ಕೆ.ಆರ್.ಪೇಟೆ: ಸುಸ್ತಿರ ಜೀವನಕ್ಕಾಗಿ ಶುದ್ದ ಗಾಳಿ ಹಸಿರು ಭೂಮಿ. ಮರ ಗಿಡ ನೆಟ್ಟು ಬೆಳೆಸಿ. ಪರಿಸರ ನೈರ್ಮಲ್ಯ ಉಳಿಸಿ. ಜಾಗತಿಕ ತಾಪಮಾನ ಇಳಿಸಿ ಎಂದು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಎಸ್.ಎಲ್..ಸತೀಶ್ ಮನವಿ ಮಾಡಿದರು.ಅವರು ಬೂಕನಕೆರೆ ಹೋಬಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯ ಕೂಡಲಕುಪ್ಪೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದ NPCCHH. ಬಗ್ಗೆ ಮಾತನಾಡಿ ಬಿಸಿಲಿನ ತಾಪಮಾನದಿಂದ ಉಂಟಾಗುವ ತೊಂದರೆಗಳು ಮತ್ತು ಪರಿಹಾರಗಳ ಬಗ್ಗೆ ತಿಳಿಸಿದರು.
ಬಿಸಿಲಿನ ತಾಪಮಾನದಿಂದ ಪ್ರಜ್ಞೆ ತಪ್ಪುವುದು ಉಸಿರಾಟದ ತೊಂದರೆ ಮೈ ಮೇಲೆ ಗಂದೆಗಳು ಶ್ವಾಸಕೋಶದ ತೊಂದರೆಗಳು ಹೃದಯದ ಸಮಸ್ಯೆಗಳು ಸ್ನಾಯು ಸೆಳೆತ ಮೂತ್ರಪಿಂಡದ ತೊಂದರೆ ಗಳು ಮಾನವ ಮತ್ತು ಪ್ರಾಣಿಗಳಲ್ಲಿ ಉತ್ಪಾದನಾ ಸಾಮರ್ಥ್ಯ ಕುಂಠಿತವಾಗು ವುದು ಪಾಶ್ವ ವಾಯು ಮುಂ ತಾದ ಸಮಸ್ಯೆಗಳು ಕಂಡುಬರುತ್ತವೆ. ಆದ್ದರಿಂದ ಸಾರ್ವಜನಿಕರು ಬಿಸಿಲಿನ ತಾಪದಿಂದ ಪಾರಾಗಲು ಛತ್ರಿ ಮತ್ತು ಟೋಪಿಯನ್ನು ಬಳಸುವುದು ಜೊತೆಯಲ್ಲಿ ಯಾವಾಗಲೂ ಶುದ್ಧವಾದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 04 ಗಂಟೆಯವರೆಗೆ ತಂಪಾದ ವಾತಾವರಣದಲ್ಲಿ ಕೆಲಸ ನಿರ್ವಹಿಸಿ ಶಾಂತಿ ಪಡೆಯುವುದು ಮುಂತಾದ ಮುನ್ನೆಚ್ಚರಿಕೆ ಕ್ರಮ ಕೈಕೊಳ್ಳುವಂತೆ ತಿಳಿಸಿದರು.
ಪ್ರತಿಯೊಬ್ಬರು ಮರ-ಗಿಡ ಬೆಳೆಸಿ ಪರಿಸರ ನೈರ್ಮಲ್ಯ ಕಾಪಾಡಿ ಜಾಗತಿಕ ತಾಪಮಾನ ಹೆಚ್ಚಾಗದಂತೆ ತಡೆಯಲು ಎಲ್ಲರೂ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಡಾಕ್ಟರ್ ಅಜಿತ್ ಖಃSಏ ವೈದ್ಯಾಧಿಕಾರಿಗಳಾದ ಡಾಕ್ಟರ್ ಶಶಿಕಾಂತ್ ಡಾ. ಹೇಮಲತಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.