ಮುಳಬಾಗಿಲು: ಪತ್ರಕರ್ತರ ಸಂಘದ ನಿವೇಶನಕ್ಕೆ ಜಾಗ ನೀಡುವುದರ ಜೊತೆಗೆ. ಕಟ್ಟಡ ನಿರ್ಮಾಣಕ್ಕೆ ೧೫ ಲಕ್ಷ ಅನುದಾನ ನೀಡುತ್ತೇನೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.ನಗರದ ಪುರಂದರ ಭವನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಾರ್ಗಿಲ್ ವಿಜಯೋತ್ಸವ ಮತ್ತು ನಿವೃತ್ತ ಯೋದರಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನ್ನ ಬಳಿ ಉಪಯೋಗ ಪಡೆದುಕೊಂಡು ಯಾರ ಬಳಿಯೂ ಕೈ ಚಾಚಬೇಡಿ. ಇದರಿಂದ ನನಗೆ ಮುಜುಗರ ಆಗುತ್ತದೆ ಎಂದರು.
ತಾಲ್ಲೂಕಿನಲ್ಲಿ ಚುನಾವಣಾ ಸಂದರ್ಭದಲ್ಲಿ ಕೆಲ ವಲಸಿಗರು ಸಮಾಜ ಸೇವೆ ಹೆಸರಿನಲ್ಲಿ ಇಲ್ಲಿಗೆ ಬರುತ್ತಾರೆ. ಚುನಾವಣೆ ಮುಗಿದ ನಂತರದ ದಿನಗಳಲ್ಲಿ ಕಣ್ಮರೆಯಾಗುತ್ತಾರೆ. ಕೆಲವರು ಇಂತಹವರ ಹಿಂದೆ ಬೀಳಬೇಡಿ. ನಿರಂತರವಾಗಿ ಸೇವೆ ಮಾಡುವವರನ್ನು ನಂಬಬೇಕು ಎಂದು ತಿಳಿಸಿದರು.ರಾಜ್ಯದಲ್ಲಿ ಅಧಿವೇಶನ ಸಮಯದಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ಶಾಸಕ ನಾನೇ ಆಗಿದ್ದೇನೆ.
ಇಡೀ ಸದನವೆ ನನ್ನ ಪ್ರಶ್ನೆಗಳನ್ನು ಕೇಳುವ ಜೊತೆಗೆ ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ನನ್ನ ಬಳಿ ಮಾತನಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದರು.ಸೆಕ್ಯೂರಿಟಿ, ಎಸ್.ಟಿ.ಡಿ ಬೂತ್, ಸ್ಟುಡಿಯೋ ದಲ್ಲಿ ಲೈಟ್ ಬಾಯ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡಿ ವಿದ್ಯಾಭ್ಯಾಸ ಪಡೆದುಕೊಂಡು ಈ ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ದಿಮೆಗಳು ಮಾಡುತ್ತಿದ್ದೇನೆ.
೧೨ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇನೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಕಂಪನಿಗಳಿಂದ ಅನುದಾನವನ್ನು ತಂದು ಮಾದರಿ ಮುಳಬಾಗಿಲು ತಾಲೂಕನ್ನು ನಿರ್ಮಾಣ ಮಾಡುವುದು ಖಚಿತ ಎಂದರು.೫೦ಸಾವಿರ ನನಗೆ ಸಂಬಳ ಬರುತ್ತಿದ್ದು, ಇದರಲ್ಲಿ ೮೦ಸಾವಿರ ಖರ್ಚಾಗುತ್ತಿದೆ. ಇದೇ ರೀತಿ ಸರ್ಕಾರದ ಪರಿಸ್ಥಿತಿ ಆಗಿದೆ. ಸರ್ಕಾರದಲ್ಲಿ ಹಣಕಾಸು ಖಾಲಿ ಆಗಿದೆ. ಏನೇ ಆದರೂ ಸಹ ಕಳಂಕ ಮುಕ್ತ ಆಡಳಿತ ನಡೆಸಬೇಕು ಎಂಬ ಕನಸು ಕಟ್ಟಿದ್ದೇನೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಿಕಾ ದಿನಾಚರಣೆ ಪತ್ರಕರ್ತರ ಹಬ್ಬ. ಇಪ್ಪತ್ತು ವರ್ಷಗಳಿಂದ ಕೋಲಾರದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.ಶ್ವಾಶತ ನೀರಾವರಿ ಹೋರಾಟ ಮುಂಚಿಣಿಯಲ್ಲಿ ನಿಂತಿದ್ದು ಪತ್ರಕರ್ತರ ಶ್ರಮ ಇದೆ. ಇಷ್ಟಾದರೂ ರೈತರು ಬೆಳೆಯಿಂದ ನಷ್ಟ ಆಗಿಲ್ಲ ಕೊಳವೆ ಬಾವಿಗಳು ಕೊರೆಸುವ ಮೂಲಕ ಅಪಾರ ಪ್ರಮಾಣದ ನಷ್ಟಕ್ಕೆ ತುತ್ತಾಗಿದ್ದಾರೆ ಎಂದರು.
ಚುನಾವಣೆ ಬಂದಾಗ ಎಲ್ಲರಿಗೂ ಮುಳಬಾಗಿಲು ನೆನಪಾಗುತ್ತೆ, ನಂತರ ಗ್ರಹಣ ಹಿಡಿಯುತ್ತೆ. ಈ ತಾಲ್ಲೂಕು ಯಾವ ರೀತಿ ಅಭಿವೃದ್ಧಿ ಆಗಬೇಕಿತ್ತು. ಮುಂದಿನ ದಿನಗಳಲ್ಲಿ ತಾಲ್ಲೂಕು ಸಮೃದ್ಧವಾಗುವ ನಿಟ್ಟಿನಲ್ಲಿ ಮುಂದುವರೆಯಬೇಕಿದೆ.ಇಲ್ಲಿ ಯಾವುದೇ ರೀತಿಯ ಶಾಶ್ವತ ನೀರಾವರಿ ಮೂಲಗಳಾದ ನದಿ ನಾಲೆಗಳಿಲ್ಲ, ಇಲ್ಲಿ ಹುಟ್ಟುವ ಕೌಂಡಿನ್ಯ ನದಿಯ ನೀರಿಗೆ ಡ್ಯಾಂ ಕಟ್ಟಿಸಿ ಅಣೆಕಟ್ಟು ನಿರ್ಮಾಣ, ದೇವರಾಯಸಮುದ್ರ ಬಳಿ ಕೈಗಾರಿಕೆ ಸ್ಥಾಪನೆ ಹಾಗೂ ಈ ಹಿಂದೆ ರೈಲ್ವೆ ಸಚಿವರಾಗಿದ್ದ ಕೆ.ಹೆಚ್.ಮುನಿಯಪ್ಪ ಅವರು ಆಂಧ್ರಪ್ರದೇಶದ ಚಿತ್ತೂರಿನಿಂದ ಬೆಂಗಳೂರಿಗೆ ರೈಲು ಸಂಚಾರ ಮಾಡಲು ಕನಸು ಕಂಡಿದ್ದರು. ಅದನ್ನು ಈಗ ಮುಂದುವರೆಸಿದರೆ ಸಮೃದ್ಧಿ ಅವರ ಹೆಸರು ಅಜರಾಮರವಾಗಿ ಸಮೃದ್ಧವಾಗುತ್ತದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಶಾಸಕರು ಉನ್ನತ ಮಟ್ಟದ ಗುರಿಯನ್ನು ಇಟ್ಟುಕೊಂಡು ಬಂದಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಆಗ ಅವರು ಮಹತ್ತರ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಮುಳಬಾಗಿಲು ಕೈಗಾರಿಕೆ ಅಭಿವೃದ್ಧಿ ಆದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.
ಯುವ ಮುಖಂಡ ಗೊಲ್ಲಹಳ್ಳಿ ಪ್ರಭಾಕರ್ ಮಾತನಾಡಿ, ಪತ್ರಕರ್ತರು ಎಂದರೆ ಭಾರತೀಯ ಸೈನ್ಯದಲ್ಲಿ ಯೋದರು ಇದ್ದಂತೆ, ಏಕೆಂದರೆ ಉಕ್ರೇನ್ ನಂತಹ ಇತರೆ ದೇಶಗಳಲ್ಲಿ ಯುದ್ಧಗಳು ನಡೆದಾಗ ಅಂತಹ ಸುದ್ದಿ ಮನೆ ಮನೆಗೆ ತಲುಪಿಸುವ ಇವರ ಸೇವೆ ಅಪಾರ ಎಂದು ಶ್ಲಾಘಿಸಿದರು.ತಹಶೀಲ್ದಾರ್ ವೆಂಕಟಾಚಲತಿ,ಜಿಲ್ಲಾ ಸಹಕಿರಿ ಯೂನಿಯನ್ ನಿರ್ದೇಶಕ ನಲ್ಲೂರು ರಘುಪತಿರೆಡ್ಡಿ. ಸಮಾಜ ಸೇವಕ ಗೊಲ್ಲಹಳ್ಳಿ ಪ್ರಭಾಕರ್ ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಸತ್ಯಣ್ಣ. ಸಿಡಿಪಿಒ ರಮ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಪ್ಪನಹಳ್ಳಿ ಪಾಲ್ಗುಣ ಶ್ರೀನಿವಾಸ್, ಗ್ರಾ.ಪಂ ಸದಸ್ಯರ ಒಕ್ಕೂಟ ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಶಂಕರ್, ಪ್ರಗತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನೇಶ್, ಎಂ.ಐ.ಟಿ ಕಂಪ್ಯೂಟರ್ ಸರಿತಾ ಬಾಲಜಿ.ಜನೌಷಧ ಕೇಂದ್ರದ ಗೀತಾ ಅಂಬರೀಷ್.ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ತಾಲ್ಲೂಕು ಅಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ಖಜಾಂಚಿ ನಾಗಭೂಷಣ್ ಚಾರಿ, ಉಪಾಧ್ಯಕ್ಷ ತ್ಯಾಗರಾಜ್, ರೈತ ಸಂಘದ ವೀರಭದ್ರಗೌಡ ಪೆತ್ತಾಂಡ್ಲಹಳ್ಳಿ ಗಂಗಾಧರ್, ಸೇರಿದಂತೆ ತಾಲ್ಲೂಕು ಪತ್ರಕರ್ತರು, ವಿವಿಧ ಸಂಘಟನೆಯ ಮುಖಂಡರು ಹರೀಶ್ ಗೌಡ.ಹುಸೇನ್.ಮೈಕಾನಿಕ್ ಶ್ರೀನಿವಾಸ್.ಎಂ.ಬಿ.ಕೃಷ್ಣಮೂರ್ತಿ.ನಿವೃತ್ತ ಯೋದರು, ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.