ಗುರಿಯೆಡೆಗಿನ ಏಕಾಗ್ರ ಚಿತ್ತ
ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ
ಸಾಧಿಸುವ ಛಲ ಬದ್ಧತೆ…
ಸರಳತೆಯ ನಡೆ-ನುಡಿ ಉತ್ತುಂಗಕ್ಕೇರಿಸುತ್ತದೆ.
ಈ ಜಗದ ಜಾತ್ರೆಯಲ್ಲಿ
ನೂರಾರು ಜನರು ತಲೆಯೆತ್ತಿ
ನೋಡುವ ಚಿತ್ತಾರದ ತೇರಾಗಬೇಕು
ನೀನು ಹುಟ್ಟುವಾಗ ವಿಶ್ವಮಾನವ
ನೋವನ್ನು ಬಹುಕಾಲ ಅನುಭವಿಸುವುದು
ಎಂದರೆ ಒಂದು ಭವ್ಯ ಸುಂದರ ಶಿಲ್ಪದ ಕೆತ್ತನೆ
ಭವಿಷ್ಯದ ದಿನ ಪೂಜ್ಯನೀಯವಾಗುವುದರ ಮೈಲಿಗಲ್ಲು…
ಪ್ರತಿಭೆ ಅರಳುವುದು…
ಅವಮಾನದಿಂದ ಮನುಜನ ಸೃಷ್ಟಿಯು ಅಲ್ಲೇ
ವಿದ್ಯೆಯಿಂದ ವಿನಯ ಸಂಸ್ಕಾರ ಪ್ರೀತಿ ಗೆಲ್ಲಬಹುದು
ಜ್ಞಾನ-ಮೌನ-ಸಮತೆ ಪರಿಪೂರ್ಣತೆಯ ಹಣತೆ.
ಪರೀಕ್ಷೆಯಂಬ ಸುಂದರ ಕಮಲ ಅರಳಲಿ
ಸುಟ್ಟುಬಿಡು ನೋವುಗಳೆಲ್ಲ…
ಮಿಕ್ಕಿದೆಲ್ಲಾ ನಿನ್ನ ಉಡಿ ತುಂಬುತ್ತದೆ ಸಮೃದ್ಧಿಯಾಗಿ
ಹೃದಯದಲಿ ಬೆಳೆಯುವ ಗಿಡದಲಿ
ಬಣ್ಣಬಣ್ಣದ ಹೂ ಅರಳಲಿ…
ಗೆಲುವು ದೂರದ ಕನಸಲ್ಲ,
ನಿನ್ನ ಸಾರ್ಥಕತೆಯ ಸಾಧನೆ ಫಲ.
– ಪ್ರೊ. ಸಮತಾ ಬಿ.ದೇಶಮಾನೆ
Golden Book of World Record
ಬೆಂಗಳೂರು ವಿಶ್ವವಿದ್ಯಾಲಯ
ಪರೀಕ್ಷೆಯೆಂಬ ಸುಂದರ ಕಮಲ…



