ಚಿಕ್ಕಬಳ್ಳಾಪುರ: ರಾಜಕೀಯವಾಗಿ ನಾವು ಎಷ್ಟೆ ವಿರೋಧಿಗಳಾದರು ಜಾತಿ ಸಂಬಂಧ ಸಮಾರಂಭಗಳಲ್ಲಿ ನಾವೆಲ್ಲಾ ಒಂದೆ, ಒಟ್ಟು ಕುಟುಂಬದ ಕುಡಿಗಳು ಎನ್ನುವುದನ್ನ ಶಾಸಕರು ಮತ್ತು ಸಮುದಾಯದ ಮುಖಂಡ ಒಬ್ಬರಿಗೊಬ್ಬರನ್ನ ತಬ್ಬಿಕೊಂಡು ಆಲಿಂಗಿಸಿದ ಸಂದರ್ಭಕ್ಕೆ ಇಂದಿನ ಕೃಷ್ಣದೇವರಾಯನ ಅದ್ದೂರಿ ಮೆರವಣಿಗೆ ಸಾಕ್ಷಿಯಾಯಿತು.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಮೂಲತಹ ಕೃಷಿ ಮತ್ತು ಹೈನೋದ್ಯಮಕ್ಕೆ ಹೆಸರುವಾಸಿ ಇಲ್ಲಿನ ರೈತರ ಮತ್ತು ವ್ಯಾಪಾರಿಗಳ ಸಂಬಂದವನ್ನ ವೃದ್ದಿಗೊಳಿಸಿದ್ದು ಶ್ರೀ ಕೃಷ್ಣ ದೇವರಾಯನ ಆಸ್ಥಾನದ ಸೇವಕರು ಎಂದು ಪುರಾಣಗಳಲ್ಲಿ ಹೇಳಲಾಗುತ್ತಿದೆ. ಶ್ರೀ ಕೃಷ್ಣದೇವರಾಯನ ಸಮುಧಾಯ ಇಲ್ಲಿ ಹೆಚ್ಚಾಗಿ ಇದ್ದಾರೆ. 555 ವರ್ಷಗಳ ನಂತರ ನಗರದ ಜನ ಮತ್ತೆ ಶ್ರೀ ಕೃಷ್ಣದೇವರಾಯನ ನೋಡುವಂತ ಭಾಗ್ಯ ಬಂದಿದೆ. ಬೆಂಗಳೂರು ಬಲಿಜ ಯುವ ಶಕ್ತಿಯಿಂದ ಹದಿನಾರರಂದು ನಡೆಯುವ ಶ್ರೀ ಕೃಷ್ಣದೇವರಾಯ ಜಯಂತಿ ಅಂಗವಾಗಿ ಮಂಗಳವಾರ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನಗರದ ಮೂಲಕ ಹಾದು ಹೋಗುತ್ತಿರುವ ರಥದ ಯಾತ್ರೆಇಲ್ಲಿನ ಬಲಿಜ ಸಮುಧಾಯದವರು ಅದ್ದೂರಿ ಸ್ವಾಗತ ಕೋರಿದರು. ಸ್ವಾಗತ ಮೆರವಣಿಗೆ ಮರಳುಸಿದ್ದೇಶ್ವರ ದೇವಾ
ಲಯದ ಬಳಿ ಬರಮಾಡಿಕೊಂಡ ಮುಖಂಡರು ಎಂ.ಜಿರಸ್ತೆ ಮತ್ತು ಬಿಬಿ ರಸ್ತೆ ಮೂಲಕ ಒಕ್ಕಲಿಗರ ಕಲ್ಯಾಣ ಮಂಟಪದವರೆಗೂ ಸಾಗಿ ದೊಡ್ಟಬಳ್ಳಾಪುರಕ್ಕೆ ಬೀಳ್ಕೊಟ್ಟರು.
ಇನ್ನು ಬಲಿಜ ಸಮುಧಾಯದ ಕುಲಬಾಂದವರು ಶ್ರೀ ಕೃಷ್ಣದೇವರಾಯ ಆಗಿದ್ದರಿಂದ ಚಿಕ್ಕಬಳ್ಳಾಪುರ ನಗರ ಸುತ್ತಮುತ್ತ ಮುಖಂಡರು ಪಕ್ಷತೀತವಾಗಿ ಒಂದಾಗಿ ಮೆರವಣಿಗೆ ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಮೇಲೆ ಪ್ರದೀಪ್ ಈಶ್ವರ್ ಮತ್ತು ಸಮಜದ ಪ್ರಭಾವಿ ನಾಯಕ ಕೆ.ವಿ.ನವೀನ್ ಕಿರಣ್ ರಾಜಕೀಯ ವಿರೋದಿಗಳಾಗಿ ಹೊರಹೊಮ್ಮಿದ್ದರು. ಒಬ್ಬರನ್ನೊಬ್ಬರು ಸೇರುವ ಸಂದರ್ಭಗಳೆ ಒದಗಿ ಬಂದಿರಲಿಲ್ಲ ಶ್ರೀಕೃಷ್ಣದೇವರಾಯ ಮೆರವಣಿಗೆ ವೇಳೆ ಇಬ್ಬರು ಒಂದು ಕಡೆ ಸೇರಿದ್ದರಿಂದ ಬಹಳ ದಿನಗಳ ನಂತರ ಬೇಟಿ ಮಾಡಿದ ಖುಷಿಯಲ್ಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡು ಶೇಕ್ ಹ್ಯಾಂಡ್ ಮಾಡಿ ಕುಶಲ ಕ್ಷೇಮ ಸಮಾಚಾರಗಳ ಬಗ್ಗೆ ಮಾತುಗಳನ್ನಾಡಿದರು. ಇದನ್ನ ನಿರೀಕ್ಷಿಸದ ಜನಾಂಗದ ಮುಖಂಡರು ಖುಷಿಯಾಗಿಬಿಟರು.
ಇನ್ನು ಇಂದಿನ ಅದ್ದೂರಿ ಮೆರವಣಿಗೆಯಲ್ಲಿ ಸಮು ದಾಯದ ಮಹಿಳೆಯರಿಂದ ಪೂರ್ಣ ಕುಂಬ ಕಳಶ, ಚಂಡೆ ಮದ್ದಳೆ, ನಾದಸ್ವರ, ವೀರಗಾಸೆ ಕುಣಿತ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತ್ತು ಮೆರವಣಿಗೆಯಲ್ಲಿ ಸಾಗಿ ಬಂದ ದಾಹ ನೀಗಿಸಲು ಕರವೇ ಅಧ್ಯಕ್ಷ ಅಲ್ಲಲ್ಲಿ ನೀರಿನ ಪಾಕೇಟ್ ವಿತರಣೆ ವ್ಯವಸ್ಥೆ ಮಾಡಿದ್ದರು. ಮೆರವಣಿಗೆಯಲ್ಲಿ ಸಮುದಾಯದ ರಾಜ್ಯ ಮುಖಂಡರು ಮತ್ತು ಸ್ಥಳೀಯ ಸಮುದಾಯದವರು ಪಾಲ್ಗೊಂಡಿದ್ದರು.