ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ನಿಶ್ಚಿತಾರ್ಥ, ವಿವಾಹದ ಬಗ್ಗೆ ಇತ್ತೀಚೆಗಷ್ಟೇ ಅವರ ತಂದೆ ಘೋಷಿಸಿದ್ದರು. ಇದೀಗ 3 ದಿನಗಳ ಹಿಂದೆ ಅವರ ವಿವಾಹ ಕಾರ್ಯಕ್ರಮಗಳು ನೆರವೇರಿವೆ. ಪಿವಿ ಸಿಂಧು ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಇದೀಗ ಲವ್ ಕಂ ಅರೇಂಜ್ಡ್ ಮ್ಯಾರೇಜ್ ಎಂಬುದನ್ನು ಸ್ವತಃ ಪಿವಿ ಸಿಂಧು ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಇವರಿಬ್ಬರು ಮೊದಲು ಭೇಟಿ ಆಗಿದ್ದು ಯಾವಾಗ? ಹೀಗಿದೆ ನೋಡಿ ಇಬ್ಬರ ಪ್ರೇಮ ಕಹಾನಿ!
ಭಾರತದ ಸರ್ವಶ್ರೇಷ್ಠ ಬ್ಯಾಡ್ಮಿಂಟನ್ ಪಟು, ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ವಿವಾಹವನ್ನು ತಂದೆಯೇ ಮದುವೆಯನ್ನು ಘೋಷಣೆ ಮಾಡಿದಾಗ ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದೇ ಎಲ್ಲರೂ ಎಣಿಸಿದ್ದರು. ಮದುವೆ ಮುಗಿದು 2 ದಿನಗಳ ಬಳಿಕ ಸ್ವತಃ ಪಿವಿ ಸಿಂಧು ಅವರೇ ತಮ್ಮ ಮತ್ತು ತಮ್ಮ ಪತಿ ವೆಂಕಟದತ್ತ ಸಾಯಿ ಅವರ ಮೊದಲ ಭೇಟಿ, ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಇದೀಗ ಇದೊಂದು ಲವ್ ಕಂ ಎರೇಂಜ್ಡ್ ಮ್ಯಾರೇಜ್ ಎಂಬುದು ತಿಳಿದು ಬಂದಿದೆ.