ಅಕ್ರಮ ಹಾಗೂ ಅವ್ಯವಹಾರ ಕುರಿತು ಸುದ್ದಿಯನ್ನು ಪ್ರಕಟಣೆಗೆ ಸಂಬಂಧಿಸಿದಂತೆ ಕಳೆದ 2025ರ ಜನವರಿ 6 ರಂದು ಸೋಮವಾರ ಹಾಡು ಹಗಲ್ಲೇ ಏಕಾಏಕಿ ಗಡಿನಾಡು ಮಿತ್ರ ಪತ್ರಿಕೆ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ನೀಡಿದ್ದ ಮಧ್ಯಂತರ ಜಾಮೀನು ಮಂಜೂರಾತಿಯನ್ನು ಮಂಗಳವಾರ ಮಧುಗಿರಿ ನ್ಯಾಯಾಲಯ ರದ್ದುಪಡಿಸಿ ಅದೇಶ ನೀಡಿದೆ.
ಸುದ್ದಿ ವಿಚಾರ ಹಿನ್ನೆಲೆಯಲ್ಲಿ ಕಳೆದ ಜ. 6 ರಂದು ಪಟ್ಟಣದಲ್ಲಿ ಸ್ಥಳೀಯ ಪತ್ರಿಕೆಯ ಸಂಪಾದಕರಾದ ರಾಮಾಂಜಿನಪ್ಪ ಮೇಲೆ ನಾಲ್ಕು ಮಂದಿ ದಾಳಿ ನಡೆಸಿ ಹಿಗ್ಗಾಮುಗ್ಗ ಥಳಿಸಿ ಸಾರ್ವಜನಿಕವಾಗಿ ಅವಮಾನ ಪಡಿಸಿದ್ದರು. ಘಟನೆಗೆ ಸಂಬಂಧಪಟ್ಟಂತೆ ಇಲ್ಲಿನ ಪತ್ರಕರ್ತರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆ ವೇಳೆ ಘಟನೆ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇತರ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಅರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಘಟನೆಯ ದಿನದಂದೇ ಸ್ಥಳೀಯ ಪತ್ರಿಕೆ ಸಂಪಾದಕರ ಮೇಲೆ ನಡೆದ ಘಟನೆ ಕುರಿತು ನ್ಯಾಯ ಕಲ್ಪಿಸಬೇಕೆಂದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಘಟನೆಯ ವಿಡಿಯೋ ಹಾಗೂ ಸಾರ್ವಜನಿಕ ಸಾಕ್ಷ್ಯಧಾರಗಳ ಮೇಲೆ ಸಂತ್ರಸ್ಥ ಹಾಗೂ ಸ್ಥಳೀಯ ಪತ್ರಿಕೆ ಸಂಪಾದಕ ರಾಮಾಂಜಿನಪ್ಪ ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಕ್ರಮ ಜರಿಗಿಸಿದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಜರಿಗಿಸಿ ಜೈಲಿಗೆ ಕಳುಹಿಸುವ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂಬಂಧ ಘಟನೆಯ ನಾಲ್ಕನೇಯ ದಿನದ ಬಳಿಕ ಮಧ್ಯಂತರ ಜಮೀನಿನ ಮೇಲೆ ಆರೋಪಿಗಳು ಹೊರಬಂದಿದ್ದರು.
ಘಟನೆ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಮಧುಗಿರಿ ನ್ಯಾಯಾಲಯ ಘಟನೆಯಲ್ಲಿ ಭಾಗಿಯಾಗಿದ್ದ ಅಪ್ಪಾಜಿಹಳ್ಳಿ ನಾರಾಯಣ ರೆಡ್ಡಿ, ಬಾಬುರೆಡ್ಡಿ, ರೂಪಾ, ಧನಲಕ್ಷ್ಮೀ, ಲಕ್ಷ್ಮೀದೇವಿ, ತಿಮ್ಮರೆಡ್ಡಿ, ಇವರಿಗೆ ನೀಡಿದ್ದ ಮಧ್ಯಂತರ ಜಮೀನು ರದ್ದು ಪಡಿಸಿರುವುದಾಗಿ ಮಧುಗಿರಿ ನ್ಯಾಯಾಲಯದಿಂದ ಜಾರಿಪಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.ಮದ್ಯಂತರ ಜಾಮೀನು ಮೇಲೆ ಹೊರಬಂದ್ದಿದ್ದ ಅಪ್ಪಾಜಿಹಳ್ಳಿ ನಾರಾಯಣ ರೆಡ್ಡಿ, ಬಿನ್ ಬಾಬುರೆಡ್ಡಿ, ಬಾಬುರೆಡ್ಡಿ ಬಿನ್ ಗೋಪಾಲರೆಡ್ಡಿ, ರೂಪಾ, ಧನಲಕ್ಷ್ಮೀ, ಲಕ್ಷ್ಮೀದೇವಿ, ತಿಮ್ಮರೆಡ್ಡಿ, ಇವರಿಗೆ ಮಧುಗಿರಿ ಘನ ನ್ಯಾಯಾಲಯದ ಮಧ್ಯತರ ಜಮೀನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘ ಹಾಗೂ ಸ್ಥಳಿಯ ಪತ್ರಕರ್ತರು ಹಾಗೂ ಸಂಘ-ಸಂಸ್ಥೆಗಳು ಆರೋಪಿಗಳನ್ನು ಪೊಲೀಸರು ಬಂದಿಸಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ.