ನೆಲಮಂಗಲ: ನಗರದ ಅರಿಶಿನಕುಂಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ವತಿಯಿಂದ 25 ಮಂದಿ ಯುವ ಪತ್ರಿಕಾ ವಿತರಕರಿಗೆ ಜರ್ಕಿನ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಆರ್.ಸುರೇಂದ್ರನಾಥ್ ಮಾತನಾಡಿ ಎಷ್ಟೇ ಅತ್ಯುತ್ತಮವಾಗಿ ಪತ್ರಿಕೆ ರೂಪಿಸಿದರೂ, ಸರಿಯಾದ ಸಮಯಕ್ಕೆ ಓದುಗರ ಕೈ ಸೇರದಿದ್ದರೆ ಅದು ವ್ಯರ್ಥವಾಗುತ್ತದೆ. ಈ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವವರೇ ಈ ವಿತರಕರು ಪ್ರತಿನಿತ್ಯ ಮನೆ ಮನೆಗಳಿಗೆ ಮಳೆ ಚಳಿ ಎನ್ನದೆ ದಿನ ಪತ್ರಿಕೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ಕೆಲಸಗಳನ್ನು ನಮ್ಮ ಪತ್ರಿಕಾ ವಿತರಕರು ಮಾಡುತ್ತಿರುವುದು ಹೆಮ್ಮೆಯ ವಿಷಯ ಹಾಗೂ ಅದು ಅವರುಗಳ ಸೇವೆ ಅನನ್ಯವಾದುದು ಎಂದು ಅಭಿಪ್ರಾಯಪಟ್ಟರು.
ಮಾಜಿ ಅಧ್ಯಕ್ಷ ಮಂಜುನಾಥ್ ಪಾಟೀಲ್ ಮಾತನಾಡಿ ನಮ್ಮ ದೇಶದ ಮಾಜಿ ರಾಷ್ಟ್ರಪತಿಗಳಾಗಿದ್ದ ದಿ. ಡಾ. ಅಬ್ದುಲ್ ಕಲಾಂ ಜೀ ರವರೂ ಸಹ ತನ್ನ ಬಾಲ್ಯದ ದಿನಗಳಲ್ಲಿ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತಿದ್ದರು. ಸಾಕಷ್ಟು ಮಂದಿ ಪತ್ರಿಕಾ ವಿತರಣೆಯನ್ನು ಮಾಡುತ್ತಾ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿರಿವ ಉದಾಹರಣೆಗಳನ್ನು ನಾವು ಇದು ಕಾಣಬಹುದು.
ನನ್ನ ವಯಕ್ತಿಕ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಪತ್ರಿಕಾ ವಿತರಕರಿಗೆ ಜರ್ಕಿನ್ ಗಳನ್ನು ನೀಡುವುದರ ಮೂಲಕ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಕುಮಾರ್, ಮಾಜಿ ಅಧ್ಯಕ್ಷ ವಿ. ಆರ್. ಸ್ವಾಮಿ, ನಿವೃತ್ತ ಶಿಕ್ಷಕ ರಾಜರೆಡ್ಡಿ, ಎನ್. ಜಿ. ನಾಗರಾಜು, ಪತ್ರಿಕಾ ವಿತರಕ ಬೈಲಪ್ಪ ಮತ್ತು ಮುಖಂಡರಾದ ರಾಮಕೃಷ್ಣಪ್ಪ ಉಪಸ್ಥಿತ ರಿದ್ದರು.