ಬೆಂಗಳೂರು: ನವಂಬರ್ ತಿಂಗಳಲ್ಲಿ ಎಂಟು ವಿಭಾಗದ ಡೀಸಿಪಿಗಳ ಉಸ್ತುವಾರಿಯಲ್ಲಿ ಮತ್ತು ಕೇಂದ್ರ ಅಪರಾಧ ವಿಭಾಗದ ಪೆÇಲೀಸರು ರೌಡಿ ಚಟುವಟಿಕೆ, ಡ್ರಗ್ಸ್ ಮಾರಾಟ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಾಗೂ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸಿರುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದರು.
ಏನ್ ಡಿ ಪಿ ಎಕ್ಸ್ ನಡಿ 49 ಪ್ರಕರಣಗಳನ್ನು ದಾಖಲಿಸಿಕೊಂಡು ಮೂರು ಜನ ವಿದೇಶಿ ಪ್ರಜೆಗಳು ಸೇರಿದಂತೆ 74 ಮಂದಿಯನ್ನು ಬಂಧಿಸಿರುತ್ತೇವೆ ಎಂದು ತಿಳಿಸಿದರು.ಗಾಂಜಾ, ಕೊಕ್ಕೆನ್, ಎಂಡಿಎಂಎ ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಹಾಗೂ ಇನ್ನೂ ಇತರೆ ಪ್ರಕರಣಗಳಾದ ಆರಂಸ್ ಆಕ್ಟ್, ಗ್ಯಾಂಗ್ಲಿಂಗ್ 245 ಪ್ರಕರಣಗಳನ್ನು ದಾಖಲು ಮಾಡಿ ಕೊಂಡಿರುತ್ತೇವೆ 399 ಆರೋಪಿಗಳನ್ನು ಬಂಧಿಸಿರುತ್ತೇವೆ ಎಂದು ವಿವರಿಸಿದ್ದರು.
ಇದಲ್ಲದೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 328 ವ್ಯಕ್ತಿಗಳನ್ನು ಪ್ರಾಣಿಗಳಿಗೆ ಕರೆಸಿ, 5000 ಮತ್ತು 15,000 ಬಾಂಡ್ಗಳನ್ನು ಇನ್ನು ಮುಂದೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲವೆಂದು ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ.ಇದಲ್ಲದೆ 1997ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಹ ಬಂಧಿಸಿರುತ್ತಾರೆ ಮತ್ತು 41 ಇತರೆ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಇವರನ್ನು ಸಹ ಬಂಧಿಸಿರುತ್ತೇವೆ ಎಂದು ವಿವರಿಸಿದರು.
ಹಾಗೂ ಕೆಲವು ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆದು ತಲೆಮರಿಸಿಕೊಂಡಿದ್ದ 13 ಮಂದಿಯನ್ನು ಸಹ ಬಂಧಿಸಿರುತ್ತೇವೆ ಎಂದು ತಿಳಿಸಿದರು.