ಬೆಳಗಾವಿ: ಬೆಳಗಾವಿಯ ಪುರಾತನ 5700 ವರ್ಷಗಳ ಇತಿಹಾಸ ವಿರುವ ಕಪಿಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಭೇಟಿ ಮಾಡಿ ದೇವರ ದರ್ಶನವನ್ನು ಮಾಡಿದರು.
ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನಾಳೆ ನಡೆಯಲಿರುವ ಜೇ ಬಾಪು, ಜೈ ಬೀಮ್, ಜೈ ಸಂವಿಧಾನ ಘೋಷ ವಾಕ್ಯ ದ ಗಾಂಧಿ ಭಾರತ ಸಮಾವೇಶಕ್ಕೆ ಬರುವ ಎಲ್ಲಾ ಕಾರ್ಯಕರ್ತರು, ಸಾರ್ವಜನಿಕರಿಗೆ ಕ್ಯಾಟಲ್ ಕ್ರೀಡಾಂಗಣದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಲಿಸಲಾಗಿದೆ ಎಂದರುಪುರಾತನ ದೇವಸ್ಥಾನದ ಬೇಟಿ ಬಹಳ ಸಂತೋಷವಾಗಿದ್ದು ನಾಡಿನ ಸಮಸ್ತ ಜನತೆಗೆ ಒಳ್ಳೆಯ ಆರೋಗ್ಯ ವನ್ನು ಕರುಣಿಸಲಿ ಮತ್ತು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು.
ದಲಿತ ಮುಖ್ಯಮಂತ್ರಿ ವಿಚಾರವಾಗಿ ನಮಗೆ ಈಗ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹೈಕಮಾಂಡ್ ಸೂಚನೆಯನ್ನು ಎಲ್ಲಾ ನಾಯಕರು ಪಾಲಿಸಬೇಕು ಅನಗತ್ಯ ಹೇಳಿಕೆಗಳನ್ನು ಕೊಡದೆ ಪಕ್ಷದ ಸೂಚನೆಯನ್ನು ಪಾಲಿಸಬೇಕಾಗುತ್ತದೆ ಎಂದರು.ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ಕಾರ್ಯನಿರವಹಿಸಿತ್ತಿದ್ದು ಯಾವುದೇ ಹುದ್ದೆ ಖಾಲಿ ಇಲ್ಲಾ ಇದರ ಕುರಿತು ಮಾತನಾಡುವುದು ಅಪ್ರಸ್ತುತ ಎಂದರು ನಮ್ಮ ಸರ್ಕಾರ ಜನಪರವಾಗಿದ್ದು ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಬೇರೆ ರಾಜ್ಯಗಳಲ್ಲಿ ಜಾರಿಗೊಳಿಸಿತ್ತಿದ್ದಾರೆ ಅಂದರೆ ನಮ್ಮ ಗ್ಯಾರಂಟಿ ಗಳು ಯಾವರೀತಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ ಎಂಬುದನ್ನು ತಾವು ಗಮನಿಸಬಹುದು ಎಂದರು.
ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ಅರ್ಚಕ ನಾಗರಾಜ ಕಟ್ಟಿ,ಟ್ರಸ್ಟ್ ನ ಚೌಹಾನ್ , ಸಿಬ್ಬಂದಿವರ್ಗದವರು, ಮುಖಂಡರು ಉಪಸ್ಥಿತರಿದ್ದರು.