ಬೆಳಗಾವಿ: ಮಗಳೊಂದಿಗೆ ಅನುಚಿತವಾಗಿ ವರ್ತಿಸಲು ಮುಂದಾದ ಪತಿಯನ್ನು ಪತ್ನಿಯೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಉಮಾರಾಣಿ ಗ್ರಾಮದಲ್ಲಿ ನಡೆದಿದೆ.
ಸಾವಿತ್ರ ಇಟ್ನಾಳ್ ಎಂಬಾಕೆ ತನ್ನ ಪತಿ ಶ್ರೀಮಂತ ಇಟ್ನಾಳ್ ಅವರನು ಕೊಲೆಗೈದು ಶªವನ್ನು ಸಾಗಿಸಲಾಗದೆ ಎರಡು ತುಂಡು ಮಾಡಿ ಬ್ಯಾರಲ್ಗೆ ಹಾಕಿ ಪಕ್ಕದ ಕಿಬ್ಬನ ಗದ್ಧಗೆ ಎಸೆದು ಬ್ಯಾರೆಲ್ ತೊಳೆದು ಮುಚ್ಚಿಟ್ಟಿದ್ದಳು ಎಂದು ಹೇಳಲಾಗಿದೆ.
ಘಟನೆ ಸಂಬಂಧಸಾವಿತ್ರಿ ಇಟ್ನಾಳ್ನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ ಬಂಧಿತಳು ತನ್ನನ್ನು ಬಂಧಿಸಿರುವ ಪರಿಣಾಮ ತನ್ನ ಮಕ್ಕಳು ಅನಾಥರಾಗುತ್ತಾರೆ. ಬಿಟ್ಟುಬಿಡಿ ಎಂದು ಗೋಳಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.