ಬಾಗಲಕೋಟೆ: ತಿರುಪತಿ ತಿರುಮಲದ ಲಡ್ಡು ತಯಾರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಿದೇಶಿ ಪಾದ್ರಿಗಳ ಕೈವಾಡವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಆಂಧ್ರಪ್ರದಶದ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಅವರು ಮತಾಂತರಗೊಂಡಿರುವ ಕ್ರಿಸ್ಟಿಯನ್ನರು ಹಾಗಾಗಿ ಲಡ್ಡು ತಯಾರಿಕೆ ವಿವಾದ ಹಿಂದೆ ವಿದೇಶಿ ಕ್ರಿಶ್ಚಿಯನ್ ಪಾದ್ರಿಗಳ ಕೈವಾಡವಿರಬಹುದು ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಹೇಳಿರುವ ಅವರು, ಜಗನ್ ಮೋಹನ್ ರೆಡ್ಡಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಹ ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ತಿರುಪತಿ ತಿರುಮಲದಲ್ಲಿ ತಯಾರಿಸುವ ಲಡ್ಡುಗೆ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ಆರೋಪಕ್ಕೆ ಸಂಬಮಧಫಟ್ಟಂತೆ ಪ್ರಾಣಿಗಳ ಕೊಬ್ಬು ಲಡ್ಡು ತಯಾರಿಕೆಗೆ ಬೆರೆಸಿರುವುದು ಲ್ಯಾಬ್ ಪರೀಕ್ಷೆಯಿಂದ ದೃಢಪಟ್ಟಿದೆ ಎಂಬ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೂ ಆದೇಶಸಿಸಲಾಗಿದೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಹ ಹೇಳಿಕೆ ನೀಡಿ ಲಡ್ಡು ತಯಾರಿಕ ವಿವಾದವನ್ನು ಸಮಗ್ರ ಪರೀಕ್ಷೆಗೊಳಪಡಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.