ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತಮ್ಮ ತರಬೇತುದಾರನನ್ನು ಬದಲಾಯಿಸಿ ಕೊಂಡಿದ್ದಾರೆ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಸಿಂಧು ಅವರಿಗೆ ಮುಂದಿನ ಪ್ರಮುಖ ಟೂರ್ನಿಗಳಲ್ಲಿ ಅನೂಪ್ ಮಾರ್ಗ ದರ್ಶನ ನೀಡಲಿದ್ದಾರೆ. ಸಿಂಧುಗೆ ಕೋಚ್ ಆಗಿದ್ದ ಇಂಡೋ ನೇಷ್ಯಾದ ಅಗಸ್ ದ್ವಿ ಸಂಟೊಸೊ ಬದಲಿಗೆ ಅನೂಪ್ ತಾತ್ಕಾಲಿಕ ಕೋಚ್ ಆಗಿರಲಿದ್ದಾರೆ. ಖಾಯಂ ಕೋಚ್ಗಾಗಿ ಹುಡುಕಾಡುತ್ತಿದ್ದೇವೆ ಎಂದು ಸಿಂಧು ತಂದೆ ಪಿ.ವಿ. ರಾಮಣ್ಣ ಮಾಹಿತಿ ನೀಡಿದ್ದಾರೆ.