ಬೆಂಗಳೂರು: ಮಕ್ಕಳ ಕೈಯಲ್ಲಿ ಪೆನ್ ಬದಲು ತಲ್ವಾರ್ ಕೊಡಿ ಎಂಬ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾವ ಸೆಕ್ಷನ್ನಡಿ ಕ್ರಮ ಕೈಗೊಳ್ಳಬೇಕೋ ನೋಡೋಣ ಎಂದು ಹೇಳಿದ್ದಾರೆ.
ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಧರ್ಮಗುರುಗಳು ಧರ್ಮವಾಗಿ ನಡೆದುಕೊಳ್ಳಬೇಕು. ಧರ್ಮ ಪ್ರಚಾರಕರಾಗಿ ಪ್ರಚೋಧನೆ ನೀಡಬಾರದು. ನಾವುಗಳು ಪೂಜನೀಯ ಭಾವದಿಂದ ಅವರ ಕಾಲಿಗೆ ಬೀಳ್ತೇವೆ. ಆದರೆ ಅವರು ತಲ್ವಾರ್ ಕೊಡಿ ಎನ್ನುವುದು ತರವಲ್ಲ ಎಂದಿದ್ದಾರೆ.