಲಿ ನಾನು ಸೋತಿದ್ದೆ, ಚುನಾವಣಾ ರಾಜಕೀಯದಿಂದ ದೂರ ಇರಬೇಕು ಅನ್ಕೊಂಡಿದ್ದೆ. ಆದರೆ ಬಹಳಷ್ಟು ಕಾರ್ಯಕರ್ತರ ಪ್ರೀತಿಗೆ ಮತ್ತೆ ವಾಪಸ್ ಚುನಾವಣೆ ಬಂದಿದ್ದೇನೆ ಎಂದರು.
೨೦೧೯ ರ ಲೋಕಸಭೆ ಚುನಾವಣೆ ಮೈತ್ರಿ ಧರ್ಮ ಪಾಲನೆ ಮಾಡ್ಲಿಲ್ಲ. ಐದು ವರ್ಷ ಕುಮಾರಸ್ವಾಮಿ ಸರಕಾರ ಕೊಡ್ತೀವಿ ಅಂದಿದ್ರು ೨೦೧೮ರಲ್ಲಿ ಕುಮಾರಣ್ಣ ರೈತರಿಗೆ ಒಂದ್ ಮಾತನ್ನು ಕೊಟ್ರು, ಒಮ್ಮೆ ರಾಜ್ಯದ ಜನ ಸಂಪೂರ್ಣ ಬಹುಮತ ಕೊಡಿ ಅಂತ ಕೇಳಿದ್ರು ಆದರೆ ಕುಮಾರಸ್ವಾಮಿಯವರಿಗೆ ಸಂಪೂರ್ಣ ಬಹುಮತ ಬರದೇ ಇದ್ರೂ ರೈತರ ಸಾವಿರಾರು ಕೋಟಿ ಸಾಲಮನ್ನಾ ಮಾಡಿದ್ರು ಎಂದು ತಿಳಿಸಿದರು.
ಕುಮಾರಣ್ಣ ಇವತ್ತು ಕೇಂದ್ರ ಕೈಗಾರಿಕಾ ಮಂತ್ರಿ ಆಗಿದ್ದಾರೆ. ರಾಮನಗರ ಜಿಲ್ಲೆಯ ಜನತೆಗೆ ಯುವಕರಿಗೆ, ತಾಯಂದಿರಿಗೆ ಏನಾದ್ರು ಕೊಡಬೇಕು ಅಂತ ಪಣ ತೊಟ್ಟಿದ್ದಾರೆ. ಮಂಡ್ಯ ಮತ್ತು ರಾಮನಗರ ಮಧ್ಯ ಕಾರ್ಖಾನೆ ತೆಗೆದು ೨೫ ಸಾವಿರ ಯುವಕರಿ ಉದ್ಯೋಗ ನಿರ್ಮಾಣ ಮಾಡುವ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಇಷ್ಟು ದಿನ ಚನ್ನಪಟ್ಟಣ, ತಾಲ್ಲೂಕು ಇದೇ ಅಂತ ಕಾಂಗ್ರೆಸ್ ಗೆ ಗೊತ್ತಿರಲಿಲ್ಲ, ಯಾಕೆ ಈ ಹಿಂದೆ ಚನ್ನಪಟ್ಟಣ ಕಂಡಿರಲಿಲ್ವಾ, ಸತ್ತೆಗಾಲದಿಂದ ನೀರು ಕೊಡಬೇಕು ಅಂತ ಕುಮಾರಸ್ವಾಮಿ ನಿರ್ಧಾರ ತೆಗೆದುಕೊಂಡರು.ಇದು ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಪ್ರಶ್ನೆ ಅಲ್ಲ, ಎನ್ ಡಿ ಎ ಕುಟುಂಬ ಪ್ರಶ್ನೆ, ಮೂರುವರೆ ವರ್ಷದ ಪ್ರಶ್ನೆ ಒಂದು ಸಲ ಅವಕಾಶ ಕೊಟ್ಟು ನೋಡಿ, ನಿಮ್ಮ ಜೊತೆ ಇರ್ತೇನೆ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಅವರು, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಜಯಮುತ್ತು ಅವರು ಸೇರಿದಂತೆ ಜೆಡಿಎಸ್ ಮತ್ತು ಪಕ್ಷಗಳ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಮುಖಂಡರು, ಅಸಂಖ್ಯಾತ ಜನರು, ಹೆಚ್ಚು ಪ್ರಮಾಣದಲ್ಲಿ ತಾಯಂದಿರು ನೆರೆದಿದ್ದರು.