ಬೆಂಗಳೂರು: ವಿಧಾನಸೌಧದಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿ ಸೋಮವಾರದಿಂದ ಆರಂಭವಾಗುವ ಕಲಾಪ ಬಗ್ಗೆ ವಿವರ ನೀಡಿದ್ದಾರೆ.ಅಧಿವೇಶನ 3 ರಿಂದ 21ನೇ ತಾರೀಖಿನ ವರೆಗೆ ನಡೆಯುತ್ತದೆ. ಕಳೆದ ಅಧಿವೇಶನದಿಂದ ಇಲ್ಲಿವರೆಗೆ ನಿಧನಗೊಂಡ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಹದಿಹರೆಯದ ಮಕ್ಕಳು ಯಾವ ರೀತಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಅದರ ಬಗ್ಗೆ ಚರ್ಚೆಗೆ ನಿರ್ಧಾರ ಮಾಡಲಾಗಿದೆ. ಬಿಎಸಿ ಸಭೆಯಲ್ಲಿ ಚರ್ಚಿಸಿ ಅದನ್ನು ಪರಿಷತ್ ನಲ್ಲಿ ಚರ್ಚೆ ಮಾಡುತ್ತೇವೆ. ಮಾದಕ ವಸ್ತುಗಳಿಗೆ ಯುವ ಪೀಳಿಗೆ ಬಲಿಯಾಗುತ್ತಾರೆ ಎಂಬುದರ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಲಾಗುವುದು.
693 ಪ್ರಶ್ನೆಗಳು ಬಂದಿವೆ. 3 ರಂದು ಸಿಎಂ ಸಮ್ಮುಖದಲ್ಲಿ ಜಂಟಿ ಸಲಹಾ ಸಮಿತಿ ಸಭೆ ನಡೆಸಲು ಯೋಚನೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟರೆ ಸಭೆ ಮಾಡುತ್ತೇವೆ. ಹೆಚ್ ವಿಶ್ವನಾಥ್ ಅವರು ಅಭಿವೃದ್ಧಿ ಮತ್ತೆ ಬೆಂಗಳೂರಿನ ಬಗ್ಗೆ ಕೇಳಿದ್ದಾರೆ. ಅದನ್ನು ದಿಢೀರ್ ಆಗಿ ತಗೊಳ್ಳೋಕೆ ಆಗಲ್ಲ. ಬಜೆಟ್ ಇದ್ದಾಗ ಇದನ್ನು ಮೂ ಮಾಡೋಕೆ ಆಗಲ್ಲ. ನಮ್ಮಲ್ಲಿ ನಿಯಮ 335 ಬಂದಾಗ ಇದನ್ನು ನಾನು ಕೊಡುವ ಬಗ್ಗೆ ಹೇಳುತ್ತೇನೆ. ವಿಧಾನ ಪರಿಷತ್ ನ್ನು ಸರಿಯಾಗಿ ನಡೆಯುವ ಬಗ್ಗೆ ವಿಪಕ್ಷ ನಾಯಕರ ಕರೆದು ಮಾತಾಡುತ್ತೇನೆ. ಅವರು ಇವರು ಟೀಕೆ ಮಾಡೋದು, ಇವರು ಅವರನ್ನು ಟೀಕೆ ಮಾಡಿ ಕಲಾಪ ಬಲಿ ಮಾಡೋದಕ್ಕೆ ಅವಕಾಶ ಕೊಡುವುದಿಲ್ಲ. ಎಲ್ಲರ ಸಹಕಾರ ದೊಂದಿಗೆ ಕಲಾಪ ಸುಗಮವಾಗಿ ನಡೆಸುತ್ತೇನೆ ಎಂದಿದ್ದಾರೆ.