ಬೆಂಗಳೂರು: ತನ್ನ ಪತ್ನಿಯನ್ನು ಹೆದರಿಸಲು ನೇಣುಹಾಕಿಕೊಂಡ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ನೆಲಮಂಗಲ ತಾಲೂಕಿನ ಬಾವೂರು ಗ್ರಾಮದಲ್ಲಿ ನಡೆದಿದೆ.
ನಂದ್ಕುಮಾರ್ ಎಂಬಾತ ಸಾವನ್ನಪ್ಪಿರುವ ದುರ್ದೈವಿ.
ನಿನ್ನೆ ಸಂಕ್ರಾಂತಿ ಹಬ್ಬದ ದಿನ ಮದ್ಯಸೇವಿಸಿ ಬಂದ ನಂದಕುಮಾರ್ ಹಾಗೂ ಪತ್ನಿ ಪವಿತ್ರ ನಡುವೆ ಜಗಳವಾಗಿ ನಂದಕುಮಾರ್ ನೇಣುಹಾಕಿಕೊಂಡಿದ್ದಾನೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ನಂದಕುಮಾರ್ ದಂಪತಿಗೆ ಒಂದು ವರ್ಷದ ಮಗು ಇದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.