ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಗುರುಪ್ರಸಾದ್ ಬಳಸಿದ್ದ ಮೊಬೈಲ್ಗಳ ಡೇಟಾ ದೊರೆಯಲಿದೆ.
ನವೆಂಬರ್ ೦೩ ರಂದು ಗುರುಪ್ರಸಾದ್ ನ್ಯೂ ಹೆವೆನ್ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಗುರುಪ್ರಸಾದ್ ಸಾವಿನ ಸಂಬAಧ ತನಿಖೆ ನಡೆಸುವಂತೆ ಎರಡನೇ ಪತ್ನಿ ಸುಮಿತ್ರ ಮಾದನಾಯಕನಹಳ್ಳಿ
ಠಾಣೆಗೆ ದೂರು ನೀಡಿದ್ದರು.
ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದ ಫ್ಲಾಟ್ನಲ್ಲಿ ಪೊಲೀಸರು ನಾಲ್ಕು ಮೊಬೈಲ್ ಸೀಜ್ ಮಾಡಿದ್ದರು.
ನಾಲ್ಕು ಮೊಬೈಲನ್ನು ಎಫ್.ಎಸ್.ಎಲ್ ಗೆ ಕಳುಹಿಸಲಾಗಿತ್ತು. ಇಂದು ಗುರುಪ್ರಸಾದ್ ಮೊಬೈಲ್ ಡೇಟಾ ಪೊಲೀಸರ ಕೈ ಸೇರಲಿದೆ.
ಕಳೆದ ಕೆಲ ತಿಂಗಳಿನಿAದ ಯಾರ ಜೊತೆಯೂ ಪೋನ್ನಲ್ಲಿ ಮಾತಾಡದೇ ವೈ ಫೈ ಬಳಸಿ ವಾಟ್ಸಾಪ್ ಕಾಲ್ನಲ್ಲಿ ಕೆಲವರ ಜತೆ ಗುರುಪ್ರಸಾದ್ ಮಾತುಕತೆ ನಡೆಸಿದ್ದರು.