ಜನವರಿಯಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪದ್ಮ ಪ್ರಶಸ್ತಿಗಳನ್ನು ಘೋಷಷಿಸುವುದು ಸಾಮಾನ್ಯವಾಗಿದೆ. ದೇಶದ ಅತ್ಯುನ್ನತ ಪ್ರಶಸ್ತಿಗಾಗಿ ಪ್ರಜೆಗಳು ಮಾಡಿದ ಸಾಧನೆಗಾಗಿ ಸಾರ್ವಜನಿಕರ, ದೇಶದ ಸೇವೆಗಾಗಿ ಅವರ ಕೊಡುಗೆಯನ್ನು ಸ್ಮರಿಸಿ ಕೊಡುವ ಈ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನ ಘೋಷಿಸುತ್ತಾರೆ. ಮೂರು ವಿಭಾಗಗಳಲ್ಲಿ ಕೊಡಲ್ಪಡುವ ಈ ಪ್ರಶಸ್ತಿಗಳು ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಎಂದು ಗುರುತಿಸಲ್ಪಡುತ್ತವೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಜೆಗಳಿಗೆ ದೇಶಕ್ಕಾಗಿ ಅವರ ಸೇವೆಯನ್ನು ಗುರುತಿಸಿ ಕೊಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಗೆ ಅನೇಕರು ಅರ್ಜಿಯನ್ನು ಸಲ್ಲಿಸುತ್ತಾರೆ. ಅದಲ್ಲದೇ ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಲಯದಿಂದ ಸ್ವತಃ ಕೂಡ ಕೊಡಬಹುದಾಗಿದೆ.
ಹಿನ್ನೆಲೆ ಮತ್ತು ಇತಿಹಾಸ :
1954ರಲ್ಲಿ ಭಾರತ ಸರಕಾರವು ಎರಡು ಅತ್ಯುನ್ನತ ಪ್ರಶಸ್ತಿಗಳನ್ನು ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳನ್ನು ಕೊಡಲು ನಿರ್ಧರಿಸಿತು. ಪದ್ಮ ಪ್ರಶಸ್ತಿಗಳನ್ನು ಮೂರು ವರ್ಗದಲ್ಲಿ ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಎಂದು ಕೊಡಲಾಗುತ್ತದೆ. ಇಲ್ಲಿ ಗುರುತಿಸ್ಪಡುವ ಕ್ಷೇತ್ರಗಳು ಕಲೆ (ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ, ಸಿನೆಮಾ, ನಾಟಕ) , ಸಮಾಜ ಸೇವೆ (ಸಮಾಜ ಸೇವೆ, ಚಾರಿಟಿ ಕೆಲಸಗಳು, ಸಮುದಾಯಕ್ಕೆ ಒಳಿತಾಗುವ ಕಾರ್ಯಗಳು), ಸಾಮಾಜಿಕ ಕೆಲಸಗಳು (ಕಾನೂನು, ಸಾರ್ವಜನಿಕ ವಲಯ, ರಾಜಕೀಯ), ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರ (ಬಾಹ್ಯಾಕಾಶ , ನ್ಯೂಕ್ಲಿಯರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ವಲಯ,
ಇದಕ್ಕೆ ಸಂಬಂಧಿಸಿದ ವಿಷಯಗಳು), ವ್ಯಾಪಾರ ಮತ್ತು ಉದ್ಯಮ (ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆಗಳು, ಆಡಳಿತ, ಪ್ರವಾಸೋದ್ಯಮದ ಪ್ರಚಾರ, ಉದ್ಯಮ ಇತ್ಯಾದಿ), ವೈದ್ಯಕೀಯ (ವೈದ್ಯಕೀಯ ಸಂಶೋಧನೆಗಳು, ವಿಶಷ ಪರಿಣಿತಿ, ಆಯರ್ವೇದ, ಹೊಮಿಯೋಪತಿ, ನ್ಯಾಚುರೋಪತಿ, ಸಿದ್ಧ , ಅಲೋಪತಿ ಮೊದಲಾದ ವೈದ್ಯಕೀಯ ವಿಭಾಗದಲ್ಲಿ ಗಣನೀಯ ಸೇವೆ), ಸಾಹಿತ್ಯ ಮತ್ತು ಶೈಕ್ಷಣಿಕೆ (ಪತ್ರಕರ್ತರು, ಅಧ್ಯಾಪಕರು, ಲೇಖಕರು, ಕವಿಗಳು, ಶೈಕ್ಷಣಿಕ ಪ್ರಚಾರ, ಸಾಹಿತ್ಯದ ಪ್ರಚಾರ ಮತ್ತು ಶೈಕ್ಷಣಿಕ ಸುಧಾರಣೆ), ಸಾರ್ವಜನಿಕ ಸೇವೆಗಳು (ಸರಕಾರಿ ಸೇವೆಯಲ್ಲಿ ವಿಶೇಷ ಕೆಲಸ ಮಾಡಿದ ಐಎಎಸ್, ಐಪಿಎಸ್,
ಐಎಫಎಸ್ ಮೊದಲಾದ ಅಧಿಕಾರಿಗಳಿಗೆ), ಕ್ರೀಡೆ ( ಎಲ್ಲ ಪ್ರಕಾರದ ಜನಪ್ರಿಯ ಕ್ರೀಡೆಗಳು , ಅಥ್ಲೆಟಿಕ್ಸ್, ಪರ್ವತಾರೋಹಣ, ಸಾಹಸದ ಕ್ರೀಡೆಗಳು, ಕ್ರೀಡೆಯ ಪ್ರಚಾರ), ಇದಲ್ಲದೇ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ, ಮಾನವ ಸಂಪನ್ಮೂಲ, ವನ್ಯ ಜೀವಿಗಳ ಸಂರಕ್ಷಣೆ ಮೊದಲಾದ ಅನೇಕ ವಿಷಯಕ ಸಾಧಕರಿಗೂ ಪ್ರಶಸ್ತಿಗಳನ್ನು ಕೊಡಲಾಗುತ್ತದೆ.ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ಮಾರ್ಚ/ ಏಪ್ರಿಲ್ ತಿಂಗಳಿನಲ್ಲಿ ಪ್ರದಾನ ಮಾಡಲಾಗುತ್ತದೆ. ದೇಶದ ಅಧ್ಯಕ್ಷರು ಈ ಪ್ರಶಸ್ತಿಯ ಫಲಲಕವನ್ನು ಪ್ರಮಾಣ ಪತ್ರವನ್ನು ರಾಷ್ಟ್ರಪತಿ ಭವನದಲ್ಲಿ ನಡೆಯುಯ ಕಾರ್ಯಕ್ರಮದಲ್ಲಿ ಕೊಡುತ್ತಾರೆ. ವರ್ಷಕ್ಕೆ 120 ಜನರಿಗೆ ಈ ಪ್ರಶಸ್ತಿಯನ್ನು ಕೊಡಬಹುದಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆ ಮಾಡಿ ಪ್ರಶಸ್ತಿ ಕೊಡಲಾಗುತ್ತದೆ.
ಪದ್ಮ ಪ್ರಶಸ್ತಿಗಳ ಆಯ್ಕೆಯನ್ನು ಆಯ್ಕೆಯ ಸಮಿತಿಯುನ್ನು ಮಾನ್ಯ ಪ್ರಧಾನ ಮಂತ್ರಿಗಳು ಆರಿಸಿ ಸಮಿತಿಯ ಸದಸ್ಯರು ನಿರ್ಣಯಿಸುತ್ತಾರೆ ಈ ಸಮಿತಿಯನ್ನು ಕ್ಯಾಬಿನೆಟ್ ದರ್ಜೆಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಯಲಯದ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಜನ ಪ್ರಮುಖ ಸದಸ್ಯರನ್ನು ಒಳಗೊಂಡಿದ್ದು ರಾಷ್ಟ್ರಾಧ್ಯಕ್ಷರ ಕಾರ್ಯದರ್ಶಿಗಳು ಕೂಡ ಇರುತ್ತಾರೆ. ಇವರುಗಳು ಮಾಡಿದ ಶಿಫಾರಸ್ಸನ್ನು ಮಾನ್ಯ ಪ್ರಧಾನ ಮಂಥ್ರಿಗಳು ಹಾಗೂ ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಲಾಗುತ್ತದೆ.
ಪದ್ಮ ಪ್ರಶಸ್ತಿಗೆ ಅರ್ಜಿಯನ್ನು ಸ್ವತಃ ಅಭ್ಯರ್ಥಿ ಅಥವಾ ಇತರೇ ಸಾರ್ವಜನಿಕರು ಸಲ್ಲಿಸ ಬಹುದಾಗಿದೆ. ಸರಕಾರಿ ಕೆಲಸದಲ್ಲಿ ಇರುವವರು, ವೈದ್ಯರು, ವೈಜ್ಞಾನಿಕರು ಸರಕಾರಿ ಕೆಲಸದಲ್ಲಿ ಇರುವ ಅರ್ಜಿ ಸಲ್ಲಿಸುವಂತಿಲ್ಲ. ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ ಮಾಡಿ ಗೆಜೆಟ್ ನಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸುತ್ತಾರೆ.3 ಪದ್ಮ ಪ್ರಶಸ್ತಿಗಳನ್ನು ಪಡೆದ ಮೊದಲ ವೈದ್ಯ ಡಾ. ಡಿನಾಗೇಶ್ವರ ರೆಡ್ಡಿಯವರು ಆಗಿದ್ದಾರೆ. ಇವರಲ್ಲದೆ ಶೇಹಾನಾಯಿ ವಾದಕ ಬಿಸ್ಮಿಲ್ಲಾ ಖಾನ್, ಸಂಗೀತಗಾರ ಪಂಡಿತ ಭೀಮಸೇನ ಜೋಶಿ, ಸಂಗೀತ ನಿರ್ದೇಶಕ ಗಾಯಕ ಭೂಪೆನ್ ಹಾಜರಿಕ, ನಟಿ ಅಕ್ಕಿನೇನಿ ನಾಗೇಶ್ವರ ರಾವ್, ನಟಿ ಜೋಹರಾ ಸೈಗಲ್, ಗಾಯಕ ಕೆ ಯೇಸುದಾಸ್ ಮತ್ತು ನಟ ಅಮಿತಾಭ ಬಚ್ಚನ್ ಇವರಿಗೆ ದೊರೆತಿವೆ.
ಈ ಬಾರಿಯ ಅಂದರೆ 2025ರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಪ್ರಕಟವಾಗಲಿದ್ದು, 7 ಪದ್ಮ ವಿಭೂಷಣ ಪ್ರಶಸ್ತಿಗಳಲ್ಲಿ ಕರ್ನಾಟಕದಿಂದ ಒಬ್ಬರಿಗೆ ಶ್ರೀ ಲಕ್ಷ್ಮೀ ನಾರಾಯಣ ಸುಬ್ರಮಣಿಯಂ ಅವರಿಗೆ ಅವರ ವಯೋಲಿನ , 19 ಜನ ಪದ್ಮ ಭೂಷಣ ಪ್ರಶಸ್ತಿಗಳಲ್ಲಿ 2 ಪ್ರಶಸ್ತಿ ಸಿನೆಮಾ ರಂಗದ ಅನಂತ್ ನಾಗ್ ಹಾಗೂ ಪ್ರಸಾರ ಭಾರತೀಯ ಶ್ರೀ ಎ ಸೂರ್ಯ ಪ್ರಕಾಶ್ ಅವರಿಗೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಗೊಂದಲಿ ಜಾನಪದ ಕಲೆಯಲ್ಲಿ ಪ್ರಸಿದ್ಧ ಹೆಸರಾಗಿರುವ ಕರ್ನಾಟಕದ ಬಾಗಲೋಕಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಕೊಪ್ಪಳದ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತ ಹಾಗೂ ಔಷಧ ವಿಭಾಗದಲ್ಲಿ ಕಲಬುರಗಿಯ ವಿಜಯಲಕ್ಷ್ಮೀ ದೇಶಮಾನೆ ಕೂಡ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮಿ ದೇಶಮನೆಯವರ ಕ್ಯಾನ್ಸರ್ ರೋಗಿಗಳ ಗಣನೀಯ ಸೇವೆ ಮತ್ತು ಅವರ ಚಿಕಿತ್ಸೆಗಾಗಿ ಅವರ ಸಾಮಾಜಿಕ ಕಾರ್ಯಗಳ ಕೊಡುಗೆಗೆ ದೊರೆತಿರುವ ಗೌರವವಾಗಿದೆ. ಒಟ್ಟು 139 ಜನರಿಗೆ ಪದ್ಮ ಪ್ರಶಸ್ತಿಗಳ ಘೋಷಣೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿಗಳ ವಿಜೇತ ರಿಕ್ಕಿ ಕೇಜ್ಹಾ, ಹಾಸನ ರಘು ಅವರುಗಳಿಗೂ ಸಹ ಕಲಾ ವಿಭಾಗದಲ್ಲಿ ಪದ್ಮಶ್ರೀ ಘೋಷಿಸಲಾಗಿದೆ. ಕರ್ನಾಟಕದಿಂದ ಒಟ್ಟು 6ಮಂದಿಗೆ ಪದ್ಮಶ್ರೀ, ಇಬ್ಬರಿಗೆ ಪದ್ಮ ಭೂಷಣ ಹಾಗೂ ಒಬ್ಬರಿಗೆ ಪದ್ಮವಿಭೂಷಣ ದೊರೆತಿದೆ.
ಮಾಧುರಿ ದೇಶಪಾಂಡೆ, ಬೆಂಗಳೂರು