ಬೆಂಗಳೂರು: ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಪದ್ಮಿನಿ ನಂದ ತಮ್ಮ ಅಹಂಕಾರ ಮತ್ತು ಅಧಿಕಾರ ಸ್ವಾರ್ಥದಿಂದ ನಡೆದುಕೊಂಡು ಸಂಘವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಘದ ಹೆಸರೇಳಿಕೊಂಡು ಬಂದರೆ ಅವರಿಗೆ ಯಾವುದೇ ಕಾರಣಕ್ಕೂ ಸಹಕಾರ ನೀಡಬಾರದು ಎಂದು ಪೋಷಕ ಕಲಾವಿದರು ಆರೋಪಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಷಕ ನಟರಾದ, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್ , ಅನಾವಶ್ಯಕವಾಗಿ ಸಂಘದ ಸದಸ್ಯರನ್ನು ನ್ಯಾಯಾಲಯಕ್ಕೆ ಎಳೆಯುವ ಕೆಲಸ ಮಾಡುತ್ತಿದ್ದಾರೆ,ನಮ್ಮ ಸಂಘಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಯಲ್ಲಿ ನಿಂತು ಮೋಸದಿಂದ ಗೆದ್ದು ಎಲ್ಲ ಪದಾಧಿಕಾರಿಗಳ ವಿರುದ್ಧ ನಿಂತು ಯಾರಾಡೊನೆ ಸಹಕರಿಸದೇ ಚರ್ಚಿಸದೇ ಎಲ್ಲ ವಿಷಯದಲ್ಲೂ ತಮ್ಮದೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾನ್ಯ ಸಭೆಯಲ್ಲಿ ಲೆಕ್ಕಪತ್ರಗಳು ಸಿಂದುಗೊಂಡಿದ್ದರೂ ಲೆಕ್ಕಪತ್ರ ತಪ್ಪಾಗಿದೆ ಎಂದು ಸುಳ್ಳು ಅಪಾದನೆ ಮಾಡಿ ಮಾಜಿ ಅಧ್ಯಕ್ಷರು ಮತ್ತು ಮಾಜಿ ಖಚಾಂಚಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿಗಳನ್ನು ಅವಮಾನಿಸಿದ್ದಾರೆ ಇವರ ವಿರುದ್ಧ ಒಕ್ಕೂಟದಲ್ಲಿ ಬೇರೆ ಬೇರೆ ಸಂಘಗಳಲ್ಲಿ ಅಪಪ್ರಚಾರ ಮಾಡಿ ಅನೇಕ ಪೋಲಿಸ್ ಠಾಣೆಗಳಲ್ಲಿ ಸುಳ್ಳು ದೂರುಗಳನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.
ಸಾಮಾನ್ಯ ಸಭೆ ಕರೆದು ಈ ವಿಷಯದ ಕುರಿತು ಚರ್ಚೆ ನಡೆಸಲು ಮುಂದಾದಾಗ ಕಾರ್ಯಕಾರಿ ಸಮಿತಿಯ ಸದಸ್ಯರ ಸುಳ್ಳು ಸಹಿಯನ್ನು ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಸಭೆ ನಡೆಸದಂತೆ ಮಾಡಿದಳು,ಜೊತೆಗೆ ರಾತೋರಾತ್ರಿ ಸಂಘದ ಕಚೇರಿಯ ಸಾಮಾಗ್ರಿಗಳನ್ನು ಎತ್ತಿಕೊಂಡು ಬದಲಾಯಿಸುವ ಕೆಲಸ ಮಾಡಿದಳು ಇದಕ್ಕೆಲ್ಲ ಕಲಾವಿದ ಕೆಂಪರಾಜು ಎಂಬುವವರು ಪ್ರಮುಖ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.ಪ್ರಸ್ತುತ ಸಂಘದ ಎಲ್ಲ ಚಟುವಟಿಕೆಗಳನ್ನು ಡಿಂಗ್ರಿ ನಾಗರಾಜ್ ಅವರಿಗೆ ವಹಿಸಿದ್ದು, ಹಂಗಾಮಿ ಅಧ್ಯಕ್ಷರಾಗಿದ್ದಾರೆ ಸಂಘ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ ಆದರೆ ಹಾಲಿ ಅಧ್ಯಕ್ಷರ ಮೇಲೆ ಸಿಸಿಬಿಯಲ್ಲಿ ದೂರು ಕೊಡುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದರು.