ವಿಧಾನಸಭೆ(ಬೆಳಗಾವಿ): ಇಂದು ಬೆಳಿಗ್ಗೆ ಸದನ ಆರಂಭಕ್ಕೆ ಮುನ್ನಾ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಉಭಯಕುಶಲೋಪರಿ ನಡೆಸಿದರು.
ಪಕ್ಷ ಭೇಧವಿಲ್ಲದೆ ಶಾಸಕರು, ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು, ತಮ್ಮ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿ ಉಭಯಕುಶಲೋಪಹರಿ ನಡೆಸಿದರು.
ಸಂಡೂರಿನಿಂದ ಇತ್ತೀಚೆಗೆ ಆಯ್ಕೆಯಾದ ಅನ್ನಪೂರ್ಣ ಅವರ ಪತಿ ಹಾಗೂ ಸಂಸದ ಇ. ತುಕಾರಾಂ ಅವರು ಸದನ ಆರಂಭಕ್ಕೂ ಮುನ್ನ ಆಗಮಿಸಿ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದರು.ವಿರೋಧಪಕ್ಷಕದ ನಾಯಕ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ಬಾಬು ಅವರ ಸಹ ಆಡಳಿತ ಪಕ್ಷದ ಹಲವು ಸದಸ್ಯರಿಗೆ ಶುಭಾಶಯಕೋರಿದರು.
ಸಚಿವ ಸಂತೋಷ್ ಲಾಡ್ ಅವರು ಸದನಕ್ಕೆ ಆಗಮಿಸಿ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಪರಿಚಯಿಸಿದರು.
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯವರು ಬಿಜೆಪಿ ಶಾಸಕರಿದ್ದ ಸಾಲುಗಳತ್ತ ಆಗಮಿಸಿ ತಮ್ಮ ಗೆಳೆಯರಿಗೆ ಶುಭಾಶಯಕೋರಿದರು. ಇತ್ತೀಚೇಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿರುವ ಸಂಡೂರಿನ ಅನ್ನಪೂರ್ಣ, ಶಿಗ್ಗಾಂವಿ ಯಾಸೀರ್ ಪಠಾಣ್, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಅವರಿಗೆ ಪ್ರಮಾಣ ವಚನ ಬೋಧಿಸಲು ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯದರ್ಶಿ ಸೂಚಿಸಿದರು. ಮೂವರು ಶಾಸಕರೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.