ಚಳ್ಳಕೆರೆ: ನಗರದ ಮುಖ್ಯ ರಸ್ತೆಗಳ ಪುಟ್ಬಾತ್ ಮೇಲೆ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ಸಾರ್ವಜನಿಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಮತ್ತು ಪಾದ ಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ನಗರದ ಸಾರ್ವಜನಿಕರು ಜಿಲ್ಲಾಧಿ ಕಾರಿ ವೆಂಕಟೇಶ ದೂರು ನೀಡಿದರು.
ನಗರದ ತಾಲೂಕ ಕಚೇರಿ ಹಾಗೂ ನಗರಸಭೆಗೆ ಭೇಟಿ ನೀಡಿ,ಸಾರ್ವಜನಿಕರ ಕುಂದು ಕೊರತೆಗಳನ್ನು ಹಾಗೂ ದೂರುಗಳನ್ನು ಸ್ವೀಕರಿಸುವ ವೇಳೆ. ನಗರದ ಸಾರ್ವಜ ನಿಕರ ಪರವಾಗಿ ಜಿಲ್ಲಾಧಿಕಾರಿಗಳ ಜೊತೆ ನಗರದ ಸಮ ಸ್ಯೆಗಳ ಕುರಿತು ಸಮಾಜ ಸೇವಕ ಎಸ್.ಎಚ್.ಸೈಯದ್ ಮಾತನಾಡಿ.
ನಗರದ ಮುಖ್ಯ ರಸ್ತೆಗಳಾದ ಚಿತ್ರದುರ್ಗ ರಸ್ತೆ, ಬೆಂಗಳೂ ರು ರಸ್ತೆ ಸೇರಿ ದಂತೆ ಮುಖ್ಯರಸ್ತೆಗಳಿಗೆ ಹೊಂದಿಕೊಂಡಿ ರುವ,ಪಾದಚಾರಿ ಗಳ ಸುರ ಕ್ಷತೆಗಾಗಿ ನಿರ್ಮಿಸಿರುವ ಫುಟ್ಬಾತುಗಳ ಮೇಲೆ ಪ್ರಭಾವಿಗಳು, ಅಕ್ರಮ ಪೆಟ್ಟಿಗೆ ಅಂಗಡಿಗಳನ್ನು ಇಟ್ಟು, ಸಾರ್ವಜನಿಕ ಸುಗಮವಾಗಿ, ಓಡಾಡಲು ಬಾರದಂತೆ ತೊಂದರೆ ಪಡುತ್ತಿದ್ದಾರೆ.
ಈ ಕುರಿತು ನಗರಸಭೆ ಗೆ ಅನೇಕ ಬಾರಿ ದೂರು ನೀಡಿದರು ಸಹ, ಈ ಅಕ್ರಮ ಪೆಟ್ಟಿಗೆ ಅಂಗಡಿಗಳನ್ನು ತೆರೆವುಗೊಳಿ ಸಿಲ್ಲ. ಹಾಗೂ ದಿವಲಕ್ಷ ಮಾಡುತ್ತಿರುವುದು ನೋಡಿ ದರೆ, ಈ ಅಕ್ರಮ ಪೆಟ್ಟಿಗೆ ಅಂಗಡಿಗಳು ಪ್ರಭಾವಿಗಳಿಗೆ ಸೇರಿದೆ ಎಂದು ಗೊತ್ತಾಗುತ್ತೆ.ಜೊತೆಗೆ ಇನ್ನೊಂದು ಆಶ್ಚರ್ಯ ವೆಂದರೆ ಈ ಅಕ್ರಮ ಪೆಟ್ಟಿಗೆ ಅಂಗಡಿಗಳಿಗೆ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕವನ್ನು ಕೊಟ್ಟಿರು ವುದು, ಇಲಾಖೆ ಅಧಿಕಾರಿಗ ಳ ಭ್ರಷ್ಟಾಚಾರ ಎಷ್ಟು ಎಂದು ತಿಳಿಯು ತ್ತದೆ. ಒಂದು ಬಡವರ ಗುಡಿಸಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಹತ್ತಾ ರು ನಿಯಮಗ ಳನ್ನು,ಏನ್ ಒ ಸಿ ಕೇಳುವ ಬೆಸ್ಕಾಂ ಇಲಾಖೆಯು ಇಲ್ಲಿ ನಿಯಮಗಳು ಏಕೆ ಇವರಿಗೆ ವಿಧಿಸಿ ಲ್ಲ ಎಂದು ಅಧಿಕಾರಿಗಳ ಪ್ರಾಮಾಣಿ ಕತೆಯನ್ನು ಪ್ರಶ್ನಿಸಿದರು.
ಆದ್ದರಿಂದ ದಯಮಾಡಿ ಈ ಅಕ್ರಮ ಪೆಟ್ಟಿಗೆ ಅಂಗಡಿಗ ಳನ್ನು ತೆರುಗೊಳಿ ಸಿ, ಸಾರ್ವಜನಿಕರಿಗೆ,ಸುಗಮ ಸಂಚಾ ರಕ್ಕೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ನಗರದ ಖಾಸಗಿ ಬಸ್ ನಿಲ್ದಾಣ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಇರುವುದರಿಂದ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳ ಜೊತೆ ಬರುವ ಸಂಬಂಧಿಗಳ ದ್ವಿಚಕ್ರ ವಾಹ ನಗಳ ನ್ನು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸುವುದ ರಿಂದ, ಜನರು ಹಾಗೂ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಓಡಾಡಲು ತೊಂದರೆಯಾಗುತ್ತಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆ ಮುಂದೆ ಖಾಸಗಿ ಬಸ್ಸುಗಳ ನ್ನು ನಿಲ್ಲಿಸುವುದರಿಂದ,ಆಸ್ಪತ್ರೆಗೆ ಬರುವ ಆಂಬುಲೆನ್ಸ್ ವಾಹನಗಳ ಪ್ರವೇಶಕ್ಕೆ ತೊಂದರೆಯಾಗುತ್ತಿದೆ.
ನಗರದಲ್ಲಿ ಅತಿಯಾದ ವಾಹನ ಸಂಚಾರ ದಟ್ಟಣೆ ಯಿಂದ ಟ್ರಾಫಿಕ್ ಜಾಮ್ ಪ್ರಕರಣಗಳು ಹೆಚ್ಚಾಗುತ್ತಿ ದ್ದು. ಪೋಲಿಸ್ ಇಲಾಖೆ ಇತ್ತ ಗಮನಹರಿಸ ಬೇಕು, ಎಂದು ಸಾರ್ವಜನಿಕ ರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.ಈ ಎಲ್ಲಾ ಸಾರ್ವಜನಿಕ ದೂರುಗಳ ನ್ನು ಸ್ವೀಕರಿಸಿ, ಸಾ ರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾ ರಿ ಟಿ.ವೆಂಕಟೇಶ್.
ಸ್ಥಳದಲ್ಲಿ ಉಪಸ್ಥಿತರಿದ್ದ,ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಅವರಿಗೆ ಮುಖ್ಯರಸ್ತೆಗಳಲ್ಲಿ ಹಾಗೂ ಆಸ್ಪತ್ರೆ ಆವರಣದಲ್ಲಿ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನ ಗಳನ್ನು ತೆರವುಗೊಳಿಸಲು,ಮತ್ತು ವಾಹನ ಟ್ರಾ ಫಿಕ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗಳನ್ನು,ಹಾಗೂ ಫುಟ್ಬಾತ್ ಮೇಲೆ ಇಟ್ಟಿರುವ ಅಕ್ರಮ ಪೆಟ್ಟಿಗೆ ಅಂಗಡಿ ಗಳನ್ನು ತೆರೆವುಗೊಳಿಸಲು ಸೂಚನೆ ನೀಡಿ.ಮುಂದಿನ ವಾರ ನಾನು ನಗರಸಭೆ ಕಚೇರಿಯಲ್ಲಿ ಸಭೆ ಯನ್ನು ಕರೆಯುತ್ತೇನೆ. ಆ ವೇಳೆ ಸಾರ್ವಜನಿಕರಿಂದ ಪದೇ ಪದೇ ಈ ವಿಚಾರದ ದೂರುಗಳು ಬರಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಬಳ್ಳಾರಿ ರಸ್ತೆಯ ಪೆಟ್ರೋಲ್ ಬ್ಯಾಂಕ್ ಬಳಿ ಮಳೆನೀರು ಹಾಗೂ ತ್ಯಾಜ್ಯ ನೀರು ನಿಂತು ಮಲಿನ ಗೊಂಡು. ಸಾಂಕ್ರಾಮಿಕ ರೋಗಗಳು ಉತ್ಪತ್ತಿ ಆಗುತ್ತವೆ ಎಂದು ಸಾರ್ವಜ ನಿಕರ ದೂರಿನ ಮೇರೆಗೆ, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ. ಇಲ್ಲಿ ನೀರು ನಿಲ್ಲದೆ ಹರಿಯುವಂತೆ, ಒಂದು ಕ್ರಿಯಾಯೋಜನೆ ರೂಪಿಸಿ, ಕಳಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗೆ ಚಳ್ಳಕೆರೆ ನಗರದಲ್ಲಿ ಹೊಸ ಬಡಾವಣೆಗಳ ಮುಂಜೂರಾತಿಗೆ ಬರುತ್ತಿದ್ದು. ನಗರಕ್ಕೆ ಹೊಸ ಬಡಾವ ಣೆಗಳ ಅಗತ್ಯವಿದೆಯೇ? ಭೂ ಪರಿವರ್ತನೆ ಮಾಡಿ ಕೊಂಡು, ನಿವೇಶನ ಮಾಡುವಾಗ ಅಗತ್ಯಮೂಲಭೂತ ಸೌಲಭ್ಯಗಳನ್ನು ನಿರ್ಮಿಸುತ್ತಾರೆಯೋ? ಎಂದು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರೆಹಾನ್ ಪಾಷಾ, ಬಿ ವೈ ಎಸ್ ಪಿ ರಾಜಣ್ಣ,ನಗರಸಭೆ ಪೌರಾಯುಕ್ತ ಚಂದ್ರ ಪ್ಪ,ಜೆ.ಇ ವಿನಯ್, ನಾಮ ನಿರ್ದೇಶನ ಸದಸ್ಯ ಭದ್ರಿ, ನೇತಾಜಿ ಪ್ರಸನ್ನ, ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಂತೆ ಇತರರು ಉಪಸ್ಥಿತರಿದ್ದರು.