ದೇವನಹಳ್ಳಿ: ಇತಿಹಾಸ ಪ್ರಸಿದ್ದ ಪಾರಿವಾಟ ಗುಟ್ಟವನ್ನು ಜೈನ್ ಟ್ರಸ್ಟ್ನ ಸಮುದಾಯ ಹಾಳು ಮಾಡುತ್ತಿದೆ, ದೇವನಹಳ್ಳಿ ಇತಿಹಾಸ ಪ್ರಸಿದ್ದ ಪಾರಿವಾಟ ಗುಟ್ಟದ ಆಸುಪಾಸಿನ ಜಮೀನನ್ನು ತೀರ್ಥದಾಮದ ಹೆಸರಿನಲ್ಲಿ ಆಕ್ರಮಿಸಿಕೊಳ್ಳುತ್ತಿದೆ, ಪ್ರತಿವರ್ಷ ಕಡೆ ಕಾರ್ತಿಕ ಮಾಸ ನಡೆಸುತ್ತಿರುವ ಕಡಲೆ ಕಾಯಿ ಪರಿಷೆ ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ಇಲ್ಲಿನ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಕಾಲ್ನಡಿಗೆ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವನಹಳ್ಳಿಯ ಪ್ರಸಿದ್ಧ ತಾಣವಾಗಿರುವ ಪಾರಿವಾಟ ಗುಟ್ಟದ ಅಕ್ಕಪಕ್ಕದ ಜಮೀನನ್ನು ಸ್ಥೂಲಭದ್ರದಾಮದವರು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಇದರ ಉಳಿವಿಗಾಗಿ ಹಲವಾರು ಸಂಘ ಸಂಸ್ಥೆಗಳ ನೆರವಿನೊಂದಿಗೆ ಇಲ್ಲಿನ ಕಡಲೆಕಾಯಿ ಪರಿಷೆ ನಡೆಯುವ ಶ್ರೀ ಆಂಜನೇಯಸ್ವಾಮಿ ದೇಗುಲವಿರವ ಸ್ಥಳದಲ್ಲಿ ಒತ್ತುವರಿ ಮಾಡಿದ್ದಾರೆ, ಈ ಜಾಗವನ್ನು ತೆರವುಗೊಳಿಸುವುದರ ಮೂಲಕ ಧಾರ್ಮಿಕತೆಗೆ ಯಾವುದೇ ದಕ್ಕೆಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪ್ರಗತಿಪರ ರೈತ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವನಾಪುರದ ರಮೇಶ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಆಂಜನೇಯಸ್ವಾಮಿ ದೇವಾಲಯದಿಂದ ಪಾರಿವಾಟ ಗುಟ್ಟದ ಆಂಜನೇಯ ದೇವಾಲಯದವರೆಗೆ ಹಮ್ಮಿಕೊಂಡಿದ್ದ ಪರಿಸರ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿವರ್ಷದಂತೆ ಸಸಿ ನೆಟ್ಟು ಮಾತನಾಡಿ ದೇವನಹಳ್ಳಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ದ ಪಾರಿವಾಟ ಗುಟ್ಟದ ಮೇಲೆ ಪರಿಸರ ಸಂರಕ್ಷಿಸುವ ಮತ್ತು ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಈ ಗುಡ್ಡದಲ್ಲಿ ನದಿಮೂಲ ಮತ್ತು ಋಷಿಮೂಲವಿದ್ದು ಇಲ್ಲಿನ ದೊಣೆಯ ನೀರನ್ನು ದೇವನಹಳ್ಳಿ ಜನರು ಕುಡಿಯುವುದಕ್ಕೂ ಸಹ ಬಳಸುತ್ತಿದ್ದರು, ಎಂತಹ ಬೇಸಿಗೆಯಲ್ಲೂ ನೀರು ಬತ್ತದೇ ಪಶು-ಪಕ್ಷಿಗಳು, ಪ್ರಾಣಿಗಳಿಗೆ ಜೀವಜಲವಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ..ಕೃಷ್ಣಪ್ಪ ಮಾತನಾಡಿ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖ್ಯಾತಿ ಹೊಂದಿದ್ದರೂ ಈ ಪ್ರದೇಶದಲ್ಲಿ ಯಾವುದೇ ಉದ್ಯಾನವನಗಳಿಲ್ಲ, ಜನರಿಗೆ ಆರೋಗ್ಯ ಸಂರಕ್ಷಣೆಗಾಗಿ ಯಾವುದೇ ರೀತಿಯ ಜೀವವೈವಿದ್ಯಮಯ ಮರಗಿಡಗಳನ್ನು ಬೆಳೆಸಲು ಉಳಿದಿರುವ ಜಾಗ ಪಾರಿವಾಟ ಗುಟ್ಟ ಮಾತ್ರ, ಅದನ್ನು ಉಳಿಸದಿದ್ದರೆ, ಭವಿಷ್ಯದಲ್ಲಿ ಸ್ಥಳೀಯರು ಉತ್ತಮ ಆರೋಗ್ಯ ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗಬಹುದು, ಅದ್ದರಿಂದ ಸ್ಥಳೀಯ ಜನಪ್ರತಿನಿದಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಎಂದು ಒತ್ತಾಯಿಸಿದರು.
ಪಾರಿವಾಟ ಗುಟ್ಟದ ಕಬಳಿಕೆಗೆ ವಿರೋಧ : ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿನ ಜಮೀನನ್ನು ಕಬಳಿಸಿ ಒತ್ತುವರಿ ಮಾಡಿಕೊಂಡಿದ್ದಾರೆ, ಸುಮಾರು 68 ಎಕರೆ ಜಮೀನು ಇದ್ದು 38 ಎಕರೆಯನ್ನು ಜೈನರಿಗೆ ಸಮಾಜಿಕ ಸೇವೆಗಾಗಿ ಗುತ್ತಿಗೆ ನೀಡಲಾಗಿದೆ, ವೃದ್ಧಾಶ್ರಮ, ಆಸ್ಪತ್ರೆ, ಅನ್ನದಾಸೋಹ ಮುಂತಾದ ಸಮಾಜ ಸೇವೆಗೆಂದು ನೀಡಿದ ಜಾಗವನ್ನು ಸ್ವಾರ್ಥಕ್ಕೆ ಬಳಸಿ ಜೈನರು ತಮ್ಮ ಸಮುದಾಯದ ತೀರ್ಥದಾಮ ಮಾಡಿ ಹಣ ಮಾಡಲು ಹೊರಟಿದೆ, ಅದಲ್ಲದೆ ಕೆಲವು ಜನಪ್ರತಿನಿದಿಗಳನ್ನು ಬುಟ್ಟಿಗೆ ಹಾಕಿಕೊಂಡು ಜಮೀನು ಲಪಟಾಯಿಸಲು ಪ್ರಯತ್ನಿಸುತ್ತಿದೆ ಎಂದು ಸಂಘಟನೆ ದೂರಿದೆ.
ದೇವನಹಳ್ಳಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕ ಶ್ರೀರಾಮಯ್ಯ, ಪುಟ್ಟಸ್ವಾಮಿ, ಎಸ್.ಆರ್.ಎಸ್.ಸತೀಶ್, ನೆರಗನಹಳ್ಳಿ ಶ್ರೀನಿವಾಸ್, ಪೊಲೀಸ್ ಲೋಕೇಶ್, ವಿಜಯಕುಮಾರ್, ನಾರಾಯಣಸ್ವಾಮಿ, ಹನುಮಂತಪ್ಪ, ಮಂಜುನಾಥ್, ಮುನಿರಾಜು, ಹಾಗೂ ಎನ್ಸಿಸಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಇದ್ದರು.