ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ೨೧ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಇನ್ನೂ ಸ್ಫೋಟದಲ್ಲಿ ೪೬ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಜಾಫರ್ ಎಕ್ಸ್ಪ್ರೆಸ್ ಪೇಶಾವರಕ್ಕೆ ನಿಗದಿತ ನಿರ್ಗಮನದ ಮೊದಲು ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿ ಜಮಾಯಿಸಿದಾಗ ಪ್ರಾಂತೀಯ ರಾಜಧಾನಿ ನೈಋತ್ಯ ಪಾಕಿಸ್ತಾನ್ನ ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಬಳಿ ಭಾರೀ ಎರಡು ಬಾಂಬ್ ಸ್ಫೋಟಗೊಂಡಿದೆ.
ಪೊಲೀಸ್ ಕಾರ್ಯಾಚರಣೆಯ ಹಿರಿಯ ಅಧೀಕ್ಷಕ ಮುಹಮ್ಮದ್ ಬಲೋಚ್ ಮಾತನಾಡಿ, ಪೇಶಾವರಕ್ಕೆ ಹೋಗುವ ಎಕ್ಸ್ಪ್ರೆಸ್ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು. ಇದರಿಂದಾಗಿ ನಿಲ್ದಾಣ ಭಾರೀ ಜನಸಂದಣಿಯಿಂದ ಕೂಡಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಒಂದರ ಹಿಂದೆ ಒಂದರAತೆ ಒಟ್ಟು ಎರಡು ಬಾಂಬ್ ಸ್ಫೋಟಗೊಂಡಿವೆ. ಮೊದಲ ಬಾಂಬ್ ಸ್ಫೋಟಗೊಂಡಾಗ ೪ ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ ೨೧ ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ, ಬಲಿಪಶುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು. ಬಲೂಚ್ ಲಿಬರೇಶನ್ ಆರ್ಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ರೈಲ್ವೇ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಪ್ರಾಂತೀಯ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಪ್ರಕಾರ, “ಪಾರುಗಾಣಿಕಾ ಮತ್ತು ಕಾನೂನು ಜಾರಿ ತಂಡಗಳು ತಕ್ಷಣವೇ ಪ್ರತಿಕ್ರಿಯಿಸಿದವು, ಪ್ರದೇಶವನ್ನು ಸುರಕ್ಷಿತಗೊಳಿಸಿದವು ಮತ್ತು ಗಾಯಗೊಂಡವರು ಮತ್ತು ಸತ್ತವರನ್ನು ಸಿವಿಲ್ ಹಾಸ್ಪಿಟಲ್ ಕ್ವೆಟ್ಟಾಕ್ಕೆ ಸಾಗಿಸಲಾಗಿದೆ.
ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ದಾಳಿಯನ್ನು ಖಂಡಿಸಿದರು, ಇದು “ಮುಗ್ಧ ನಾಗರಿಕರನ್ನು ಗುರಿಯಾಗಿಸುವ ಭಯಾನಕ ಕೃತ್ಯ” ಎಂದು ಬಣ್ಣಿಸಿದರು ಮತ್ತು ತಕ್ಷಣದ ತನಿಖೆಗೆ ಆದೇಶಿಸಿದರು. ಭಯೋತ್ಪಾದಕರು ಹೆಚ್ಚಾಗಿ ನಾಗರಿಕರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು