ಯಲಹಂಕ: ತಮ್ಮ ಜೀವವನ್ನು ಲೆಕ್ಕಿಸದೆ ಅಗಲಿರುಳು ನಗರದ ಸ್ವಚ್ಛತೆಗಾಗಿ,ನಿವಾಸಿಗಳ ಆರೋಗ್ಯಕ್ಕಾಗಿ, ಸೇವೆ ಸಲ್ಲಿಸುವ ಪೌರಕಾರ್ಮಿಕರನ್ನು ದೇಶದ ಸೇನಾ ನಿಗಳು ಎಂದರೆ ತಪ್ಪಾಗಲಾರದು ಎಂದು ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಮಂಜುನಾಥ್ ಮಾದನಾಯಕನಹಳ್ಳಿ ನಗರಸಭೆ ವತಿಯಿಂದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆ.23 ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ವಿಜೇತರಾದ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೆ ವೇಳೆ ಪೌರಕಾರ್ಮಿಕರ ಕುಂದು ಕೊರತೆ ಆಲಿಸಿದರು. ಮಾದನಾಯಕನ ಹಳ್ಳಿ ನಗರಸಭೆ ಪೌರಕಾರ್ಮಿಕರು ಪ್ರಮುಖವಾಗಿ ಸಂಕಷ್ಟ ಬತ್ಯೆ, ವಿಶ್ರಾಂತಿ ಭವನ, ಸಹೋದ್ಯೋಗಿಗಳು ಮರಣ ಹೊಂದಿದ ದಿನ ರಜೆ ಘೋಷಣೆ ಯಂಥ ಬೇಡಿಕೆಗಳನ್ನು ಮುಂದಿಟ್ಟಿದ್ದು ಬೇಡಿಕೆಗಳನ್ನು ಬಗೆಹರಿಸುವ ಬಗ್ಗೆ ಆಯುಕ್ತರು ಅಭಯ ನೀಡಿದ್ದು ಪೌರಕಾರ್ಮಿಕರ ಮುಖದಲ್ಲಿ ಸಂತಸ ತರಿಸಿತ್ತು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಮಂಜುನಾಥ್, ಲೆಕ್ಕಾಧಿಕಾರಿ ಬ್ರಿಜೇಶ್, ರವಿಕುಮಾರ್,ಪುನೀತ್, ಕಛೇರಿ ವ್ಯವಸ್ಥಾಪಕ ರವೀಂದ್ರ, ಆರೋಗ್ಯ ನಿರೀಕ್ಷಕರುಗಳಾದ ಪ್ರಭಾವತಿ, ಮಂಜುಳಾ, ತೃಪ್ತಿ, ಸೇರಿದಂತೆ ನಗರ ಸಭೆ ಅಧಿಕಾರಿಗಳು ಪೌರಕಾರ್ಮಿಕರು ಉಪಸ್ಥಿತರಿದ್ದರು.