ದೊಡ್ಡಬಳ್ಳಾಪುರ: ನಕಲಿ ಭೂ ಮಾಲಿಕರು ನಕಲಿ ವಂಶವೃಕ್ಷ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪೊಲೀಸ್ ಇಲಾಖೆಯ ವಸತಿ ಗೃಹಗಳಿರುವ ಜಮೀನನ್ನು ಕಬಳಿಸಲು ಭೂ ಮಾಫಿಯಾ ಮುಂದಾಗಿದೆ ಬಲಾಡ್ಯರ ಕುಮ್ಮಕ್ಕಿನಿಂದ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಆರೋಪಿಸಿದರು.
ಪೊಲೀಸ್ ಇಲಾಖೆಗೆ ಸೇರಿದ ದಾಖಲೆಗಳ ಸಮೇತ ದೂರು ನೀಡಿದರೂ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜ.26 ರಂದು ಗಣರಾಜ್ಯೋತ್ಸವ ಆಚರಣೆ ದಿನ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸರಿ ಸುಮಾರು ಆರು ದಶಕದಿಂದಲೂ ನಗರದ ಭಗತ್ಸಿಂಗ್ ಕ್ರೀಡಾಂಗಣದ ಸಮೀಪ 30ಕ್ಕೂ ಹೆಚ್ಚು ಪೊಲೀಸ್ ವಸತಿ ನಿಲಯಗಳಿದ್ದವು. ಕಟ್ಟಡ ಶಿಥಿಲಗೊಂಡಿದ್ದರಿಂದ ತೆರವು ಮಾಡಿ ಬೇರೆಡೆ ಪೊಲೀಸ್ ವಸತಿ ನಿಲಯ ನಿರ್ಮಿಸಲಾಗಿದೆ.
ಹಳೆಯ ಪೊಲೀಸ್ ವಸತಿ ನಿಲಯ ಇದ್ದ ಜಾಗದ ಪಹಣಿಯಲ್ಲಿ (ಆರ್ಟಿಸಿ) ವ್ಯಕ್ತಿಯೊಬ್ಬರ ಹೆಸರು ಸೇರಿದೆ. ನಕಲಿ ವಂಶವೃಕ್ಷ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲು ಭೂ ಮಾಫಿಯಾ ಮುಂದಾಗಿದೆ ಇದರ ಹಿಂದೆ ಬಲಾಡ್ಯರ ಕುಮ್ಮಕ್ಕು ಸಹ ಇದೆ ಅನುಮಾವಿದೆ. ಈ ಬಗ್ಗೆ ದೂರು ನೀಡಿ ನಾಲ್ಕು ತಿಂಗಳುಗಳು ಕಳೆದಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನ ಸಹ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.ಈ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಉಪಾಧ್ಯಕ್ಷ ಆರಾಧ್ಯ, ಸಂಘಟನಾ ಕಾರ್ಯದರ್ಶಿ ಅರವಿಂದ್, ನರೇಂದ್ರ, ವಾಸು, ಪುನೀತ್, ಶಿವು, ವಿನಯ್, ತಾಯೇಗೌಡ, ಪ್ರದೀಪ್,ಅಶ್ವಥನಾರಾಯಣ್ ಹಾಜರಿದ್ದರು.